ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಕನಸಿನ ವಂದೇ ಭಾರತ್ ರೈಲಿನ (Vande Bharat Train) ಒಳಗಡೆ ನಂದಿನಿ (Nandini) ಲಗ್ಗೆ ಇಡಲು ಸಜ್ಜಾಗಿದೆ.
ಹೌದು. ಕರ್ನಾಟಕ ಚುನಾವಣೆಯ ಸಮಯದಲ್ಲಿ ನಂದಿನಿ ವರ್ಸಸ್ ಅಮುಲ್ (Amul) ವಿಚಾರ ಜೋರು ಚರ್ಚೆಯಾಗಿತ್ತು. ನಂದಿನಿಯ ಮಾರುಕಟ್ಟೆಯನ್ನು ಅಮುಲ್ ಕಬಳಸಿಲು ಮುಂದಾಗಿದೆ ಎಂದು ಬಿಂಬಿಸಲಾಗುತ್ತಿತ್ತು. ಆದರೆ ಈಗ ನಂದಿನಿ ಉತ್ಪನ್ನಗಳನ್ನು ವಂದೇ ಭಾರತ್ ರೈಲಿನಲ್ಲಿ ವಿತರಿಸಲು ಕೆಎಂಎಫ್ (KMF) ಚಿಂತನೆ ನಡೆಸಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಗೆ ಟೆಂಡರ್: ಪ್ರಮೋದ್ ಮುತಾಲಿಕ್ ಕಿಡಿ
ಸದ್ಯ ರಾಜ್ಯದಲ್ಲಿ ಪ್ರತಿ ದಿನ ಸುಮಾರು 75-85 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಈ ಪೈಕಿ 8ರಿಂದ 9 ಲಕ್ಷ ಲೀಟರ್ ಹಾಲಿನಿಂದ ಇತರೆ ಉತ್ಪನ್ನಗಳ ತಯಾರಿ ನಡೆಸಲಾಗುತ್ತಿದೆ. ಉತ್ಪನ್ನಗಳ ಬಳಕೆಯ ಹಾಲಿನ ಪ್ರಮಾಣ ಏರಿಸಲು ಚಿಂತಿಸಿರುವ ಕೆಎಂಎಫ್ 9 ರಿಂದ 11 ಅಥವಾ 12 ಲಕ್ಷ ಲೀಟರ್ ಹಾಲನ್ನು ಬಳಸಲು ಚಿಂತನೆ ನಡೆಸುತ್ತಿದೆ.
ಲಸ್ಸಿ, ಮಜ್ಜಿಗೆ, ಪೇಡಾ, ನಂದಿನಿ ಕೋಲ್ಡ್ ಹಾಲು, ಪ್ಲೇವರ್ಡ್ ಡ್ರಿಂಕ್ ಸೇರಿದಂತೆ ನಂದಿನ ಉತ್ಪನ್ನಗಳ ಮಾರಾಟಕ್ಕೆ ಕೆಎಂಎಫ್ ಪ್ಲ್ಯಾನ್ ಮಾಡಿದ್ದು ಈ ಸಂಬಂಧ ಸವಿಸ್ತಾರ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.
ಕೆಎಂಎಫ್ ಪ್ಲ್ಯಾನ್ ಏನು?
ಸದ್ಯ ರಾಜ್ಯದಲ್ಲಿ ಪ್ರತಿ ದಿನ ಸುಮಾರು 75-85 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಈ ಪೈಕಿ 8 ರಿಂದ 9 ಲಕ್ಷ ಲೀಟರ್ ಹಾಲಿನಿಂದ ಇತರೇ ಉತ್ಪನ್ನಗಳ ತಯಾರಿಸಲಾಗುತ್ತಿದೆ. ಉತ್ಪನ್ನಗಳ ಬಳಕೆಯ ಹಾಲಿನ ಪ್ರಮಾಣ ಏರಿಸಲು ಕೆಎಂಎಫ್ ಚಿಂತಿಸಿದೆ. 9 ರಿಂದ 11 ಅಥವಾ 12 ಲಕ್ಷ ಲೀಟರ್ ಬಳಕೆಗೆ ಚಿಂತನೆ ಮಾಡಿದೆ. ಉತ್ಪಾದನೆ ಜಾಸ್ತಿಯಾದರೆ ನಂದಿನಿ ಉತ್ಪನ್ನಗಳ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಸಹಾಯವಾಗಲಿದೆ.
Web Stories