ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರೊಂದಿಗೆ ಈಗಾಗಲೇ ಬಸ್ ಟಿಕೆಟ್ ದರ, ಮೆಟ್ರೋ ಪ್ರಯಾಣ ದರ ಏರಿಕೆ ಕಂಡಿದೆ. ಇನ್ನೂ ಹಾಲಿನ ದರ ಸಹ ಏರಿಕೆಯಾಗುವ (Nandini Milk Price) ಸೂಚನೆಯನ್ನು ಕೆಎಂಎಫ್ (KMF) ಅಧ್ಯಕ್ಷ ಭೀಮಾನಾಯ್ಕ್ (Bheema Naik) ನೀಡಿದ್ದಾರೆ.
ಒಂದು ವಾರದಿಂದ ಹತ್ತು ದಿನಗಳಲ್ಲಿ ಹಾಲಿನ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಹಾಲಿನ ದರ 5 ರೂ. ಏರಿಕೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಪರಿಷ್ಕೃತ ಹಾಲಿನ ದರ ಹೆಚ್ಚಳ ಮಾಡುವಾಗಲೇ ಹೆಚ್ಚುವರಿ ಹಾಲಿನ ದರ ಕಡಿತ ಜೊತೆಗೆ 50 ML ಹಾಲು ಕಡಿತ ಮಾಡಲಾಗುತ್ತದೆ. ಹೆಚ್ಚುವರಿ ಹಾಲಿನ ದರ 2 ರೂ. ಇದ್ದು, ಅದು ಕಡಿತವಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಈ ಬಗ್ಗೆ ಮಾತನಾಡಿ, ಹಾಲು ಉತ್ಪಾದಕರು ಪ್ರೋತ್ಸಾಹಧನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹಾಲಿನ ದರ ಏರಿಕೆ ಅನಿವಾರ್ಯವಾಗಿದೆ. ಪ್ರತಿ ಲೀಟರ್‌ಗೆ 5 ರೂ. ಏರಿಕೆಗೆ ಒತ್ತಡವಿದೆ. 2-3 ರೂ. ಏರಿಕೆ ಬಗ್ಗೆ ಚರ್ಚೆಯಾಗುತ್ತಿದೆ ಎಂದಿದ್ದರು.