ಬೆಂಗಳೂರು: ಯಶಸ್ವಿ ಚಿತ್ರವೊಂದು ಬಿಡುಗಡೆಗೂ ಮುನ್ನವೇ ಯಾವ್ಯಾವ ಥರದಲ್ಲಿ ಸುದ್ದಿಯಾಗಬಹುದೋ ಅಷ್ಟೆಲ್ಲ ರೀತಿಯಲ್ಲಿ ಸದ್ದು ಮಾಡುತ್ತಿರೋ ಚಿತ್ರ ನನ್ನ ಪ್ರಕಾರ. ವಿನಯ್ ಬಾಲಾಜಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಪ್ರತಿಭಾವಂತ ನಟ ಕಿಶೋರ್ ಕುಮಾರ್ ಕೂಡಾ ಪ್ರಧಾನ ಪಾತ್ರದಲ್ಲಿ ಮಿಂಚಲಣಿಯಾಗಿದ್ದಾರೆ. ಎಲ್ಲ ದಿಕ್ಕುಗಳಲ್ಲಿಯೂ ಕುತೂಹಲಕ್ಕೆ ಕಾರಣವಾಗಿರೋ ಈ ಚಿತ್ರ ಬಿಡುಗಡೆಯ ದಿನಾಂಕ ಹತ್ತಿರಾಗುತ್ತಿರೋ ಘಳಿಗೆಯಲ್ಲಿ ಮಹತ್ವದ ಟೈಟಲ್ ಸಾಂಗ್‍ವೊಂದನ್ನು ಲಾಂಚ್ ಮಾಡಲು ನಿರ್ಧರಿಸಿದೆ.
Advertisement
ಟೈಟಲ್ ಟ್ರ್ಯಾಕ್ ಎಂದರೆ ಒಂದಷ್ಟು ಸಿದ್ಧಸೂತ್ರಗಳಿದ್ದಾವೆ. ಆದರೆ ಒಂದಿಡೀ ಚಿತ್ರವನ್ನೇ ಹೊಸತನದಲ್ಲಿ ರೂಪಿಸಿರೋ ಚಿತ್ರತಂಡ ಟೈಟಲ್ ಟ್ರ್ಯಾಕ್ ವಿಚಾರದಲ್ಲಿ ಸಿದ್ಧಸೂತ್ಗಳಿಗೆ ಬದ್ಧವಾಗಿ ಆಲೋಚಿಸೋದು ಖಂಡಿತಾ ಸಾಧ್ಯವಿಲ್ಲ. ವಿನಯ್ ಬಾಲಾಜಿ ಈ ನಂಬಿಕೆಗೆ ತಕ್ಕುದಾಗಿಯೇ ಸದರಿ ಟೈಟಲ್ ಟ್ರ್ಯಾಕ್ ಅನ್ನು ರೂಪಿಸಿದ್ದಾರೆ. ಇದು ಏಳನೇ ತಾರೀಕು ಬುಧವಾರ ಸಂಜೆ ಜೀó ಮ್ಯೂಸಿಕ್ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾಗಲಿದೆ.
Advertisement
Advertisement
ಈ ಟೈಟಲ್ ಟ್ರ್ಯಾಕಿಗೆ ಭರ್ಜರಿ ಚೇತನ್ ಸಾಹಿತ್ಯ ಬರೆದಿದ್ದಾರೆ. ಇದರ ಸಾಹಿತ್ಯ ರಚನೆಯೂ ಕೂಡಾ ಚೇತನ್ ಪಾಲಿಗೆ ಸವಾಲಾಗಿತ್ತು. ಯಾಕೆಂದರೆ ಅದು ಇಡೀ ಕಥೆಯ ಅಂಶಗಳನ್ನು ಹೇಳುತ್ತಲೇ, ಪ್ರೇಕ್ಷಕರ ಗೊಂದಲ ನಿವಾರಣೆ ಮಾಡಿ ಒಂದು ಕ್ಲೂವನ್ನು ಕೂಡಾ ಪ್ರೇಕ್ಷಕರತ್ತ ದಾಟಿಸುವಂತಿರಬೇಕಿತ್ತಂತೆ. ಆದರೆ ಇಂಥಾ ಸವಾಲು ಸ್ವೀಕರಿಸಿದ್ದ ಚೇತನ್ ತುಂಬಾ ಕಡಿಮೆ ಅವಧಿಯಲ್ಲಿಯೇ ಈ ಹಾಡು ಬರೆದು ಕೊಟ್ಟಿದ್ದರಂತೆ. ಅರ್ಜುನ್ ರಾಮು ಅದಕ್ಕೆ ಅದ್ಭುತವಾದ ಸಂಗೀತ ಸಂಯೋಜನೆ ಮಾಡಿದರೂ ಕೂಡಾ ಅದಕ್ಕೆ ನಿರ್ದೇಶಕರ ನಿರೀಕ್ಷೆಯಂತೆ ಧ್ವನಿಯಾಗೋ ಗಾಯಕ ಮಾತ್ರ ಸಿಕ್ಕಿರಲಿಲ್ಲವಂತೆ. ಕಡೆಗೂ ಸಿಕ್ಕವರು ತಮಿಳಿನ ಸೂಪರ್ ಹಿಟ್ ಮೂವಿ ವಿಕ್ರಂ ವೇದಾಗೆ ಟೈಟಲ್ ಟ್ಯ್ರಾಕ್ ಹಾಡಿದ್ದ ಶಿವಂ.
Advertisement
ಶಿವಂರನ್ನು ಸಂಪರ್ಕಿಸಿ, ಕಥೆ ಮತ್ತು ಹಾಡಿನ ಭಾವಗಳನ್ನು ವಿವರಿಸಿ ಒಂದಷ್ಟು ಕನ್ನಡ ಕಲಿಸುವಲ್ಲಿಯೂ ನಿರ್ದೇಶಕರು ಯಶ ಕಂಡಿದ್ದರು. ಹಾಗೆ ಶಿವಂ ಈ ಅದ್ಭುತ ಹಾಡಿಗೆ ಅದರಂತೆಯೇ ಧ್ವನಿ ನೀಡಿದ್ದಾರಂತೆ. ಕಥೆಯ ಸಾರವನ್ನು ಹೇಳುತ್ತಾ, ಪ್ರೇಕ್ಷಕರ ಗೊಂದಲ ನಿವಾರಣೆ ಮಾಡುತ್ತಾ ಕ್ಲೈಮ್ಯಾಕ್ಸ್ ಹಂತದಲ್ಲಿ ಈ ಹಾಡು ಬರಲಿದೆ. ಇದುವೇ ಕ್ಲೈಮ್ಯಾಕ್ಸ್ ನಲ್ಲೇನಾಗಲಿದೆ ಎಂಬ ಸುಳಿವನ್ನೂ ಕೊಡಲಿದೆ. ಈ ವಿಶೇಷವಾದ ಹಾಡು ಇದೇ ಬುಧವಾರ ಸಂಜೆ ಅನಾವರಣಗೊಳ್ಳಲಿದೆ.