ಚಿಕ್ಕಬಳ್ಳಾಪುರ: ನಮ್ಮ ನಂದಿ-ಹಸಿರು ಬೆಂಗಳೂರು ಗಿಡ ನೆಡುವ ಅಭಿಯಾನಕ್ಕೆ ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಚಾಲನೆ ನೀಡಿದರು.
Advertisement
ನಂದಿಬೆಟ್ಟ ಸೇರಿದಂತೆ ಸುತ್ತಲಿನ ಬೆಟ್ಡಗುಡ್ಡಗಳಲ್ಲಿ ಗಿಡ ನೆಟ್ಟು ಹಸೀರೀಕರಣ ಮಾಡುವ ಸದುದ್ದೇಶದಿಂದ ನಂದಿಬೆಟ್ಟದ ತಪ್ಪಲಲ್ಲಿ ಗಿಡ ನೆಡುವ ಅಭಿಯಾನಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಿದರು. ಬೆಳ್ಳಂ ಬೆಳಗ್ಗೆ ನಂದಿಬೆಟ್ಟದ ತಪ್ಪಲಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಸದ್ಗುರುಗಳು ಚಾಲನೆ ನೀಡಿದರು. ಸ್ವಯಂ ಸೇವಕರು ಬಿಂದಿಗೆ ಮೂಲಕ ಬೆಟ್ಟಕ್ಕೆ ನೀರು ಹೊತ್ತು ಗಿಡಗಳನ್ನು ನೆಟ್ಟು ಸಂಭ್ರಮಿಸಿದರು. ಇದನ್ನೂ ಓದಿ: 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಸೋನು ಸೂದ್: ಆದಾಯ ತೆರಿಗೆ ಇಲಾಖೆ
Advertisement
Advertisement
ಕೇವಲ ಸಂಘ, ಸಂಸ್ಥೆಗಳು ಹಾಗೂ ಸರ್ಕಾರಿ ಅಧಿಕಾರಿಗಳಿಂದ ಯಾವುದೇ ಕಾರ್ಯಕ್ರಮ ಯಶಸ್ವಿ ಆಗುವುದಿಲ್ಲ. ನಾಗರಿಕರು ಹಾಗೂ ಯುವಕರ ಸಹಕಾರವೂ ಅಗತ್ಯ. ಹೀಗಾಗಿ ಯುವಜನತೆ ಈ ಪರಿಸರ ಸ್ನೇಹಿ ನಂದಿ ಮಾಡಲು ಸಾಥ್ ಕೊಡಬೇಕು ಎಂದು ಸದ್ಗುರುಗಳು ಮನವಿ ಮಾಡಿದರು.
Advertisement
ಚಿಕ್ಕಬಳ್ಳಾಪುರದ ಬಳಿ ಲೀಡರ್ ಶಿಪ್ ಆಕಾಡೆಮಿ ಹಾಗೂ ವಸತಿ ಶಾಲೆ, ಯೋಗ ಸೆಂಟರ್ ಬರಲಿದೆ. ಚಿಕ್ಕಂದಿನಲ್ಲಿ ಚಿಕ್ಕಬಳ್ಳಾಪುರದ ಕಡೆ ಬಹಳ ಸಮಯ ಇರುತ್ತಿದ್ದೆವು. ಆದರೆ ಮತ್ತೆ ಈಗ ಚಿಕ್ಕಬಳ್ಳಾಪುರದ ಕಡೆ ಬರುತ್ತೇವೆಂದು ಅಂದುಕೊಂಡಿರಲಿಲ್ಲ ಎಂದು ನೆನಪುಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ, ಎಸ್‍ಪಿ ಮಿಥುನ್ ಕುಮಾರ್ ಹಾಗೂ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಅರಸಲನ್ ಸೇರಿದಂತೆ ಈಶಾ ಫೌಂಡೇಶನ್ ನ ನೂರಾರು ಸ್ವಯಂ ಸೇವಕರು ಭಾಗಿಯಾಗಿದ್ದರು.