ಪ್ರೀಮಿಯರ್ ಶೋ ನೋಡಲು ನಿಮ್ಮ ಮುದ್ದಿನ ನಾಯಿಯೊಂದಿಗೆ ಬನ್ನಿ!

Public TV
1 Min Read
NANU MATHU GUNDA

ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಯುಕ್ತಾ ಹೊರನಾಡು ಮುಖ್ಯಪಾತ್ರದಲ್ಲಿ ನಟಿಸಿರುವ ‘ನಾನು ಮತ್ತು ಗುಂಡ’ ಚಿತ್ರದ ಪ್ರೀಮಿಯರ್ ಶೋ ನಾಳೆ ಬೆಂಗಳೂರಿನ ನಗರ್ತರ ಪೇಟೆಯ ಶಾರದ ಚಿತ್ರಮಂದಿರದಲ್ಲಿ ಸಂಜೆ 7.15ಕ್ಕೆ ಆಯೋಜನೆ ಮಾಡಲಾಗಿದೆ.

ವಿಶೇಷ ಎಂದರೇ ಇದು ಡಾಗ್ ಪ್ರೀಮಿಯರ್ ಶೋ. ‘ಸೀ ಇಟ್ ಫಸ್ಟ್ ವಿತ್ ಯುವರ್ ಡಾಗ್ಸ್’ ಎಂಬ ಶೀರ್ಷಿಕೆಯೊಂದಿಗೆ ಚಿತ್ರತಂಡ ಪ್ರೀಮಿಯರ್ ಶೋ ಆಯೋಜಿಸಿದೆ. ಭಾರತದ ಸಿನಿಮಾ ಇತಿಹಾಸದಲ್ಲಿ ಈ ರೀತಿಯ ವಿಭಿನ್ನ ಹೆಜ್ಜೆಯನ್ನ ‘ನಾನು ಮತ್ತು ಗುಂಡ’ ಚಿತ್ರತಂಡ ಇಟ್ಟಿದೆ.

ಈ ಚಿತ್ರವನ್ನು ರಘು ಹಾಸನ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಗುಂಡನ ಪಾತ್ರದಲ್ಲಿ ಒಂದು ಪುಟ್ಟ ನಾಯಿ ಅಭಿನಯಿಸಿದೆ. ಮುಗ್ಧನಾಯಿ ಗುಂಡ ಮತ್ತು ಅಟೋಚಾಲಕ ಶಂಕ್ರ (ಶಿವರಾಜ್ ಕೆ.ಆರ್.ಪೇಟೆ) ನಡುವಿನ ಬಾಂಧ್ಯವನ್ನು ಚಿತ್ರ ತೋರಿಸುತ್ತದೆ. ಎಲ್ಲಿ ಬಿಟ್ಟು ಬಂದರು ಶಂಕ್ರನ ಹಿಂದೆ ಬರುವ ಮುಗ್ಧ ಗುಂಡನ ಜೊತೆ ಶಂಕ್ರನಿಗೆ ಒಂದು ಭಾವನಾತ್ಮಕ ಸಂಬಂಧ ಬೆಳೆಯುತ್ತದೆಯಂತೆ. ಈ ಭಾವನಾತ್ಮಕ ಸಿನಿಮಾವನ್ನು ನಿಮ್ಮ ನಾಯಿಗಳ ಜೊತೆಗೂಡಿ ನೋಡಿ ಎಂಬ ಸಂದೇಶ ನೀಡುತ್ತಾ ಈ ಪ್ರೀಮಿಯರ್ ಶೋವನ್ನು ಆಯೋಜಿಸಲಾಗಿದೆಯಂತೆ.

NANU MATTU GUNDA 7 copy

Share This Article