ಯಾದಗಿರಿ: ಉತ್ತರ ಕರ್ನಾಟಕದ (North Karnataka) ಕೆಲವು ಭಾಗಗಳಲ್ಲಿ ಕೆಲವು ದಿನಗಳಿಂದ ಮತ್ತೆ ವರುಣದ ಅಬ್ಬರ ಶುರುವಾಗಿದ್ದು, ಯಾದಗಿರಿ (Yadagiri) ಜಿಲ್ಲೆಯ ಗುರುಮಠಕಲ್ (Gurumitkal) ತಾಲೂಕಿನ ನಂದೆಪಲ್ಲಿ ಸೇತುವೆ (Nandepalli Bridge) ಸಂಪೂರ್ಣ ಜಲಾವೃತವಾಗಿದೆ.
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ವರುಣನ ಅಬ್ಬರ ಜೋರಾಗಿದ್ದು, ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ನಂದೆಪಲ್ಲಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಗ್ರಾಮದಲ್ಲಿ ಮನೆಯೊಂದಕ್ಕೆ ಮಳೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.ಇದನ್ನೂ ಓದಿ: Paralympics | ನಿಶಾದ್ ಕುಮಾರ್‌ಗೆ ಬೆಳ್ಳಿ, ಪ್ರೀತಿ ಪಾಲ್‌ಗೆ ಕಂಚು
ನಿರಂತರ ಮಳೆಯಾಗುತ್ತಿರುವ ಪರಿಣಾಮ ಜಲಪಾತಗಳು ಉಕ್ಕಿ ಹರಿಯುತ್ತಿವೆ. ಶ್ರೀ ಗವಿಸಿದ್ದೇಶ್ವರ ಗರ್ಭ ಗುಡಿಯ ಮೇಲ್ಭಾಗದಲ್ಲಿ ಹರಿಯುವ ಚಿಂತನಹಳ್ಳಿ ಜಲಪಾತ (Chintanahalli Falls) ಉಕ್ಕಿ ಹರಿಯುತ್ತಿದೆ.
ಮೊಟ್ನಳ್ಳಿ (Motnalli) ಗ್ರಾಮದಲ್ಲಿರುವ 15ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.ಇದನ್ನೂ ಓದಿ: ಚಲಿಸುತ್ತಿದ್ದ ಕಾರುಗಳ ಮೇಲೆ ಧರೆಗೆ ಉರುಳಿದ ಮರ: ಇಬ್ಬರಿಗೆ ಗಾಯ