ಮೈಸೂರು: ನಂಜನಗೂಡಿನಲ್ಲಿ ಸಂಭ್ರಮದಿಂದ ಗಿರಿಜಾ ಕಲ್ಯಾಣೋತ್ಸವ ನಡೆಯಿತು. ಗಿರಿಜಾ ಕಲ್ಯಾಣೋತ್ಸವದ ಹಿನ್ನೆಲೆಯಲ್ಲಿ 8 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನ ದೇಗುಲದ ಆಡಳಿತ ಮಂಡಳಿ ಆಯೋಜಿಸಿದೆ
ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀಕಂಠೇಶ್ವರ ಸ್ವಾಮಿಯ ವಿವಾಹ ಮಹೋತ್ಸವ ಭಾನುವಾರ ನಡೆಯಿತು. ಇದರ ಮುಂದುವರಿದ ಭಾಗವಾಗಿ ಇವತ್ತು ನಂಜನಗೂಡಿನಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.
Advertisement
ಸಾಂಸ್ಕೃತಿಕ ಕಲಾ ತಂಡಗಳ ಈ ಮೆರವಣಿಗೆಗೆ ಮೆರುಗು ತುಂಬಿದವು. ವೀರಗಾಸೆ, ಡೊಳ್ಳುಕುಣಿತ ಸೇರಿ ಹಲವು ಕಲಾ ತಂಡಗಳು ಭಾಗಿಯಾಗಿದ್ದವು. ಸಾವಿರಾರು ಭಕ್ತರು ಕಲ್ಯಾಣೋತ್ಸವವನ್ನು ಕಣ್ತುಂಬಿ ಕೊಂಡರು. ಗಿರಿಜಾಕಲ್ಯಾಣ ಮಹೋತ್ಸವದ ಪ್ರಯುಕ್ತ ದೇವಾಲಯದ ಒಳಾವರಣದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ದೇವರನಾಮ, ಭಕ್ತಿಗೀತೆ, ತತ್ವಪದ ಹಾಗೂ ಸುಗಮ ಸಂಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.