ಹಾಸನ: `ನಂದಿನಿ’ (Nandini Milk) ನಮ್ಮವಳು, ನಮ್ಮ ಹಾಲು ನಮ್ಮ ಬದುಕು. ಎಲ್ಲ ಹಾಲಿನ ಉತ್ಪನ್ನಗಳ ಬೆಲೆ ಜಾಸ್ತಿಯಾಗಿವೆ. ಆದರೆ ರೈತರಿಗೆ ಯಾವ ತರಹದ ಸಹಾಯ ಆಗಿಲ್ಲ. ರೈತರಿಗೆ (Farmers) ಹಾಲು ಉತ್ಪಾದನೆ ಮಾಡಲು ಸರ್ಕಾರ ಸಹಾಯ ಮಾಡಿಲ್ಲ. ಇದರಿಂದ ನಮ್ಮ ಹಸುಗಳ ಹಾಲನ್ನೇ ನಾವು ಮಾರಾಟ ಮಾಡೋಕೆ ಆಗದ ಪರಿಸ್ಥಿತಿ ಬಂದೊದಗಿದೆ. ಹಾಗಾಗಿ ನಂದಿನಿ ಉತ್ಪನ್ನವನ್ನ ಉಳಿಸಿಕೊಳ್ಳಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಕರೆ ನೀಡಿದ್ದಾರೆ.
Advertisement
ಹಾಸನದ (Hassan) ಹೇಮಾವತಿ ಪ್ರತಿಮೆ ಬಳಿಯ ನಂದಿನಿ ಹಾಲಿನ ಕೇಂದ್ರದಲ್ಲಿಂದು ಸುಮಾರು ಎರಡೂವರೆ ಸಾವಿರ ರೂ. ಮೌಲ್ಯದ ನಂದಿನಿ ಉತ್ಪನ್ನಗಳನ್ನ ಖರೀದಿಸಿದರು. ಹಾಲು, ತುಪ್ಪ, ಮಜ್ಜಿಗೆ, ಮೈಸೂರು ಪಾಕ್ ಸೇರಿ ಹತ್ತಾರು ಉತ್ಪನ್ನ ಖರೀದಿ ಮಾಡಿ ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಹಂಚಿದರು. ಈ ಮೂಲಕ ಅಮುಲ್ ಉತ್ಪನ್ನಕ್ಕೆ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬದವ್ರನ್ನ ಪ್ರಶ್ನೆ ಮಾಡಿದ್ರೆ ಯಾರೂ ಉಳಿಯಲ್ಲ – ಸಿದ್ದರಾಮಯ್ಯ
Advertisement
Advertisement
ಈ ವೇಳೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ರೈತರ ಬದುಕಿನ ಪ್ರಶ್ನೆ ಇದು. ಸುಮಾರು 70 ಲಕ್ಷ ರೈತರು ಹಾಲು ಉತ್ಪಾದನೆ ಮಾಡಿ ನಂದಿನಿಗೆ ಹಾಕುತ್ತಿದ್ದೇವೆ. ಅಮೂಲ್ ಗುಜರಾತ್ ರೈತರದ್ದು, ನಮ್ಮದೇನು ತಕರಾರಿಲ್ಲ. ಆದರೆ ನಮ್ಮ ಉತ್ಪನ್ನವನ್ನ ಹಿಂದಕ್ಕೆ ತಳ್ಳಿ, ಅಮುಲ್ ಮುಂದೆ ತರುವ ಸರ್ಕಾರದ ನಿರ್ಧಾರ ಸರಿಯಲ್ಲ. ಈ ನಂದಿನಿ ನಮ್ಮವಳು, ನಮ್ಮ ಹಾಲು ನಮ್ಮ ಬದುಕು. ಅದಕ್ಕಾಗಿ ನಾವೇ ಪ್ರೋತ್ಸಾಹ ಕೊಟ್ಟು ಹಾಲು ಉತ್ಪಾದನೆ ಮಾಡಲು ಹೊರಟಿದ್ದು, ನಂದಿನಿ ಹಾಲು, ಹಾಲಿನ ಉತ್ಪನ್ನಗಳು ಪೇಡ, ಬಿಸ್ಕೆಟ್, ಚಾಕ್‌ಲೇಟ್ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮುಲ್‍ಗೆ ವಿರೋಧ – ನಂದಿನಿ ಉತ್ಪನ್ನ ಖರೀದಿಸಿ ಹಂಚಿದ ಡಿಕೆಶಿ
Advertisement
ಹಾಸನದ ನಂದಿನಿ ಮಳಿಗೆಗೆ ಇಂದು ಭೇಟಿ ನೀಡಿ ಹಾಲಿನ ಉತ್ಪನ್ನಗಳನ್ನು ಖರೀದಿಸಿದೆ. ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿ ಬ್ರಾಂಡ್ಅನ್ನು ಹೈಜಾಕ್ ಮಾಡಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ಇದು ನೆನಪಿರಲಿ ಕನ್ನಡಿಗರು ಎಂದಿಗೂ ತಮ್ಮ ಸ್ವಾಭಿಮಾನ ಮಾರಿಕೊಳ್ಳುವುದಿಲ್ಲ. pic.twitter.com/k6qs0SGlUs
— DK Shivakumar (@DKShivakumar) April 10, 2023
ಪುನೀತ್‌ಗೆ ಮುತ್ತುಕೊಟ್ಟಿದ್ದು ನಾಟಕನಾ?
ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರು ನಂದಿನಿ ಹಾಲಿನ ಉತ್ಪನ್ನಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ರೈತರು, ರೈತ ಮಹಿಳೆಯರು ಬದುಕಬೇಕು ಅಂತಾ ದೊಡ್ಡ ನಟರು ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳೇ ನೀವೂ ಅವರ ಬಗ್ಗೆ ಗೌರವದ ಮಾತುಗಳನ್ನಾಡಿದ್ದೀರಿ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರನ್ನ ನೆನಪಿಸಿಕೊಳ್ಳುತ್ತಿದ್ದೀರಿ. ಪುನೀತ್ ರಾಜ್‌ಕುಮಾರ್‌ಗೆ ಮುತ್ತು ಕೊಟ್ರಿ ಇದು ಸುಳ್ಳು, ನಾಟಕನಾ? ಎಂದು ಪ್ರಶ್ನಿಸಿದ್ದಾರೆ.