ಮೈಸೂರು: ಕೋವಿಡ್‍ನಿಂದ ಕಳೆದ ಎರಡು ವರ್ಷಗಳಿಂದ ರದ್ದಾಗಿದ್ದ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ಪಂಚ ಮಹಾ ರಥೋತ್ಸವ ನಾಳೆ ನಡೆಯಲಿದೆ.
Advertisement
ನಾಳೆ ಮುಂಜಾನೆ 3.30 ರಿಂದ 4.30ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. 100 ಅಡಿ ಎತ್ತರ, 110 ಟನ್ ತೂಕದ ಗೌತಮ ರಥ ದೇವಸ್ಥಾನದ ಸುತ್ತಲಿನ 1.5 ಕಿ.ಮೀ ರಥ ಬೀದಿಯಲ್ಲಿ ಸಾಗಲಿದೆ. ಈ ರಥದ ಜೊತೆ ಅಮ್ಮನವರ ರಥ, ಗಣೇಶ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ರಥ ಸೇರಿದಂತೆ ಐದು ರಥಗಳು ಚಲಿಸಲಿವೆ. ಇದನ್ನೂ ಓದಿ: ಸರ್ಕಾರದ ತೀರ್ಮಾನವನ್ನು ಕೋರ್ಟ್ ಎತ್ತಿಹಿಡಿದಿರುವುದಕ್ಕೆ ಸ್ವಾಗತ: ಈಶ್ವರಪ್ಪ
Advertisement
ಪಂಚ ರಥಗಳ ಸಿಂಗರ ಮುಗಿದಿದೆ. ಗೌತಮ ರಥದ ಎರಡು ಹಾಗೂ ಪಾರ್ವತಿ ದೇವಿಯ ಒಂದು ಚಕ್ರವನ್ನು ಹೊಸದಾಗಿ ಅಳವಡಿಸಲಾಗಿದೆ. ಗೌತಮ ರಥ ಎಳೆಯಲು ಗೋಕರ್ಣದಿಂದ 3 ಲಕ್ಷ ಬೆಲೆಯ ವಿಶೇಷ ಹಗ್ಗ ತರಿಸಲಾಗಿದೆ. ರಥೋತ್ಸವದ ವೀಕ್ಷಣೆಗೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು ಭದ್ರತೆಗಾಗಿ ಹೆಚ್ಚಿನ ಪೊಲೀಸರ ನಿಯೋಜಿಸಲಾಗಿದೆ. ಇದನ್ನೂ ಓದಿ: ರಸ್ತೆ ಗುಂಡಿಗೆ ಬಲಿಯಾದ ಅಶ್ವಿನ್ ಕುಟುಂಬಕ್ಕೆ ಉಚಿತ ಸೈಟ್: ಎಸ್.ಆರ್ ವಿಶ್ವನಾಥ್