CoronaDistrictsKarnatakaLatestMain PostMysuru

ನಂಜು ನುಗ್ಗಿದ ನಂಜುಂಡನ ರಥೋತ್ಸವಕ್ಕೂ ಕೊರೊನಾ ಭೀತಿ – ನಂಜನಗೂಡಿನ ಜಾತ್ರೆ ರದ್ದು

ಮೈಸೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಂಜನಗೂಡಿನ ನಂಜುಂಡೇಶ್ವರನ ದೊಡ್ಡ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.

ಇದೆ ಮೊಟ್ಟಮೊದಲ ಬಾರಿಗೆ ಪಂಚಮಹಾ ರಥೋತ್ಸವ ರದ್ದಾಗಿದ್ದು, ನಂಜು ನುಂಗಿದ ನಂಜುಂಡನಿಗೂ ಕೊರೊನಾ ಕಂಟಕ ಎದುರಾಗಿದೆ. ಇಂದು ನಂಜನಗೂಡಿನಲ್ಲಿ ಗೌತಮ ಪಂಚ ಮಹಾರಥೋತ್ಸವ ನಡೆಯಬೇಕಿತ್ತು. ಪಂಚ ಮಹಾರಥೋತ್ಸವ ನಡೆಯುವ ಏಕೈಕ ಪುಣ್ಯಕ್ಷೇತ್ರ ನಂಜನಗೂಡು ಆಗಿದ್ದು, ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ಚಂಡಿಕೇಶ್ವರರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಪಂಚರಥಗಳು ಇಂದು ಕೇವಲ ಧಾರ್ಮಿಕ ವಿಧಿ ವಿಧಾನಕ್ಕೆ ಮಾತ್ರ ಸೀಮಿತವಾಗಿತ್ತು.

ಇದೆ ಮೊದಲ ಬಾರಿಗೆ ರಥ ಎಳೆಯದೆ ರಥೋತ್ಸವ ರದ್ದಾಗಿದೆ. ದೊಡ್ಡ ಮಹಾರಥೋತ್ಸವ ರದ್ದಾಗಿದ್ದಕ್ಕೆ ಪಶ್ಚಾತ್ತಾಪ ಹೋಮ ನೆರವೇರಿಸಲಾಯಿತು. ಹೋಮ ನಡೆಸುವಂತೆ ಮುಜರಾಯಿ ಇಲಾಖೆ ಸೂಚನೆ ನೀಡಿತ್ತು. ಹೀಗಾಗಿ ದೇವಾಲಯದ ಒಳ ಆವರಣದಲ್ಲಿ ಪೂಜೆ, ಹೋಮ ನೆರವೇರಿಸಲಾಯಿತು.

Leave a Reply

Your email address will not be published.

Back to top button