ಚಿಕ್ಕಬಳ್ಳಾಪುರ: ರೈತನ ಬಳಿ ಹಣ ಕಸಿದು ನಂದಿಬೆಟ್ಟಕ್ಕೆ ಹೋಗಿ ಮಜಾ ಮಾಡಿದ್ದ ಯುವಕರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ನಂದಿಬೆಟ್ಟ ನೋಡಬೇಕು ಅಂತ ಬೆಂಗಳೂರಿನಿಂದ ಬೈಕ್ ಏರಿ ನಂದಿಬೆಟ್ಟಕ್ಕೆ ಬಂದಿದ್ದ ಯುವಕರು ಚೆಕ್ ಪೋಸ್ಟ್‌ನಲ್ಲಿ ಟಿಕೆಟ್ ಖರೀದಿ ಮಾಡಲು ಹಣ ಇಲ್ಲದೆ, ರೈತರೊಬ್ಬರ ಬಳಿ ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿ ನಂದಿಬೆಟ್ಟಕ್ಕೆ ಹೋಗಿ ಮೋಜು ಮಸ್ತಿ ಮಾಡಿರುವ ಘಟನೆ ಈ ಹಿಂದೆ ನಡೆದಿತ್ತು.
Advertisement
Advertisement
ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಈಗ ಬಂಧಿಸಿದ್ದಾರೆ. ಬೆಂಗಳೂರಿನ ನಾಗವಾರದ ಗೋವಿಂದಪುರದ ಸಯ್ಯದ್ ಸಲೀಂ, ಸಯ್ಯದ್ ಅಬೀಬ್ ಉಲ್ಲಾ ಬಂಧಿತ ಆರೋಪಿಗಳು. ಇದನ್ನೂ ಓದಿ: ಮುಳಬಾಗಿಲು ಗಂಗಮ್ಮ ದೇವಾಲಯ ಮುಂಭಾಗವೇ ಕೈ ನಗರಸಭೆ ಸದಸ್ಯನ ಬರ್ಬರ ಕೊಲೆ
Advertisement
Advertisement
ಗೋವಿಂದಪುರದ 7 ಮಂದಿ ಆರೋಪಿಗಳು ಏಪ್ರಿಲ್ 29 ರಂದು ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಬಂದಿದ್ದರು. ಚೆಕ್ ಪೋಸ್ಟ್ ಬಳಿ ಟಿಕೆಟ್ ಖರೀದಿ ಮಾಡೋಕು ದುಡ್ಡಿಲ್ಲದೆ ವಾಪಾಸ್ಸಾಗಿದ್ದಾರೆ. ಆದರೆ ಈ ವೇಳೆ ದೊಡ್ಡಬಳ್ಳಾಪುರ ಮಾರ್ಗದ ಕಡೆಗೆ ಬಂದ ಮೂವರು ಯುವಕರು ಮೇಳೆಕೋಟೆ ಕ್ರಾಸ್ ಬಳಿ ಮೇಳೆಕೋಟೆ ಗ್ರಾಮದ ರೈತ ರಾಜಣ್ಣ ನನ್ನ ಬೆದರಿಸಿ ರಾಜಣ್ಣನ ಬಳಿ ಇದ್ದ ಮೊಬೈಲ್ ಹಾಗೂ 25,200 ರೂಪಾಯಿ ಹಣ ಕಸಿದು ಪರಾರಿಯಾದ್ದರು. ಇದನ್ನೂ ಓದಿ: ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು
ಕದ್ದ ಹಣದಿಂದ ಮತ್ತೆ ನಂದಿಬೆಟ್ಟಕ್ಕೆ ಹೋಗಿ ಮಸ್ತ್ ಮಜಾ ಮಾಡಿದ್ದಲ್ಲದೇ ನಂದಿಬೆಟ್ಟದಿಂದ ವಾಪಸ್ ಬಂದು ಮದ್ಯ, ಚಿಕನ್ ಮಟನ್ ಪಾರ್ಟಿ ಅಂತ ಹಣ ಖರ್ಚು ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬೆಂಗಳೂರು ಮೂಲದ ಇಬ್ಬರು ಯುವಕನರನ್ನು ಬಂಧಿಸಿದ್ದೇವೆ ಅಂತ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಎಸ್ಪಿ ಕೋನವಂಶಿ ಕೃಷ್ಣ ತಿಳಿಸಿದರು.
ಏಪ್ರಿಲ್ 29 ರಂದು ರೈತ ರಾಜಣ್ಣ ತಾನು ಬೆಳೆದಿದ್ದ ಬೀನ್ಸ್‌ನ್ನು ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಗೆ ಹಾಕಿ ಬಂದು 25,200 ರೂಪಾಯಿ ಹಣ ಜೇಬಲ್ಲಿ ಇಟ್ಟು ಕೊಂಡು ತನ್ನದೇ ಸ್ಕೂಟಿಯಲ್ಲಿ ಸ್ವಗ್ರಾಮ ಮೇಳೆಕೋಟಗೆ ಬರುತ್ತಿದ್ದರು. ಈ ವೇಳೆ ಮೇಳೆಕೋಟೆ ಕ್ರಾಸ್‍ನಿಂದ ಮೇಳೆಕೋಟೆ ಗ್ರಾಮದ ಕಡೆಯು ರಸ್ತೆ ಮಧ್ಯೆ ಬಂದ ಈ ಸಯ್ಯದ್ ಸಲೀಂ, ಹಾಗೂ ಸಯ್ಯದ್ ಅಬೀಬ್ ಉಲ್ಲಾ ಹಾಗೂ ಮತ್ತೋರ್ವ ಯುವಕ ಘಾಟಿ ದೇವಾಲಯಕ್ಕೆ ಹೇಗೆ ಹೋಗಬೇಕು ಅಂತ ಅಡ್ರೆಸ್ ಕೇಳೋ ನೆಪದಲ್ಲಿ ಅಡಗಟ್ಟಿದ್ದರು.
ರಾಜಣ್ಣ ಸ್ಕೂಟಿ ನಿಲ್ಲಿಸಿ ಅಡ್ರೆಸ್ ಹೇಳುತ್ತಿದ್ದರೆ ಇತ್ತ ಮೂವರು ಯುವಕರು ಚಾಕು ಹಿಡಿದು ರಾಜಣ್ಣನಿಗೆ ಕುತ್ತಿಗೆ ಹೊಟ್ಟೆ ಬೆನ್ನಿಗೆ ಚುಚ್ಚಿ ಹಿಡಿದಿದ್ದಾರೆ. ಈ ವೇಳೆ ಯುವಕರೇ ಕೈ ಹಾಕಿ ರಾಜಣ್ಣ ಜೇಬಿನಲ್ಲಿದ್ದ ಹಣ ಹಾಗೂ ಮೊಬೈಲ್ ತೆಗೆದುಕೊಂಡು ಎಸ್ಕೇಪ್ ಆಗಿದ್ದರು. ರೈತ ರಾಜಣ್ಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು 2 ತಿಂಗಳ ನಂತರ ಕದ್ದಿದ್ದ ಮೊಬೈಲ್ ಲೋಕೇಷನ್ ಪತ್ತೆ ಹಚ್ಚಿ ಇಬ್ಬರು ಯುವಕರನ್ನ ಬಂಧಿಸಿದ್ದಾರೆ. ಬಂಧಿತರಿಂದ 10,000 ರೂ. ನಗದು ಒಂದು ಮೊಬೈಲ್ ವಶಪಡಿಸಿಕೊಂಡು ಉಳಿದವರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.