Connect with us

Corona

ಕೊರೊನಾ ಊರೆಲ್ಲ ಹಬ್ಬಿದ್ಮೇಲೆ ಜ್ಯೂಬಿಲಿಯೆಂಟ್ ಕಾರ್ಖಾನೆ ಮಾಲೀಕರ ಹೊಸ ನಾಟಕ

Published

on

ಮೈಸೂರು: ಕೊರೊನಾ ವೈರಸ್ ಊರೆಲ್ಲ ಹಬ್ಬಿದ ಮೇಲೆ ಜ್ಯೂಬಿಲಿಯೆಂಟ್ ಕಾರ್ಖಾನೆ ಮಾಲೀಕ ಹೊಸ ನಾಟಕ ಶುರು ಮಾಡಿದ್ದಾರೆ. ಜ್ಯೂಬಿಲಿಯೆಂಟ್ ಕಾರ್ಖಾನೆಯಿಂದ ಇಡೀ ಮೈಸೂರಿಗೆ ಮೈಸೂರೇ ಹೈಟೆನ್ಷನ್ ನಲ್ಲಿದೆ. ಈ ಕಾರ್ಖಾನೆ ನೌಕರನಿಗೆ ಕೊರೊನಾ ವೈರಸ್ ಹೇಗೆ ಅಂಟಿತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಕಾರ್ಖಾನಗೆ ಬಂದ ಚೀನಾ ಉತ್ಪನ್ನಗಳ ಮೂಲಕ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದ್ದರೂ, ಇನ್ನು ಖಚಿತವಾಗಿಲ್ಲ. ಆದ್ರೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ಸ್ಪಷ್ಟ ಮಾಹಿತಿ ನೀಡಬೇಕಿದ್ದ ಕಾರ್ಖಾನೆ ಮಾಲೀಕ ದೆಹಲಿಗೆ ಹೋಗಿ ಕೂತಿದ್ದಾರೆ. ಯಾವ ಮಾಹಿತಿಯೂ ಕೊಡದೇ ಆಟವಾಡಿಸ್ತಿದ್ದಾರೆ. ಈ ನಡುವೆ ಕಾರ್ಖಾನೆ ಮಾಲೀಕ ರಾಜ್ಯ ಸರ್ಕಾರಕ್ಕೆ ದೇಣಿಗೆ ಕೊಡುವ ನಾಟಕ ಶುರು ಮಾಡಿದ್ದಾರೆ.

Advertisement
Continue Reading Below

ತಿಂಗಳಿಗೆ ಕೋಟ್ಯಾಂತರ ರೂಪಾಯಿ ಲಾಭ ಮಾಡುವ ಈ ಕಾರ್ಖಾನೆ ಮಾಲೀಕ ಈಗ 25 ಲಕ್ಷ ಚಿಲ್ಲರೆ ದೇಣಿಗೆ ಕೊಡುವ ನಾಟಕವಾಡುತ್ತಿದ್ದಾರೆ. ಸಚಿವರಾದಿಯಾಗಿ ಯಾರೇ ಮನವಿ ಮಾಡಿದರೂ ವಿವರಣೆ ನೀಡಲು ಮುಂದಾಗದ ಕಂಪನಿ ಮಾಲೀಕ ಇದೀಗ ದೇಣಿಗೆ ಹಾಗೂ ಮಾಸ್ಕ್ ನೀಡುವ ನಾಟಕವಾಡ್ತಿದ್ದಾರೆ.

ಈ ದೇಣಿಗೆ ಮೊತ್ತ ಕಂಪನಿಯವರಿಗೆ ನೀಡುತ್ತಿರುವ ಚಿಕಿತ್ಸೆಗೂ ಸಾಲಲ್ಲ. ಓರ್ವ ಪರೀಕ್ಷೆಗೆ ಅಂದಾಜು ಆರು ಸಾವಿರ ರೂಪಾಯಿ ಖರ್ಚಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೂವರೆ ಸಾವಿರ ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. ಇದೀಗ ಕಾರ್ಖಾನೆಯ ಮಾಲೀಕ 5 ಸಾವಿರ ಮಾಸ್ಕ್ ಮತ್ತು 25 ಲಕ್ಷ ದೇಣಿಗೆ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *