ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆಗೆ (New Year Celebration) ಕೌಂಟ್ ಡೌನ್ ಶುರುವಾಗಿದ್ದು, ಎಲ್ಲೆಲ್ಲೂ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗ್ತಿದೆ. ಆದ್ರೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ (Nandi Hills) ಹೊಸ ವರ್ಷಾಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಅಹಿತಕರ ಘಟನೆಗಳು ನಡೆದಂತೆ ಎಚ್ಚರಿಕೆ ವಹಿಸುವ ಸಲುವಾಗಿ ನಂದಿ ಗಿರಿಧಾಮಕ್ಕೆ ಡಿಸೆಂಬರ್ 31 ರಂದು ಮಧ್ಯಾಹ್ನ 2 ಗಂಟೆಯಿಂದ ಹಾಗೂ ಹೊಸ ವರ್ಷ (New Year 2026) ಜನವರಿ 1 ರ ಬೆಳಗ್ಗೆ 10 ಗಂಟೆಯವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದನ್ನೂ ಓದಿ: ನಮ್ಮ ಗೃಹ ಇಲಾಖೆ ಸತ್ತು ಹೋಗಿದ್ಯಾ? ಇದೆಂಥಾ ಗುಲಾಮಗಿರಿ ಸರ್ಕಾರ? – ಛಲವಾದಿ ನಾರಾಯಣಸ್ವಾಮಿ ನಿಗಿನಿಗಿ
ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ. ಆದ್ರೆ ನಂದಿ ಬೆಟ್ಟದ ಮೇಲ್ಭಾಗದ ಹೋಟೆಲ್ ಗಳಲ್ಲಿ ಮುಂಗಡವಾಗಿ ರೂಮ್ ಬುಕ್ ಮಾಡಿರುವ ಪ್ರವಾಸಿಗರಿಗೆ ವಿನಾಯತಿ ನೀಡಲಾಗಿದೆ. ಇದನ್ನೂ ಓದಿ: ಮನೆ ಬಿಟ್ಟು ಹೋಗ್ತಿನಿ ತವರಿಂದ ಕೊಟ್ಟ ಗಿಫ್ಟ್ ವಾಪಸ್ ಕೊಡಿ ಎಂದಿದ್ದಕ್ಕೆ ಪತ್ನಿಯನ್ನು ಥಳಿಸಿ ಕೊಂದ ಪತಿ



