ಮೈಸೂರು: ಧಾರ್ಮಿಕ ಕಟ್ಟಡ ತೆರವು ವಿಚಾರ, ಅಧಿಕಾರಿಗಳು ಒತ್ತಡದಲ್ಲಿ ಅಸಹಾಯಕರಾಗಿದ್ದಾರೆ ಎಂದು ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಕಟ್ಟಡ ವಿಚಾರವಾಗಿ ಸಿಎಸ್ ಒತ್ತಡ ಹೇರುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿ ಹೇಳಿರಬಹುದು. ಸುಪ್ರೀಂಕೋರ್ಟ್ ಆದೇಶ ಪಾಲನೆ ಅನಿವಾರ್ಯವಾಗಿದೆ. ನಂಜನಗೂಡು ದೇವಸ್ಥಾನ ತೆರವು ವಿಚಾರ ನನ್ನ ಗಮನಕ್ಕೆ ತಂದು ತೆರವುಗೊಳಿಸಲಾಗಿದೆ ಎಂದರು. ಇದನ್ನೂ ಓದಿ: ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ: ಲಕ್ಷ್ಮಣ್ ಸವದಿ
Advertisement
Advertisement
ಸಿದ್ದರಾಮಯ್ಯ ಟ್ವೀಟ್ ನನಗೆ ಬೇಸರ ತರಿಸಿದೆ. ಬಹುಶಃ ಇಂತಹ ಬೇಜವಾಬ್ದಾರಿ ಹೇಳಿಕೆ ಅವರದ್ದಾಗಿರುವುದಿಲ್ಲ. ಅವರ ಹೆಸರಲ್ಲಿ ಬೇರೆ ಯಾರೋ ಟ್ವೀಟ್ ಮಾಡಿರಬಹುದು. ಸಿಎಂ ಆಗಿದ್ದವರು ಅವರಿಗೆ ನ್ಯಾಯಾಲಯದ ಆದೇಶದ ಅರಿವಿದೆ. ಕೇವಲ ನಂಜನಗೂಡು ದೇವಸ್ಥಾನ ತೆರವು ವಿಚಾರ ಮಾತ್ರ ಹೈಲೈಟ್ ಮಾಡಲಾಗುತ್ತಿದೆ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ
Advertisement
ಹಿಂದೂ ದೇಗುಲಗಳ ರಕ್ಷಣೆಗೆ ಪ್ರತ್ಯೇಕ ಕಾಯ್ದೆಯ ಅವಶ್ಯಕತೆ ಇದೆ. ಬೇರೆ ಧರ್ಮಗಳಲ್ಲಿ ಪ್ರತ್ಯೇಕ ಕಾಯ್ದೆಯಿದೆ. ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಬೇಕಿದೆ. ಆಗ ಮಾತ್ರ ದೇಗುಲಗಳ ರಕ್ಷಣೆ ಸಾಧ್ಯ. ಈ ಬಗ್ಗೆ ಶಾಸಕರ ಸಭೆಯಲ್ಲಿ ನಾನು ಸಿಎಂ ಗಮನಕ್ಕೆ ತರುತ್ತೇನೆ. ನಾನು ಸಾಕಷ್ಟು ದೇಗುಲಗಳನ್ನು ಉಳಿಸಿದ್ದೇನೆ ಎಂದು ತಿಳಿಸಿದರು.