ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಸಂಪೂರ್ಣ ಕಮಲ ಅರಳಿಸಲು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಆಪರೇಷನ್ ಕಮಲದ ಕಾರ್ಯಾಚರಣೆ ಬಗ್ಗೆ ಬಿಜೆಪಿ ನಾಯಕರು ಮತ್ತಷ್ಟು ಸುಳಿವು ಬಿಟ್ಟುಕೊಟ್ಟಿದ್ದಾರೆ.
ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತಾಡಿದ ಸಚಿವ ಕೆ.ಸಿ.ನಾರಾಯಣಗೌಡ, ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲದ ರೂಪುರೇಷೆಯ ಒಂದು ಝಲಕ್ ಬಹಿರಂಗಗೊಳಿಸಿದರು. ಇದನ್ನೂ ಓದಿ: ಕೊಡಗಿನ ದುಬಾರೆಯಲ್ಲಿ ಪ್ರವಾಸಿ ಬಾಲಕ ಸಾವು
Advertisement
3ರಷ್ಟು ಜನ ಬರ್ತಾರೆ: ಹಳೇ ಮೈಸೂರು ಭಾಗದಲ್ಲಿರೋ ನಾಯಕರನ್ನ ಬಿಜೆಪಿಗೆ ಕರೆತರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಮ್ಮ ಪಕ್ಷದ ನಿರ್ಧಾರವಾಗಿದೆ. ಹಳೆ ಮೈಸೂರು ಭಾಗದಲ್ಲಿ ಕೆಲವು ಶಾಸಕರನ್ನ ಪಕ್ಷಕ್ಕೆ ಕರೆ ತರ್ತೀವಿ. ಮಂಡ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ 4-5 ಜನರನ್ನು ಹಾಗೂ ಸಂಸದನಾಗಿ ಒಬ್ಬರನ್ನು ಗೆಲ್ಲಿಸುತ್ತೇವೆ. ಈಗ ಬಿಜೆಪಿಗೆ ನಾವು 17 ಜನ ಬಂದಿದೀವಿ. ನಾವು 17 ಜನರಲ್ಲಿ ಯಾರೂ ವಾಪಸ್ ಹೋಗುವ ಪ್ರಮೇಯ ಇಲ್ಲ. ಇದರ ಮೂರರಷ್ಟು ಜನರನ್ನು ಬಿಜೆಪಿಗೆ ಕರೆತರ್ತೇವೆ. ಕೆಲವರು 6 ತಿಂಗಳಲ್ಲಿ ಬರ್ತಾರೆ, ಕೆಲವರು ನಿಧಾನವಾಗಿ ಬರ್ತಾರೆ ಅಂತ ಸಚಿವ ನಾರಾಯಣ ಗೌಡ ತಿಳಿಸಿದರು. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ – ಸೌಮ್ಯಾಗೆ 13 ದಿನ ಪೊಲೀಸ್ ಕಸ್ಟಡಿ
Advertisement
Advertisement
ಈಗಲೇ ಹೆಸರು ಹೇಳಲ್ಲ: ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಅದೇ ಫೈನಲ್ ಆಗಿರಲಿದೆ. ನಮ್ಮ ಜೊತೆ ಹಲವರು ಸಂಪರ್ಕದಲ್ಲಿ ಇದ್ದಾರೆ, ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಯಾರೆಲ್ಲ ಬರ್ತಾರೆ, ಎಷ್ಟು ಜನ ಬರ್ತಾರೆ ಅಂತ ನಾನು ಈಗಲೇ ಹೇಳಲಾಗುವುದಿಲ್ಲ. ನಮ್ಮ ಪಕ್ಷ 140 ರಿಂದ 150 ಸ್ಥಾನ ಗೆದ್ದೇ ಗೆಲ್ಲುತ್ತದೆ. ನಾನು ಈಗ ಪಕ್ಷಕ್ಕೆ ಬರೋರ ಹೆಸರು ಹೇಳಿದ್ರೆ, ಅವರ ಪಕ್ಷದವರು ಅವರಿಗೆ ನಿದ್ದೆ ಮಾಡೋಕೆ ಬಿಡಲ್ಲ. ಹಾಗಾಗಿ ನಾನು ಪಕ್ಷ ಸೇರೋರ ಹೆಸರು ಹೇಳಲ್ಲ ಎಂದು ಹೇಳಿದರು.