ಬೆಂಗಳೂರು: ಮಹದೇವಮ್ಮ, ಹುಚ್ಚಗಣಿ ದೇಗಲ ಮರು ನಿರ್ಮಾಣ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನಂಜನಗೂಡು ಶಾಸಕ ಹರ್ಷವರ್ಧನ್ ಪತ್ರ ಬರೆದಿದ್ದಾರೆ.
Advertisement
ಬಿಜೆಪಿ ಸರ್ಕಾರ ದೇಗುಲ ಮರು ನಿರ್ಮಾಣಕ್ಕೆ ನಿರ್ಧಾರ ಮಾಡಿರುವ ವಿಚಾರವಾಗಿ ಮಾತನಾಡಿದ ಶಾಸಕ ಹರ್ಷವರ್ಧನ್, ಡ್ಯಾಮೇಜ್ ಕಂಟ್ರೋಲ್‍ಗಾಗಿ ದೇವಸ್ಥಾನ ಕಟ್ಟುತ್ತಿಲ್ಲ. ದೇಗುಲ ತೆರವಿನಿಂದ ಎಲ್ಲರ ಭಾವನೆಗೆ ಪೆಟ್ಟಾಗಿದೆ. ನಾನು ದೇವಸ್ಥಾನ ಮರು ನಿರ್ಮಾಣ ಮಾಡಿಕೊಡುವಂತೆ ಸಿಎಂಗೆ ಕೇಳಿಕೊಂಡಿದ್ದೇನೆ. ದೇವಸ್ಥಾನವನ್ನೂ ಸರ್ಕಾರವಾದರೂ ಕಟ್ಟಲಿ. ಪಕ್ಷವಾದರೂ ಕಟ್ಟಲಿ ನಮ್ಮ ಭಾಗದ ಜನರಿಗೆ ನೋವಾಗಿದೆ. ದೇವಸ್ಥಾನ ನಿರ್ಮಾಣಕ್ಕೆ ಜಾಗ ಹುಡುಕಲಾಗಿದೆ. ಈ ವಿಚಾರವಾಗಿ ಸಿಎಂಗೆ ಪತ್ರವನ್ನು ಬರೆದು ತಕ್ಷಣಕ್ಕೆ 20 ಲಕ್ಷ ರೂ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇನೆ ಎಂದರು. ಇದನ್ನೂ ಓದಿ:KRS ಭರ್ತಿಯಾಗಿಲ್ಲ ಎದುರಾಗಲಿದೆ ಕುಡಿಯುವ ನೀರಿಗೆ ಹಾಹಾಕಾರ
Advertisement
ಪತ್ರದಲ್ಲೇನಿದೆ..?
ನನ್ನ ಮತಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-57ರ ಬಳಿಯಿರುವ ಮಹದೇವಮ್ಮ, ಹುಚ್ಚಗಣಿ ದೇವಸ್ಥಾನವನ್ನು ನ್ಯಾಯಲಯದ ಆದೇಶದಂತೆ ಮೈಸೂರು ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಇದರಿಂದ ನಮ್ಮ ಭಾಗದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ದೇವಸ್ಥಾನ ಮರು ನಿರ್ಮಾಣ ಮಾಡಲು ಜನರು ಜಾಗ ಕೊಟ್ಟಿದ್ದಾರೆ. ಈ ಕೂಡಲೇ ಮರು ನಿರ್ಮಾಣ ಕಾರ್ಯಕ್ಕೆ 20 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹರ್ಷವರ್ಧನ್ ಮನವಿ ಮಾಡಿದ್ದಾರೆ.
Advertisement
Advertisement
ನಂಜನಗೂಡು ದೇವಸ್ಥಾನ ತೆರುವಿನ ಬಳಿಕ ರಾಜ್ಯಾದ್ಯಂತ ಜನರು ಪ್ರತಿಭಟನೆ ನಡೆಸಿದ್ದರು. ಹಿಂದೂ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದವು. ಇದನ್ನೂ ಓದಿ:ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ: ಬಿಎಸ್‍ವೈ