ಹೈದರಾಬಾದ್: ಟಾಲಿವುಡ್ ನಟ, ಆಂಧ್ರಪ್ರದೇಶ ಮಾಜಿ ಸಿಎಂ ನಂದಮೂರಿ ರಾಮಾರಾವ್ ಅವರ ಪುತ್ರ ಹರಿಕೃಷ್ಣರ ಆಕಾಲಿಕ ಮರಣ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ತೀವ್ರ ದು:ಖ ಉಂಟು ಮಾಡಿದ್ದು, ಕಳೆದ ಕೆಲ ದಿನಗಳ ಹಿಂದೆ ಹರಿಕೃಷ್ಣ ಅವರು ಅಭಿಮಾನಿಗಳಿಗೆ ಬರೆದ ಪತ್ರ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹರಿಕೃಷ್ಣ ಅವರು ಬದುಕಿದ್ದರೆ ಸೆಪ್ಟೆಂಬರ್ 2ರಂದು 62ಕ್ಕೆ ವಸಂತಕ್ಕೆ ಕಾಲಿಡುತ್ತಿದ್ದರು. ಈ ವೇಳೆ ಪ್ರತಿ ವರ್ಷದಂತೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿ ತಮ್ಮ ನೆಚ್ಚಿನ ನಟನ ಹುಟ್ಟಹಬ್ಬ ಆಚರಿಸುತ್ತಿದ್ದರು. ಇದನ್ನು ತಿಳಿದಿದ್ದ ಹರಿಕೃಷ್ಣ ಅವರು ಈ ಬಾರಿ ಕೇರಳದಲ್ಲಿ ಮಳೆಯಿಂದ ಪ್ರವಾಹ ಉಂಟಾಗಿದ್ದು, ಅಭಿಮಾನಿಗಳು ತಮ್ಮ ಹುಟ್ಟು ಹಬ್ಬ ಆಚರಣೆ ಮಾಡದೆ ಆ ಹಣವನ್ನು ಸಂತ್ರಸ್ತರಿಗೆ ನೀಡುವಂತೆ ಮನವಿ ಮಾಡಿದ್ದರು. ಇದನ್ನು ಓದಿ: ದಯವಿಟ್ಟು ನೈಟ್ ಜರ್ನಿ ವೇಳೆ ಸ್ವಲ್ಪ ಹುಷಾರಾಗಿರಿ ಎಂದು ಹೇಳಿ ನಂದಮೂರಿ ನಿಧನಕ್ಕೆ ಹ್ಯಾಟ್ರಿಕ್ ಹೀರೋ ಸಂತಾಪ
https://twitter.com/TollyBattel/status/1034655323934535680
ಈ ಕುರಿತು ತಮ್ಮ ಅಭಿಮಾನಿಗಳಿಗೆ ಸ್ವತಃ ಒಂದು ಪುಟದ ಪತ್ರ ಬರೆದಿದ್ದ ಅವರು, ಆಂಧ್ರಪ್ರದೇಶ ಕೆಲ ಜಿಲ್ಲೆಗಳು ಹಾಗೂ ಕೇರಳದಲ್ಲಿ ಪ್ರವಾಹದಿಂದ ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಹಲವರು ನಿರಾಶ್ರಿತರಾಗಿದ್ದಾರೆ. ಅದ್ದರಿಂದ ತಮ್ಮ ಹುಟ್ಟುಹಬ್ಬದಂದು ಹಾಕುವ ಫ್ಲೆಕ್ಸ್, ಹೂವಿನ ಹಾರ, ಕೇಕ್‍ಗೆ ವೆಚ್ಚ ಮಾಡುವ ಹಣವನ್ನು ಸಂತ್ರಸ್ತರಿಗೆ ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಇದನ್ನು ಓದಿ: ಎನ್‍ಟಿಆರ್ ಕುಟುಂಬಕ್ಕೆ ನಲ್ಗೊಂಡ ಮಾರ್ಗ ಶಾಪವೇ?
ಸದ್ಯ ಹರಿಕೃಷ್ಣ ಅವರ ಪಾರ್ಥಿಕ ಶರೀರವನ್ನು ಹೈದರಾಬಾದ್‍ನಲ್ಲಿರುವ ಅವರ ನಿವಾಸಕ್ಕೆ ಸಾಗಿಸಲಾಗಿದೆ. ಭಾರತದ ಹಲವು ಚಿತ್ರರಂಗದ ಗಣ್ಯರು ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಹರಿಕೃಷ್ಣ ಅವರ ಅಂತಿಮ ಸಂಸ್ಕಾರಗಳು ನಾಳೆ ನಡೆಯಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಈ ಹಿಂದೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಜಾನಕಿರಾಮ್‍ರ ಪಕ್ಕದಲ್ಲೇ ಹರಿಕೃಷ್ಣ ಸಂಸ್ಕಾರ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಹರಿಕೃಷ್ಣ ಅವರ ಅಂತಿಮ ಸಂಸ್ಕಾರಕ್ಕೆ ತೆಲಂಗಾಣ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಇದನ್ನು ಓದಿ: ಡ್ರೈವರಿಂದ ಸ್ಟಾರ್ ವರೆಗೂ ಎಲ್ಲರನ್ನೂ ಒಂದೇ ರೀತಿಯಾಗಿ ನೋಡ್ತಿದ್ರು: ಹರಿಕೃಷ್ಣ ಬಗ್ಗೆ ರವಿಶಂಕರ್ ಮಾತು
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=2283Fb13–Y