ಮೈಸೂರು: ನಂಜನಗೂಡು ಉಪಚುನಾವಣೆಗೆ ಪ್ರಚಾರ ಜೋರಾಗೇ ನಡೀತಿದೆ. ಕಾಂಗ್ರೆಸ್‍ನವರು ಮಾತಿನುದ್ದಕ್ಕೂ ಅಭ್ಯರ್ಥಿಯನ್ನ ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಇದ್ರಿಂದ ನಂಜನಗೂಡಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಲಿಂಗಾಯತ ಸಮುದಾಯ ಬಿಜೆಪಿಯತ್ತ ವಾಲುತ್ತೆ ಅನ್ನೋದು ರಾಜಕೀಯ ಪರಿಣಿತರ ಲೆಕ್ಕಾಚಾರವಾಗಿದೆ.
ನಂಜನಗೂಡು ಮೀಸಲು ಕ್ಷೇತ್ರದಲ್ಲಿ ದಲಿತ ಮತದಾರರು ಸುಮಾರು 40 ಸಾವಿರದಷ್ಟಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಲಿಂಗಾಯತರು ಪ್ರಾಬಲ್ಯ ಇಟ್ಟುಕೊಂಡಿದ್ದಾರೆ. 2008ರ ಚುನಾವಣೆಯಲ್ಲಿ 2ನೇ ಸ್ಥಾನಕ್ಕೇರಿದ್ದ ಬಿಜೆಪಿ ಅಲ್ಪ ಮತದಿಂದ ಸೋತಿತ್ತು. ಈ ಬಾರಿಯ ಉಪಚುನಾವಣೆಯಲ್ಲಿ ಯಡಿಯೂರಪ್ಪ ಹಳೇ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನ ಪ್ರವಾಸ ಮಾಡ್ತಿದ್ದು ನಂಜನಗೂಡಿನಲ್ಲಿ ಲಿಂಗಾಯತರೇ ನಿರ್ಣಾಯಕ ಅನ್ನೋ ಹಂತಕ್ಕೆ ಬಂದಿದೆ.
Advertisement
ಹೀಗಿರುವಾಗ್ಲೇ ಕಾಂಗ್ರೆಸ್‍ನವರು ಯಡಿಯೂರಪ್ಪರನ್ನ ನಿಂದಿಸೋ ಮೂಲಕ ಲಾಭ ಮಾಡಿಕೊಡಲು ಹೊರಟಿದ್ದಾರೆ. ಗೆಲ್ಲೋದಕ್ಕೆ ಕಾಂಗ್ರೆಸ್ ತೆಗಳಿಕೆ ಎಂಬ ಅಸ್ತ್ರ ಬಿಡ್ತಿದೆ. ಆದ್ರೆ ಅದೇ ತೆಗಳಿಕೆ ಬಿಜೆಪಿಯವ್ರಿಗೆ ಲಾಭವಾದ್ರೂ ಅಚ್ಚರಿಯಿಲ್ಲ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿಬರ್ತಿದೆ.
Advertisement