ತೆಲುಗು ಆಕ್ಷನ್ ಥ್ರಿಲ್ಲರ್ ʻಹಿಟ್- 3ʼ ಸಿನಿಮಾ (HIT 3 Cinema) ತೆರೆಕಂಡು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ನಾನಿ (Nani) ನಿರ್ಮಿಸಿ ನಟಿಸಿರುವ ಈ ಸಿನಿಮಾ ಕೇವಲ ನಾಲ್ಕೇ ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿದೆ.
Thank you ♥️
This weekend. You gave us and cinema 101 reasons to celebrate. 🫶🏼#HIT3 pic.twitter.com/etANBkTdRc
— Nani (@NameisNani) May 5, 2025
ʻಕೆಜಿಎಫ್ʼ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ನಾಯಕಿಯಾಗಿ ಮಿಂಚುತ್ತಿರುವ ಈ ಸಿನಿಮಾ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೇವಲ 4 ದಿನಗಳಲ್ಲಿ ನೂರು ಕೋಟಿ ಬಾಚಿಕೊಂಡಿದೆ. ಸರಿಪೋದ ಶನಿವಾರಂ, ದಸರಾ ಬಳಿಕ ನಾನಿ ಕೆರಿಯರ್‌ನಲ್ಲೇ ಅತಿಹೆಚ್ಚು ಕಲೆಕ್ಷನ್ ಮಾಡಿದ 3ನೇ ಸಿನಿಮಾ ಇದಾಗಿದೆ ಈ ಕುರಿತು ನಿರ್ಮಾಪಕರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸೋನು ನಿಗಮ್‌ಗೆ ಫಿಲ್ಮ್ಂ ಚೇಂಬರ್ ಶಾಕ್ – ಸ್ಯಾಂಡಲ್‌ವುಡ್‌ನಿಂದ ಗಾಯಕನಿಗೆ ಅಸಹಕಾರ
ಐಪಿಎಲ್ ಅಬ್ಬರದ ನಡುವೆಯೂ ವೀಕೆಂಡ್ ಟಾರ್ಗೆಟ್ ಮಾಡಿ ಮೇ 1ರಂದು ʻಹಿಟ್- 3ʼ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಶೈಲೇಶ್ ಕೋಲನು ನಿರ್ದೇಶನದ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು, ವೈಲೆನ್ಸ್ ಅತಿಯಾಯಿತು ಎನ್ನುವ ಆರೋಪದ ನಡುವೆಯೂ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: `ಹೌಸ್ ಅರೆಸ್ಟ್’ ಶೋನಲ್ಲಿ ಸೆಕ್ಸ್ ಪೊಸಿಷನ್‌ಗೆ ಒತ್ತಾಯ – ನಟ ಅಜಾಜ್ ಖಾನ್‌ಗೆ ಸಮನ್ಸ್
ʻದಸರಾʼ, ʻಹಾಯ್ ನಾನ್ನʼ, ʻಶನಿವಾರಂ ಸರಿಪೋದʼ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದ ನಾನಿ ಇಡೀಗ ಹಿಟ್-3ನಲ್ಲೂ ಅದೇ ಖದರ್ ಮೇಂಟೇನ್ ಮಾಡಿದ್ದಾರೆ. ಅಲ್ಲದೇ ನಾನಿ ಕೆರಿಯರ್‌ನಲ್ಲೇ ಅತಿಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಸಹ ಇದಾಗಿದೆ. ಇನ್ನು ತಮಿಳಿನ ‘ರೆಟ್ರೋ’ ಹಾಗೂ ಬಾಲಿವುಡ್‌ನ ‘ರೈಡ್-2’ ಸಿನಿಮಾ ಗಳಿಕೆಯನ್ನು ಕೂಡ ‘ಹಿಟ್- 3’ ಸಿನಿಮಾ ಹಿಂದಿಕ್ಕಿದೆ.
ರೊಮ್ಯಾಂಟಿಕ್, ಕ್ಲಾಸ್, ಕಾಮೆಡಿ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದವರು ನಾನಿ. ಆದರೆ ಇತ್ತೀಚೆಗೆ ಮಾಸ್ ಇಮೇಜ್ ಬೆಳೆಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸೋನು ನಿಗಮ್ ಮಾಡಿದ್ದು ಕ್ಷಮಿಸುವಂತಹ ಅಪರಾಧ ಅಲ್ಲ- ಶಮಿತಾ ಮಲ್ನಾಡ್