-ನಂದಿಗಿರಿಧಾಮದಲ್ಲಿ ಪ್ರವಾಸಿಗರ ಹುಚ್ಚಾಟ
ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿ ಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರು ಒಂದೇ ಒಂದು ಸೆಲ್ಫೀಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.
ಭೂಮಿ-ಬಾನು ಒಂದಾಗೋ ಆ ಜಾಗದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳೋಕೆ ತಮ್ಮ ಪ್ರಾಣದ ಜೊತೆ ಸೆಣಸಾಟ ನಡೆಸುತ್ತಿದ್ದಾರೆ. ಪ್ರವಾಸಿಗರ ಸುರಕ್ಷತೆಯ ಹಿತದೃಷ್ಠಿಯಿಂದ ನಿರ್ಮಿಸಿರುವ ಐರನ್ ಗ್ರಿಲ್ ಅನ್ನೇ ಹರಸಾಹಸ ಪಟ್ಟು ಹತ್ತುತ್ತಿರುವ ಯುವಕ-ಯುವತಿಯರು, ತಡೆ ಬೇಲಿಯನ್ನೇ ದಾಟಿ ಅಪಾಯಕಾರಿ ಸ್ಥಳಕ್ಕೆ ತಲುಪುತ್ತಿದ್ದಾರೆ. ಅಲ್ಲಿ ಫೋಟೋ, ಸೆಲ್ಫೀ ತೆಗೆದುಕೊಳ್ಳೋಕೆ ಇನ್ನಿಲ್ಲದ ಹುಚ್ಚು ಸಾಹಸಕ್ಕೆ ಮುಂದಾಗಿದ್ದಾರೆ ಎಂದು ಪ್ರವಾಸಿಗರು ಹೇಳಿದ್ದಾರೆ.
Advertisement
Advertisement
ಈ ಹಿಂದೆ ದಟ್ಟ ಮಂಜಿನ ಮಧ್ಯೆ ಬೆಟ್ಟದ ಕೊನೆ ಆಳ-ಅಗಲ ತಿಳಿಯದೆ ಕೆಲವರು ಬೆಟ್ಟದಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ತೋಟಗಾರಿಕೆ ಇಲಾಖೆ, ಪ್ರವಾಸಿಗರ ಹಿತದೃಷ್ಠಿಯಿಂದ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಐರನ್ ಗ್ರಿಲ್ ಕಾಪೌಂಡು ನಿರ್ಮಿಸಿ ಅಪಾಯಕಾರಿ ವಯಲವೆಂದು ಘೋಷಣೆ ಮಾಡಿದೆ. ಆದರೂ ಇಲ್ಲಿಗೆ ಬರುವ ಪ್ರವಾಸಿಗರು ಪ್ರಕೃತಿ ಸೌಂದರ್ಯದ ಜೊತೆ ಫೋಟೋ ತೆಗೆದುಕೊಳ್ಳಲು ಇಲ್ಲಿರುವ ಐದಾರು ಅಡಿ ಎತ್ತರದ ಗ್ರಿಲ್ ನ್ನು ಹತ್ತಿ ಇಳಿದು ಅಪಾಯಕಾರಿ ಸ್ಥಳ ತಲುಪಿ ಹರಸಾಹಸ ಮಾಡುತ್ತಿದ್ದಾರೆ. ಅಪಾಯಕಾರಿ ಸ್ಥಳದಲ್ಲಿ ನಿಂತು ಫೋಟೋ ತೆಗೆದುಕೊಳ್ಳುವ ಹುಚ್ಚು ಸಾಹಸ ಹೆಚ್ಚಾಗಿದ್ದು, ನಂದಿಗಿರಿಧಾಮದ ಅಧಿಕಾರಿಗಳಿಗೆ ತಲೆನೋವಾಗಿದೆ ಎಂದು ವಿಶೇಷಾಧಿಕಾರಿ ರಮೇಶ್ ತಿಳಿಸಿದ್ದಾರೆ.
Advertisement
Advertisement
ಅಸಲಿಗೆ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಲು ಅಂತಾನೇ ಬರುತ್ತಾರೆ. ಕೆಲವೆಡೆ ವಿವ್ಯೂ ಪಾಯಿಂಟ್ ನಿರ್ಮಾಣ ಮಾಡಿದ್ದು, ಅಲ್ಲಿ ಫೋಟೋ ತೆಗೆದುಕೊಳ್ಳೋಕೆ ಅವಕಾಶವಿದೆ. ಆದರೆ ಅಪಾಯಕಾರಿ ಸ್ಥಳಗಳಲ್ಲಿ ಕಾಪೌಂಡ್ ನಿರ್ಮಾಣ ಮಾಡಿ ಪ್ರವಾಸಿಗರ ಪ್ರವೇಶ ನಿಷೇಧ ಮಾಡಿದ್ದರೂ ಕೆಲವು ಯುವಕ-ಯುವತಿಯರು ಒಂದೇ ಒಂದು ಫೋಟೊಗಾಗಿ ಆಪತ್ತನ್ನೇ ಮೈ ಮೇಲೆ ಎಳೆದುಕೊಳ್ಳುತ್ತಾ ಹುಚ್ಚು ಸಾಹಸ ಮಾಡುತ್ತಿರುವುದು ಸ್ಥಳೀಯ ಪೋಲಿಸರು ಹಾಗೂ ಗಿರಿಧಾಮದ ಅಧಿಕಾರಿಗಳಿಗಳಿಗೂ ತಲೆನೋವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews