ಸುಧಾಮೂರ್ತಿ ಇನ್ಫೋಸಿಸ್‌ಗೆ ಸೇರಲು ನಾನು ಒಪ್ಪಿರಲಿಲ್ಲ: ಕಾರಣ ಬಿಚ್ಚಿಟ್ಟ ನಾರಾಯಣ ಮೂರ್ತಿ

Public TV
2 Min Read
narayan murthy and sudhamurthy 2

ನವದೆಹಲಿ: ಇನ್ಫೋಸಿಸ್ (Infosys) ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರು ಸುಧಾಮೂರ್ತಿ (Sudha Murty) ಅವರನ್ನು ಕಂಪನಿಯಿಂದ ಹೊರಗಿಟ್ಟು ತಾವು ಮಾಡಿದ್ದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರು ತನಗಿಂತ ಹೆಚ್ಚು ಅರ್ಹತೆ ಹೊಂದಿದ್ದಾರೆ ಎಂಬ ವಿಚಾರವನ್ನು ಸಂದರ್ಶನವೊಂದರಲ್ಲಿ ನಾರಾಯಣ ಮುರ್ತಿ ಹೇಳಿಕೊಂಡಿದ್ದಾರೆ.

ಉತ್ತಮ ಕಾರ್ಪೊರೇಟ್ ಆಡಳಿತವು ಕುಟುಂಬವನ್ನು ಒಳಗೊಳ್ಳುವುದಿಲ್ಲ ಎಂದು ನಾನು ಭಾವಿಸಿದ್ದೆ. ಏಕೆಂದರೆ ಆ ದಿನಗಳಲ್ಲಿ ಮಕ್ಕಳು ಕಂಪನಿಗೆ ಬಂದು ಕಂಪನಿ ನಡೆಸುತ್ತಿದ್ದರು. ಇದರಿಂದ ಸಾಕಷ್ಟು ಕಾನೂನುಗಳ ಉಲ್ಲಂಘನೆಯಾಗುತ್ತಿತ್ತು ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ. ಇದನ್ನೂ ಓದಿ: ನಾನು 40 ವರ್ಷಗಳ ಕಾಲ ವಾರಕ್ಕೆ 85-90 ಗಂಟೆ ಕೆಲಸ ಮಾಡಿದ್ದೆ, ನನ್ನ ಶ್ರಮ ವ್ಯರ್ಥವಾಗಲಿಲ್ಲ: ನಾರಾಯಣ ಮೂರ್ತಿ

Infosys 2

ಕೆಲವು ವರ್ಷಗಳ ಹಿಂದೆ ನಾನು ಒಂದಿಬ್ಬರು ತತ್ವಶಾಸ್ತ್ರದ ಪ್ರಾಧ್ಯಾಪಕರೊಂದಿಗೆ ಚರ್ಚೆ ನಡೆಸಿದ್ದೆ. ನೀವು ತಪ್ಪು ಮಾಡುತ್ತಿದ್ದೀರಿ ಎಂದು ಅವರು ನನಗೆ ಹೇಳಿದ್ದರು. ನಿಮ್ಮ ಹೆಂಡತಿಯಾಗಲಿ, ನಿಮ್ಮ ಮಗನಾಗಲಿ ಅಥವಾ ನಿಮ್ಮ ಮಗಳಾಗಲಿ ಇತರ ವ್ಯಕ್ತಿಗಳಿಗೆ ಅರ್ಹತೆ ಇದೆ ಎಂದು ಅವರು ಹೇಳಿದ್ದರು. ಕುಟುಂಬದ ಸದಸ್ಯರನ್ನು ಕಂಪನಿಯ ಭಾಗವಾಗದಂತೆ ತಡೆಯಲು ನಿಮಗೆ ಯಾವುದೇ ಹಕ್ಕಿಲ್ಲ ಎಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಲೇಖಕಿಯಾಗಿರುವ ಸುಧಾ ಮೂರ್ತಿ ಅವರು ತಮ್ಮ ಪತಿಗೆ ಕಂಪನಿಯನ್ನು ಪ್ರಾರಂಭಿಸಲು 10,000 ರೂ. ನೀಡಿದಾಗ ಇನ್ಫೋಸಿಸ್‌ನ ಮೊದಲ ಹೂಡಿಕೆದಾರರಲ್ಲಿ ಒಬ್ಬರಾಗಿದ್ದರು. ‘10,000 ರೂ. ನಂತರ ಶತಕೋಟಿ ಡಾಲರ್ ಆಗುತ್ತದೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಬಹುಶಃ ನಾನು ಭಾರತದಲ್ಲಿ ಉತ್ತಮ ಹೂಡಿಕೆದಾರನಾಗಿದ್ದೇನೆ’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯಾವುದನ್ನೂ ಉಚಿತವಾಗಿ ನೀಡಬಾರದು: ಇನ್ಫಿ ನಾರಾಯಣ ಮೂರ್ತಿ

Infosys Narayana Murthy

ತಾನು ಕಂಪನಿಗೆ ಸೇರಬಾರದು ಎಂಬ ಪತಿಯ ಕೋರಿಕೆಯ ಮೇರೆಗೆ ಸುಧಾ ಮೂರ್ತಿ ಅವರು ಒಪ್ಪಿಕೊಂಡಿದ್ದರು. ಬಾಹ್ಯವಾಗಿ ಪತಿಯ ನಿಲುವಿಗೆ ಒಪ್ಪಿದ್ದರೂ, ಆಂತರ್ಯದಲ್ಲಿ ಸುಧಾ ಮೂರ್ತಿ ಅವರಿಗೆ ಕೆಲಸ ಮಾಡುವ ಆಸೆ ಹೊಂದಿದ್ದರು.

ನೀನು ಸೇರಿದರೆ ನಾನು ಡ್ರಾಪ್ ಮಾಡುತ್ತೇನೆ ಎಂದು ನಾರಾಯಣ ಮೂರ್ತಿ ಅವರು ಹೇಳಿದ್ದರು. ಮೂರ್ತಿ ಅವರು ಒಮ್ಮೆ ನಿರ್ಧಾರ ತೆಗೆದುಕೊಂಡರೆ ಸರಿಯೋ ತಪ್ಪೋ, ಅದಕ್ಕೆ ಬದ್ಧರಾಗುತ್ತಾರೆ ಎಂದು ಸುಧಾ ಮೂರ್ತಿ ಅವರು ಸಹ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾರಾಯಣ ಮೂರ್ತಿ ವಾರಕ್ಕೆ 80 ರಿಂದ 90 ಗಂಟೆ ಕೆಲಸ ಮಾಡಿದ್ದಾರೆ : ಪತಿಯ ಸಲಹೆಗೆ ಸುಧಾ ಮೂರ್ತಿ ಸಮರ್ಥನೆ

Share This Article