ಬೆಂಗಳೂರು: ನಂದಿನಿ ನಮ್ಮ ಸಂಸ್ಥೆ, ನಮ್ಮ ಮೆಟ್ರೋದಲ್ಲಿ ಮಳಿಗೆ ಹಾಕುವುದಕ್ಕೆ ನಂದಿನಿಗೆ (Nandini Milk) ಅವಕಾಶ ಕೊಡೋದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.
ನಮ್ಮ ಮೆಟ್ರೋ ಮಳಿಗೆಯಲ್ಲಿ ಅಮುಲ್‌ಗೆ ಜಾಗ ಕೊಟ್ಟು ನಂದಿನಿಗೆ ಜಾಗ ಕೊಡದ ವಿಚಾರದ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಮೆಟ್ರೋದಲ್ಲಿ ಮಳಿಗೆ ಹಾಕಲು ನಾವು ಟೆಂಡರ್ ಕರೆದಿದ್ದೆವು. ನಂದಿನಿ ಅವರು ಭಾಗಿಯಾಗಿರಲಿಲ್ಲ. ಅಮುಲ್ ಅವರು ಟೆಂಡರ್‌ನಲ್ಲಿ ಭಾಗವಹಿಸಿದ್ರು. ಅವರಿಗೆ ಅವಕಾಶ ಕೊಟ್ಟಿದ್ದೇವೆ. ನಂದಿನಿ ಅವರು ಹಾಕಿದ್ರು. ಅವರಿಗೂ ಅವಕಾಶ ಕೊಡ್ತೀವಿ ಎಂದರು. ಇದನ್ನೂ ಓದಿ: ಅಮೂಲ್‌ಗೆ ಮಣೆಹಾಕಿದ್ದ BMRCLಗೆ ಮುಖಭಂಗ- ಮೆಟ್ರೋ ನಿಲ್ದಾಣಗಳಲ್ಲಿ 20 ನಂದಿನಿ ಮಳಿಗೆ ತೆರೆಯಲು ಅವಕಾಶ
ಅಮುಲ್ ಅವರು 10 ಕಡೆ ಕೇಳಿದ್ರು. ನಾವು ಎರಡು ಕಡೆ ಅವಕಾಶ ಕೊಟ್ಟಿದ್ದೇವೆ. ನಂದಿನಿ ನಮ್ಮ ಸಂಸ್ಥೆ ಅವರು ಮುಂದೆ ಬಂದರೆ ಅವರಿಗೂ ಕೊಡ್ತೀವಿ. ಅದು ನಮ್ಮ ಸಂಸ್ಥೆ. ಕಡಿಮೆ ದರಕ್ಕೂ ಬೇಕಾದ್ರು ಕೊಡ್ತೀವಿ. ವಿರೋಧ ಮಾಡೋರು ಪ್ರಚಾರಕ್ಕೆ ಮಾಡ್ತಿದ್ದಾರೆ, ಮಾಡಲಿ ಎಂದು ಟಾಂಗ್ ಕೊಟ್ಟರು.
ಕರ್ನಾಟಕದ ಬ್ರ್ಯಾಂಡ್ ನಂದಿನಿಯನ್ನು ಕಡೆಗಣಿಸಿ, ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ (Amul) ಮಳಿಗೆಗಳನ್ನು ತೆರೆಯಲು ನಮ್ಮ ಮೆಟ್ರೋ (Namma Metro) ಮುಂದಾಗಿತ್ತು. ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮೆಟ್ರೋ ನಿಲ್ದಾಣದಲ್ಲಿ 20 ನಂದಿನಿ ಮಳಿಗೆಗಳನ್ನು ರಿಯಾಯಿತಿ ದರದಲ್ಲಿ ತೆರೆಯಲು BMRCL ಒಪ್ಪಿದೆ. ಇದನ್ನೂ ಓದಿ: ಬೆಂಗಳೂರಿನ 10 ಮೆಟ್ರೋ ಸ್ಟೇಷನ್‌ನಲ್ಲಿ ಅಮುಲ್‌ಗೆ ಪ್ರಮೋಷನ್ – ಕನ್ನಡಿಗರು ಕೆಂಡ