ಮೈಸೂರು: ನಕಲಿ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವನ್ನು ಕೆಎಂಎಫ್ ಅಧಿಕಾರಿಗಳು ಬೇಧಿಸಿದ್ದಾರೆ.
ಇಲ್ಲಿನ ಹೊಸ ಹುಂಡಿಯಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕಾ ಗೋಡೌನ್ ಮೇಲೆ ಮಾನವ ಹಕ್ಕು ಹೋರಾಟಗಾರರ ತಂಡ ದಾಳಿ ನಡೆಸಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಒಂದೇ ದಿನ 2 ಸರಕಳ್ಳತನ – ಆರೋಪಿಗಳು ಪರಾರಿ
ಈ ಗೋಡೌನ್ ಮೂಲಕ ಕಳೆದ ನಾಲ್ಕು ತಿಂಗಳಿಂದ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪವನ್ನು ಮೈಸೂರು ನಗರಾದ್ಯಂತ ಮಾರಾಟ ಮಾಡಲಾಗುತ್ತಿದೆ. ನಕಲಿ ತುಪ್ಪ ತಯಾರಕರ ವಿತರಣಾ ಜಾಲವನ್ನು ಕೊನೆಗೂ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಅಧಿಕಾರಿಗಳ ದಾಳಿ ವೇಳೆ, ಕೆಲವು ಅಸಲಿ ನಂದಿನಿ ತುಪ್ಪದ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಇನ್ನೂ ಕೆಲವನ್ನು ಪ್ಯಾಕಿಂಗ್ ಮಾಡಲಾಗುತ್ತಿತ್ತು. ನಂದಿನಿ ತುಪ್ಪದ ರೂಪವೇ ಬರಲೆಂದು ಅದಕ್ಕೆ ಡಾಲ್ಡಾ ಮಿಶ್ರಣ ಮಾಡಿ ಅದನ್ನು ಟನಲ್‌ನಲ್ಲಿ ತುಂಬಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೈಸೂರು ಅರಮನೆ ಆನೆಗಳು ಗುಜರಾತ್‌ಗೆ ಶಿಫ್ಟ್
ಈ ಮಾದರಿಯ ತುಪ್ಪ ಆರೋಗ್ಯಕ್ಕೆ ಹಾನಿಕಾರಕ. ಈ ಜಾಲದ ಹಿಂದೆ ಯಾರ‍್ಯಾರು ಇದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.