ಮಂಡ್ಯ: ನಾನು ಈಗಾಗಲೇ ಶಿವಮೊಗ್ಗದಲ್ಲಿ (Shivamogga) ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಈಗ ಮಂಡ್ಯ (Mandya) ಉಸ್ತುವಾರಿ ಕೊಟ್ಟರೇ ಒಪ್ಪಿಕೊಳ್ಳಲ್ಲ ಎಂದು ಸಚಿವ ನಾರಾಯಣ ಗೌಡ (Narayana Gowda) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಶಿವಮೊಗ್ಗದಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡ್ತಿದ್ದೇನೆ. ಅಲ್ಲಿ ಅರ್ಧ ಬಿಟ್ಟು, ಇಲ್ಲಿ ಅರ್ಧ ಬಿಟ್ಟು ಕೆಲಸ ಮಾಡುವುದು ಕಷ್ಟ. ಮೂರು ಮೂರು ತಿಂಗಳಿಗೆ ಬದಲಾವಣೆ ಮಾಡಿದ್ರೆ ತೆಗೆದುಕೊಳ್ಳುವುದಕ್ಕೆ ಆಗುತ್ತಾ? ಅಶ್ವಥ್ ನಾರಾಯಣ್, ಅಶೋಕ್ (R Ashok), ಗೋಪಾಲಯ್ಯ (K Gopalaiah) ಮೂವರಲ್ಲಿ ಯಾರಾದ್ರು ಬರಲಿ. ಅದು ಮುಖ್ಯಮಂತ್ರಿಗೆ ಬಿಟ್ಟಂತಹದ್ದು ಎಂದು ಹೇಳಿದರು.
Advertisement
Advertisement
ಉಸ್ತುವಾರಿ ಪಡೆಯಲು ಯಾರು ಒಪ್ಪುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಶೋಕ್, ಅಶ್ವಥ್ ನಾರಾಯಣ್, ಕೆ.ಗೋಪಾಲಯ್ಯ ಭದ್ರಕೋಟೆಯಲ್ಲಿದ್ದಾರೆ. ಅವರು ಚುನಾವಣೆ ಗೆಲ್ಲುವುದಕ್ಕೆ ತೊಂದರೆ ಇಲ್ಲ. ಅವರಲ್ಲಿ ಯಾರಿಗಾದ್ರು ಒಬ್ಬರಿಗೆ ಜವಾಬ್ದಾರಿ ಕೊಡಲಿ. ನಾವು ಅವರ ಜೊತೆ ಇರ್ತೀನಿ ಎಂದರು. ಇದನ್ನೂ ಓದಿ: ಕಲುಷಿತ ನೀರಿಗೆ ಮೂವರು ಬಲಿ ಪ್ರಕರಣ – ಲೋಕಾಯುಕ್ತದಲ್ಲಿ ಸ್ವಯಂ ಪ್ರೇರಿತ ದೂರು ದಾಖಲು
Advertisement
Advertisement
ಗೋಪಾಲಯ್ಯಗೆ ಜವಾಬ್ದಾರಿ ಕೊಟ್ಟಾಗ ನಾನು ಅವರ ಜೊತೆ ನಿಂತು ಓಡಾಡಿದ್ದೀನಿ. ಮುಂದೆಯೂ ಉಸ್ತುವಾರಿಯಾದವರಿಗೆ ಕೈ ಜೋಡಿಸ್ತೀನಿ. ನನಗೆ ಶಿವಮೊಗ್ಗ ಉಸ್ತುವಾರಿ ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಮಂಡ್ಯ ಉಸ್ತುವಾರಿ ಗೊಂದಲದಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ: ಗೋಪಾಲಯ್ಯ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k