– ಟೀಕೆಗೆ ಗುರಿಯಾದ ನಾರಾಯಣಗೌಡ
– ಮಂಡ್ಯದ ನೂತನ ಬಿಜೆಪಿ ಸಚಿವನ ಮರಾಠ ಪ್ರೇಮ
ಮಂಡ್ಯ: ಕರ್ನಾಟಕದ ಮಂತ್ರಿಯಾಗಿ ಮಹಾರಾಷ್ಟ್ರಕ್ಕೆ ಜೈಕಾರ ಕೂಗುವ ಮೂಲಕ ತೋಟಗಾರಿಕಾ ಸಚಿವ ಕೆ.ಎಸ್.ನಾರಾಯಣಗೌಡ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಫೆಬ್ರವರಿ 20ರಂದು ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಮಹಾರಾಷ್ಟ್ರಕ್ಕೆ ಜೈ ಎಂದು ಹೇಳಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಕಲಾತಂಡದ ಕುರಿತು ಮಾತನಾಡುವ ವೇಳೆ ಮಹಾರಾಷ್ಟ್ರಕ್ಕೆ ಜೈ ಎಂದಿದ್ದಾರೆ.
Advertisement
Advertisement
ಈಗ ನಾನು ಏನೇ ಆಗಿದ್ದರೂ ಅದು ಮಹಾರಾಷ್ಟ್ರದಿಂದ. 25 ವರ್ಷಗಳ ಹಿಂದೆ ಮುಂಬೈಗೆ ಹೋಗಿ ಹೋಟೇಲ್ ಉದ್ಯಮಿಯಾಗಿ ಬಿಲ್ಡರ್ ಆಗಿ, ಆದಾದ ಮೇಲೆ ಇಲ್ಲಿಗೆ ಬಂದು ರಾಜಕಾರಣಿಯಾದೆ. ನನ್ನನ್ನು ಉದ್ಯಮಿಯನ್ನಾಗಿ ಮಾಡಿದ್ದೇ ಮಹಾರಾಷ್ಟ್ರ. ಜೈ ಮಹಾರಾಷ್ಟ್ರ ಮತ್ತು ಜೈ ಶಿವಾಜಿ ಮಹಾರಾಜ್ ಎಂದು ಹೇಳಲು ಬಯಸುತ್ತೇನೆ. ಇಂದು ನನ್ನ ದೇಹದಲ್ಲಿ ಶಕ್ತಿ, ತಾಕತ್ತು ಇದೆ ಎಂದರೆ ಅದು ಮಹಾರಾಷ್ಟ್ರದ್ದು. ಜೈ ಮಹಾರಾಷ್ಟ್ರ ಎಂದು ಹೇಳಿದ್ದಾರೆ.
Advertisement
ಭಾಷಣವನ್ನು ಪೂರ್ತಿಯಾಗಿ ಹಿಂದಿಯಲ್ಲೇ ಮಾಡಿರುವ ನಾರಾಯಣಗೌಡ, ಮಹಾರಾಷ್ಟ್ರದ ಪರ ಜೈಕಾರವನ್ನೂ ಕೂಗುವ ಮೂಲಕ ಇದೀಗ ಟೀಕೆಗೆ ಒಳಗಾಗಿದ್ದಾರೆ. ಈ ವಿಡಿಯೋ ಇದೀಗ ಸಖತ್ ಸದ್ದು ಮಾಡುತ್ತಿದೆ.