ಮುಂಬೈ: ಏಷ್ಯಾಕಪ್ (Asia Cup) ಟ್ರೋಫಿ ಹಿಂದಿರುಗಿಸುವಂತೆ ಬಿಸಿಸಿಐ (BCCI) ಇಮೇಲ್ ಪತ್ರಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqwi) ಪ್ರತಿಕ್ರಿಯಿಸಿದ್ದಾರೆ. ಟ್ರೋಫಿ ಗೆದ್ದ ಟೀಂ ಇಂಡಿಯಾಕ್ಕೆ ಅಭಿನಂದನೆ ಸಲ್ಲಿಸಿರುವ ನಖ್ವಿ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟಿದ್ದಾರೆ. `ಬಿಸಿಸಿಐ ಅಥವಾ ತಂಡದ ಯಾರಾದ್ರೂ ಬಂದು ಟ್ರೋಫಿ ಪಡೆಯಬಹುದು’ ಅಂತ ಹೇಳಿದ್ದಾರೆ.
ಮಂಗಳವಾರ (ಅ.21) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮೊಹ್ಸಿನ್ ನಖ್ವಿಗೆ ಏಷ್ಯಾ ಕಪ್ ಟ್ರೋಫಿ ಹಸ್ತಾಂತರಿಸುವಂತೆ ಇಮೇಲ್ ಮೂಲಕ ಪತ್ರ ಬರೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಏಪ್ಯಾ ಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ. ಬಿಸಿಸಿಐ ಅಥವಾ ಭಾರತ ತಂಡದ ಯಾರಾದರೂ ಬಂದು ತೆಗೆದುಕೊಂಡು ಹೋಗಬಹುದು. ಅಲ್ಲದೇ ಭಾರತ ತಂಡಕ್ಕೆ ಏಷ್ಯಾ ಕಪ್ ಟ್ರೋಫಿಯನ್ನು ನೀಡಬೇಕೆಂದು ಬಯಸಿದರೆ, ದುಬೈನಲ್ಲಿ ಇನ್ನೊಮ್ಮೆ ಪ್ರಶಸ್ತಿ ವಿತರಿಸಲು ಕಾರ್ಯಕ್ರಮ ಆಯೋಜಿಸುವಂತೆ ಕೇಳಿಕೊಂಡಿದ್ದಾರೆ.ಇದನ್ನೂ ಓದಿ: ಏಷ್ಯಾ ಕಪ್ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸಿ – ಮೊಹ್ಸಿನ್ ನಖ್ವಿಗೆ ಬಿಸಿಸಿಐ ವಾರ್ನಿಂಗ್
ಮೂಲಗಳ ಪ್ರಕಾರ, ಭಾರತಕ್ಕೆ ನಾನು ಟ್ರೋಫಿ ನೀಡುವುದಿಲ್ಲ, ಅದರ ಬದಲು ನವೆಂಬರ್ ಮೊದಲ ವಾರದಲ್ಲಿ ಕಾರ್ಯಕ್ರಮ ಆಯೋಜಿಸುತ್ತೇವೆ. ಭಾರತ ತಂಡದ ಯಾರಾದರೂ ಬಂದು ಟ್ರೋಫಿ ಪಡೆಯಬಹುದು ಎಂದು ತಿಳಿಸಿದ್ದಾರೆ. ನಖ್ವಿ ಪ್ರತಿಕ್ರಿಯೆನ್ನು ಬಿಸಿಸಿಯ ನಿರಾಕರಿಸಿದ್ದು, ನಮಗೆ ಏಷ್ಯಾ ಕಪ್ ಟ್ರೋಫಿಯೇ ಬೇಡ ಎನ್ನುವ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ. ಜೊತೆಗೆ ಈ ಕುರಿತು ಐಸಿಸಿ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ.
ಕಳೆದ ಸೆಪ್ಟೆಂಬರ್ 28ರಂದು ನಡೆದ ಟಿ೨೦ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ, ಪಾಕ್ ವಿರುದ್ಧ ೫ ವಿಕೆಟ್‌ಗಳ ಜಯ ಸಾಧಿಸಿತು. ಆದ್ರೆ ನಖ್ವಿ ಅವರಿಂದ ಟ್ರೋಫಿ ಪಡೆಯಲು ಟೀಂ ಇಂಡಿಯಾ ನಿರಾಕರಿಸಿತು. ಹೀಗಾಗಿ ನಖ್ವಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಿಂದ ಹೊರಟರು ಜೊತೆಗೆ ಟ್ರೋಫಿಯನ್ನ ತೆಗೆದುಕೊಂಡು ಹೋದರು. ಹೀಗಾಗಿ ಭಾರತ ತಂಡ ಗೆದ್ದಿರುವ ಟ್ರೋಫಿಯನ್ನ ಹಿಂದಿರುಗಿಸುವಂತೆ ಹೇಳಿದೆ.
ಟ್ರೋಫಿ ಎಲ್ಲಿದೆ?
ಸದ್ಯ ಭಾರತ ಗೆದ್ದಿರುವ ಏಷ್ಯಾಕಪ್ ಟ್ರೋಫಿ ದುಬೈನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಯಲ್ಲೇ ಇದೆ. ತಮ್ಮ ಅನುಮತಿಯಿಲ್ಲದೇ ಯಾರೋ ಟ್ರೋಫಿಯನ್ನ ಹಸ್ತಾಂತರಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ನಖ್ವಿಯವರ ಆಪ್ತ ಮೂಲದ ಪ್ರಕಾರ, ಟ್ರೋಫಿ ದುಬೈನ ಎಸಿಸಿ ಕಚೇರಿಯಲ್ಲಿದೆ. ತನ್ನ ಅನುಮತಿಯಿಲ್ಲದೇ ಯಾರಿಗೂ ಟ್ರೋಫಿ ಹಸ್ತಾಂತರಿಸಬಾರದು. ಒಂದು ವೇಳೆ ಹಸ್ತಾಂತರಿಸಬೇಕಿದ್ರೆ, ನಾನೇ ಭಾರತ ತಂಡ ಅಥವಾ ಬಿಸಿಸಿಐಗೆ ವೈಯಕ್ತಿಕವಾಗಿ ಟ್ರೋಫಿ ಹಸ್ತಾಂತರಿಸೋದಾಗಿ ಹೇಳಿದ್ದಾರೆ.ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ