ಮಂಡ್ಯ: ಜೆಡಿಎಸ್‌ನಿಂದ (JDS) ಬಿಜೆಪಿಗೆ ಬಂದು ಗೆಲುವು ಪಡೆದು ಸಚಿವರಾಗಿರುವ ನಾರಾಯಣಗೌಡ (Narayana Gowda) ಮತ್ತೆ ಪಕ್ಷಾಂತರ ಮಾಡುತ್ತಾರೆ ಎಂದು ಅವರ ಆಪ್ತ ಮೂಲಗಳು ಖಚಿತವಾಗಿ ಹೇಳುತ್ತಿವೆ. ಮಾರ್ಚ್ 16ರಂದು ಕೆಆರ್‌ಪೇಟೆಯಲ್ಲಿ (K.R.Pet) ಜರುಗುವ ನಾರಾಯಣಗೌಡರ ಕನಸಿನ ಎರಡು ಸರ್ಕಾರಿ ಕಾರ್ಯಕ್ರಮವನ್ನು ಮುಗಿಸಿ ಕೈ ಪಕ್ಷ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಜೆಡಿಎಸ್‌ನಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಜೆಡಿಎಸ್‌ನಿಂದ ಬಿಜೆಪಿ (BJP) ಪಕ್ಷಾಂತರ ಮಾಡುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಕೆಡಿವಿದ ಶಾಸಕರ ಪೈಕಿ ಮಂಡ್ಯ (Mandya) ಜಿಲ್ಲೆಯ ಕೆಆರ್‌ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ ಸಹ ಒಬ್ಬರು. ಜೆಡಿಎಸ್‌ನಿಂದ ಬಿಜೆಪಿಗೆ ಹೋದ ಕಾರಣ ನಾರಾಯಣಗೌಡರ ಶಾಸಕ ಸ್ಥಾನ ಅನರ್ಹಗೊಂಡಿತು. ಬಳಿಕ ಕೆಆರ್‌ಪೇಟೆ ಉಪಚುನಾವಣೆಯಲ್ಲಿ ನಾರಾಯಣಗೌಡ ಗೆಲುವು ಪಡೆಯುವ ಮೂಲಕ ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಜೆಪಿಯ ಗೆಲುವಿಗೆ ಪಾತ್ರರಾದರು. ಬಳಿಕ ನಾರಾಯಣಗೌಡರಿಗೆ ಬಿಜೆಪಿ ಎರಡು ಖಾತೆಯನ್ನು ನೀಡುವ ಮೂಲಕ ಸಚಿವರನ್ನಾಗಿ ಮಾಡಿತು. ಇದೀಗ ನಾರಾಯಣಗೌಡರಿಗೆ ಪಕ್ಷದಲ್ಲಿ ಏನಾಯಿತು ಏನೋ ಗೊತ್ತಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್ (Congress) ಸೇರುತ್ತೇನೆ ಎನ್ನುತ್ತಿದ್ದಾರೆ ಎಂದು ಅವರ ಆಪ್ತರೇ ಹೇಳುತ್ತಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ಏನಾದ್ರೂ ಮಾತಾಡಲಿ, ಅವರಿಗೆ ದೇವರು ಒಳ್ಳೆಯದನ್ನೇ ಮಾಡಲಿ: ಸೋಮಣ್ಣ
Advertisement
Advertisement
ಸಚಿವ ನಾರಾಯಣಗೌಡ ಗುರುವಾರ ಕೆಆರ್‌ಪೇಟೆಯಲ್ಲಿ ನಡೆಯುವ ಅವರ ಕನಸಿನ ಕೂಸಾದ 15 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅತ್ಯಾಧುನಿಕ ಒಳಾಂಗಣ ಕ್ರೀಡಾಂಗಣವನ್ನು (Indoor Stadium) ಉದ್ಘಾಟನೆಗೊಳಿಸಲಿದ್ದಾರೆ. ಬಳಿಕ ಎಂಜಿನಿಯರಿಂಗ್ ಕಾಲೇಜಿಗೆ ಮಾಜಿ ಸ್ಪೀಕರ್ ದಿ.ಕೃಷ್ಣ ಅವರ ಹೆಸರಿಟ್ಟು ನಾಮಕರಣ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಚುಂಚನಗಿರಿ ಶ್ರೀಗಳಾದ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದು, ಸಚಿವ ಅಶ್ವಥ್ ನಾರಾಯಣ್ (Aahwath Narayan) ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ನಾರಾಯಣಗೌಡ ವಹಿಸಿಕೊಳ್ಳಲಿದ್ದಾರೆ. ಈ ಎರಡೂ ಕಾರ್ಯಕ್ರಮ ಮುಗಿದ ಬಳಿಕ ಅವರು ಕಾಂಗ್ರೆಸ್ ಕಡೆ ಒಲವು ತೋರಿಸುತ್ತಾರೆ ಎಂದು ಅವರ ಆಪ್ತರು ಹೇಳುತ್ತಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತ ನಿಯಂತ್ರಣಕ್ಕೆ ಹೈಟೆಕ್ ಟಚ್: ಸ್ಪೀಡ್ ಲಿಮಿಟ್ ಮೀರಿದ್ರೆ ಮನೆಗೆ ಬರುತ್ತೆ ನೋಟಿಸ್
Advertisement
Advertisement
ನಾರಾಯಣಗೌಡ ಕಾಂಗ್ರೆಸ್ ಪಕ್ಷಕ್ಕೆ ಹೋದರೆ ಯುಗಾದಿ ಒಳಗೆ ಸೇರ್ಪಡೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಅವರ ಕನಸಿನ ಯೋಜನೆಗಳು ಉದ್ಘಾಟನೆಯಾಗಬೇಕೆಂದು ಇಷ್ಟು ದಿನ ಬಿಜೆಪಿಯಲ್ಲಿದ್ದಾರೆ, ಅವರ ಕನಸಿನ ಯೋಜನೆ ಲೋಕಾರ್ಪಣೆಗೊಂಡ ಬಳಿಕ ಕಾಂಗ್ರೆಸ್ ಸೇರ್ಪಡೆಗೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಅನ್ಯಕೋಮಿನವರ ವ್ಯಾಪಾರಕ್ಕೆ ನಿರ್ಬಂಧ ಹೇರಿ – ಈಗ ಕಿಗ್ಗಾದಲ್ಲೂ ಧರ್ಮ ದಂಗಲ್
ಒಟ್ಟಾರೆ ನಾರಾಯಣಗೌಡರ ಕನಸಿನ ಯೋಜಗಳು ಲೋಕಾರ್ಪಣೆಗೊಳ್ಳುವುದರ ಜೊತೆಗೆ ಮತ್ತೆ ಅವರ ಪಕ್ಷಾಂತರ ಪರ್ವಕ್ಕೆ ನಾಂದಿ ಹಾಡುತ್ತಿವೆ. ನಾರಾಯಣಗೌಡ ತಮ್ಮ ಹೆಜ್ಜೆಯನ್ನು ಬದಲಿಸುತ್ತಾರಾ ಅಥವಾ ಬಿಜೆಪಿಯಿಂದ ಹೆಜ್ಜೆ ಕೀಳುತ್ತಾರಾ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಹರಾಜು – ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ