ಮಂಡ್ಯ: ಗೊಂದಲ ಸೃಷ್ಟಿಸಿ ಸರ್ಕಾರಕ್ಕೆ ಟೆನ್ಷನ್ ಕೊಡೋಣ ಅಂತ ಅಂದುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ನಾರಾಯಣಗೌಡರು ಕಿಡಿಕಾರಿದರು.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಿಂದ ರಾಜ್ಯದಲ್ಲಿ ಸಂಭವಿಸುತ್ತಿರುವ ಗೊಂದಲ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸಿಗರು ಹಠ ಮಾಡ್ತಿದ್ದಾರೆ. ಪಾದಯಾತ್ರೆಗೆ ಹೊರಟ್ಟಿಲ್ಲ, ಅರೆಸ್ಟ್ ಮಾಡ್ಲಿ ಅಂತ ಕಾಯುತ್ತಿದ್ದಾರೆ. ಅರೆಸ್ಟ್ ಮಾಡಿದ್ರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಿಸೋದಕ್ಕೆ ಪ್ಲಾನ್ ಮಾಡಿದ್ದಾರೆ. ಗೊಂದಲ ಸೃಷ್ಟಿ ಸರ್ಕಾರಕ್ಕೆ ಟೆನ್ಷನ್ ಕೊಡೋಣ ಅಂತ ಅಂದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೋವಿಡ್ ನಿಯಮ ಉಲ್ಲಂಘನೆ – ಪ್ರಭು ಚವ್ಹಾಣ್ ವಿರುದ್ಧ ದೂರು
ಈ ಬಗ್ಗೆ ಸಿಎಂ ಬೊಮ್ಮಾಯಿ ಬುದ್ಧಿವಂತಿಕೆಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಪಾದಯಾತ್ರೆಯಿಂದ ನಮ್ಮ ಪಾರ್ಟಿ, ಸರ್ಕಾರಕ್ಕೆ ಏನೂ ಎಫೆಕ್ಟ್ ಆಗಲ್ಲ. ಪಾದಯಾತ್ರೆ ಅಗತ್ಯ ಇಲ್ಲ ಅನ್ನೋದು ರಾಜ್ಯದ ಜನರಿಗೆ ತಿಳಿದಿದೆ. ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಎಲ್ಲರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಕೆಲವರು ಲಸಿಕೆ ತೆಗೆದುಕೊಳ್ಳದೇ ಇರುವವರು ಇರುತ್ತಾರೆ. ಅಂತವರೆಗೆ ತೊಂದರೆ ಆಗುತ್ತೆ ಎಂದು ತಿಳಿಸಿದರು.
ಮತ್ತೆ ಜೈಲಿಗೆ ಕಳುಹಿಸಲು ಪ್ಲಾನ್ ಮಾಡ್ತಿದ್ದಾರೆ ಎಂದು ಡಿಕೆಶಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಯಾತಕ್ಕಾಗಿ ಈ ರೀತಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಅಂತ ನಮಗೂ ಅರ್ಥ ಆಗಲಿಲ್ಲ. ಅರೆಸ್ಟ್ ಮಾಡೋದಾಗಿದ್ರೆ ಒಂದು ನಿಮುಷದಲ್ಲಿ ಮಾಡಬಹುದಾಗಿತ್ತು. ಇದು ಗೊಂದಲ ಸೃಷ್ಟಿಸುವ ಸಂದರ್ಭವಲ್ಲ. ಎಷ್ಟು ದಿನ ಪಾದಯಾತ್ರೆ ಮಾಡೋದಕ್ಕೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ನಾಲ್ಕು ದಿನದಲ್ಲಿ ತಣ್ಣಗೆ ಆಗುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್