ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಎರಡೂ ಇಲ್ಲಿಯವರೆಗೆ ಕಾಂಗ್ರೆಸ್ ಹಿಡಿತದಲ್ಲಿದ್ದ ಕ್ಷೇತ್ರಗಳು. ಆದ್ರೆ ಕೇವಲ ಕ್ಷೇತ್ರಗಳನ್ನು ತನ್ನ ಬಳಿಯೇ ಉಳಿಸಿಕೊಳ್ಳುವುದು ಮಾತ್ರವಲ್ಲದೇ ಕಾಂಗ್ರೆಸ್ ಮೇಲೆ ಇದು ಹಲವಾರು ರಾಜಕೀಯ ಪರಿಣಾಮಗಳನ್ನು ಬೀರಲಿದೆ.
Advertisement
– ಉತ್ತರಪ್ರದೇಶ, ಉತ್ತರಾಖಂಡ್ ಫಲಿತಾಂಶದ ಬಳಿಕ ಮೊದಲ ಚುನಾವಣಾ ಫಲಿತಾಂಶ
– ಎರಡೂ ಕ್ಷೇತ್ರಗಳನ್ನು ಗೆದ್ದರಷ್ಟೇ ಬಸವಳಿದಿರುವ ಕಾಂಗ್ರೆಸ್‍ಗೆ ಹೊಸ ಹುಮ್ಮಸ್ಸು ಸಿಗಬಹುದು
– ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‍ಗೆ ಹೊಸ ಹುಮ್ಮಸ್ಸು ಸಿಗಬಹುದು
– ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅಲೆ ಇಲ್ಲ ಎಂಬ ಕಾಂಗ್ರೆಸ್ ವಾದಕ್ಕೆ ಪುಷ್ಠಿ ಸಿಗಬಹುದು
– ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲೇ ಇಡೀ ಸರ್ಕಾರವೇ ಪ್ರಚಾರಗೈದರೂ ಸೋಲಾದ್ರೆ ತೀವ್ರ ಮುಖಭಂಗ
– ಎರಡೂ ಕ್ಷೇತ್ರಗಳನ್ನು ಗೆದ್ದರಷ್ಟೇ ಪಕ್ಷದೊಳಗೆ ಸಿದ್ದರಾಮಯ್ಯ ಹಿಡಿತ ಹೆಚ್ಚಾಗಬಹುದು
– ನಂಜನಗೂಡು ಗೆಲುವು ಸಿಎಂಗಿರುವ ಅಹಿಂದ ನಾಯಕನೆಂಬ ಹಣೆಪಟ್ಟಿಯನ್ನು ಭದ್ರಗೊಳಿಸಬಹುದು
– ಮುಂದಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಇತರೆ ಪಕ್ಷಗಳೊಂದಿಗೆ ಮೈತ್ರಿಗೆ `ಕೈ’ ಚಾಚಬಹುದು
Advertisement
Advertisement
ಉತ್ತರಪ್ರದೇಶ, ಉತ್ತರಾಖಂಡ್‍ನಲ್ಲಿ ಬಿಜೆಪಿ ಬೀಸಿದ ಬಿರುಗಾಳಿಯನ್ನು ಕರ್ನಾಟಕಕ್ಕೂ ಪಸರಿಸುವುದಕ್ಕೆ ಉಪ ಚುನಾವಣೆ ಮಾಧ್ಯಮವಾಗಲಿದೆ. ಹೀಗಾಗಿ ಅದರ ಮೇಲೂ ಈ ಫಲಿತಾಂಶ ಪರಿಣಾಮ ಬೀರಿ ಅದರ ಮುಂದಿನ ರಣತಂತ್ರಗಳನ್ನು ನಿರ್ಣಯಿಸಬಹುದು.
Advertisement
– ಉತ್ತರಪ್ರದೇಶ, ಉತ್ತರಾಖಂಡ್‍ನಲ್ಲಿರುವ ಬಿಜೆಪಿ ಅಲೆ ರಾಜ್ಯದಲ್ಲಿ ಬೀಸಲು ಅಂತಿಮ ವೇದಿಕೆ ಸಿದ್ಧ
– ಎರಡೂ ಕ್ಷೇತ್ರಗಳಲ್ಲಿ ಸೋಲಾದ್ರೆ ರಾಜ್ಯದಲ್ಲಿ ಬಿಜೆಪಿಗೆ ಮೋದಿ ಹೆಸರೇ ಅನಿವಾರ್ಯವಾಗಬಹುದು
– ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಾಯಕತ್ವದ ಬಗ್ಗೆ ಪಕ್ಷದೊಳಗೆ ಹೊಸ ಪ್ರಶ್ನೆಗಳು ಏಳಬಹುದು
– ಒಂದು ವೇಳೆ ಗೆದ್ದರೆ ಯಡಿಯೂರಪ್ಪ ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮಬಹುದು
– ಲಿಂಗಾಯಿತ, ದಲಿತ ಮತಗಳ ಸಮೀಕರಣ ಗೆದ್ದರೆ ಜಾತಿ ಸಮೀಕರಣಕ್ಕೆ ರಾಜ್ಯದಲ್ಲೂ ಹೊಸ ಭಾಷ್ಯ
– ಶ್ರೀನಿವಾಸ್ ಪ್ರಸಾದ್ ಸೋತರೆ ಪ್ರಮುಖ ದಲಿತ ನಾಯಕನೊಬ್ಬನ ರಾಜಕೀಯ ಜೀವನಕ್ಕೆ ತೆರೆ ನಿಶ್ಚಿತ
– ಶ್ರೀನಿವಾಸ್ ಪ್ರಸಾದ್ ಗೆದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಇನ್ನಷ್ಟು ಪಕ್ಷಾಂತರಿಗಳಿಗೆ ಮಣೆ