ಶಿವಮೊಗ್ಗ: ನಿನ್ನೆ ಭಜರಂಗಿದಳದ ಕಾರ್ಯಕರ್ತ ಹರ್ಷನನ್ನು ಕೊಲೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ 2 ದಿನ ಕಫ್ರ್ಯೂ ವಿಧಿಸಲಾಗಿತ್ತು. ಈ ನಿಷೇಧಾಜ್ಞೆ ನಡುವೆಯೂ ಶಿವಮೊಗ್ಗದಲ್ಲಿ ಬೆಳಗ್ಗಿನ ಜಾವ ಎರಡು ಆಟೋ ಮತ್ತು ಒಂದು ಬೈಕ್‍ಗೆ ಬೆಂಕಿ ಹಚ್ಚಿದ್ದಾರೆ ಎಂದು ಸಚಿವ ನಾರಾಯಣ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಂಗಾನಗರದಲ್ಲಿ ವೆಹಿಕಲ್‍ಗಳಿಗೆ ಬೆಂಕಿ ಹಾಕಿರೊ ಕಿಡಿಗೇಡಿಗಳು, ಎರಡು ಆಟೋ ಮತ್ತು ಒಂದು ಬೈಕ್‍ಗೆ ಬೆಂಕಿ ಹಾಕಿದ್ದಾರೆ. ವೆಹಿಕಲ್‍ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ರಾತ್ರಿಯಡಿ ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಪೊಲೀಸರ ಬಂದೋಬಸ್ತ್ ನಡುವೆ ಈತರಹದ ಘಟನೆ ನಡೆದಿದೆ ಎಂದಿದ್ದಾರೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ
Advertisement
Advertisement
ಶಿವಮೊಗ್ಗ ಇದೀಗ ಶಾಂತವಾಗಿದೆ. ಬೆಳಗಿನ ಜಾವ ಎರಡು ಆಟೊ ಮತ್ತು ಒಂದು ಬೈಕ್‍ಗೆ ಬೆಂಕಿ ಹಚ್ಚಿದ್ದಾರೆ. ಈ ತರಹದ ಘಟನೆ ನಡೆಯಬಾರದು
ನೈಟ್ ಕಂಟ್ರೋಲ್‍ನಲ್ಲಿತ್ತು, ಬೆಳಗಿನ ಜಾವ ಈ ರೀತಿಯ ಘಟನೆ ನಡೆದಿದೆ. ಕೊಲೆ ಪ್ರಕರಣ ಸಂಬಂಧ ಈವರೆಗೆ 12 ಜನರನ್ನ ವಶಕ್ಕೆ ಪಡೆಯಲಾಗಿದೆ . ಐವರ ಕೃತ್ಯ ಸಾಭೀತಾಗಿದ್ದು, ಉಳಿದವರ ವಿಚಾರಣೆ ನಡೆಯುತ್ತಿದೆ. ಮೆರವಣಿಗೆ ವೇಳೆ ಕಲ್ಲು ತೂರಿ ಸಾರ್ವಜನಿಕ ಆಸ್ತಿಪಾಸ್ತಿಯನ್ನ ಹಾನಿಮಾಡಿದವರ ಮೇಲೆ ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವೊಂದು ವೀಡಿಯೋಗಳು ರೆಕಾರ್ಡ್ ಆಗಿವೆ. ಪರಿಸ್ಥಿತಿ ಹತೋಟಿಗೆ ಬಂದ ನಂತರ ಅಂತವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟ್ರೆಕ್ಕಿಂಗ್ ಹೋಗಿ ಅಪಾಯಕ್ಕೆ ಸಿಲುಕಿದ್ದ ಯುವಕನ ವಿರುದ್ಧ ಕೇಸ್ ದಾಖಲು!