ಬಾಲಿವುಡ್ ನಟ ನಾನಾ ಪಾಟೇಕರ್, ದಿ ಕಾಶ್ಮೀರ್ ಫೈಲ್ಸ್ (The Kashmir Files) ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ದಟ್ಟವಾಗಿಯೇ ಕೇಳಿ ಬರುತ್ತಿದೆ. ಸದ್ಯ ವಿವೇಕ್ ಅಗ್ನಿಹೋತ್ರಿ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ನಾಯಕನಾಗಿ ನಾನಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಧಿಕೃತವಾಗಿ ವಿವೇಕ್ ಅಗ್ನಿಹೋತ್ರಿಯಾಗಲಿ, ನಾನಾ ಪಾಟೇಕರ್ (Nana Patekar) ಆಗಲಿ ಈ ವಿಷಯವನ್ನು ಹೇಳದೇ ಇದ್ದರೂ, ಈ ಸುದ್ದಿಯಂತೂ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ. ಇಂಥದ್ದೊಂದು ಜೋಡಿ ಒಟ್ಟಾಗಿ ಸಿನಿಮಾ ಮಾಡಲು ಸಾಧ್ಯವಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಹಾಗಾಗಿ ಈ ಸುದ್ದಿ ಗಾಸಿಪ್ ಅಂತಾನೂ ಹೇಳಲಾಗುತ್ತಿದೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
ಸಿನಿಮಾ ವಿಚಾರದಲ್ಲಿ ಅವರು ನಟ, ಇವರು ನಿರ್ದೇಶಕ. ಹೇಳುವ ಕಥೆಗೂ ಮತ್ತು ಖಾಸಗಿ ಜೀವನಕ್ಕೂ ಸಂಬಂಧವಿಲ್ಲ. ಹಾಗಾಗಿ ಒಟ್ಟಾಗಿ ಸಿನಿಮಾ ಮಾಡುವುದರಲ್ಲಿ ಯಾವುದೇ ತೊಂದರೆ ಆಗಲಾರದು. ಈ ರೀತಿಯ ಜೋಡಿಯು ಒಟ್ಟಾಗಿ ಸಿನಿಮಾ ಮಾಡಿದರೆ, ಅಲ್ಲೊಂದು ಬೇರೆ ರೀತಿಯ ಸಂದೇಶ ಕೂಡ ಹೋಗಬಹುದು ಎನ್ನುತ್ತಾರೆ ಹಲವರು. ಯಾರು ಏನೇ ಹೇಳಿದರೂ, ವಿವೇಕ್ ಸಿನಿಮಾ ಮಾಡಲು ಒಪ್ಪಿಕೊಂಡರೂ, ನಾನಾ ಇದಕ್ಕೆ ಒಪ್ಪುತ್ತಾರಾ ಕಾದು ನೋಡಬೇಕು.
ದಿ ವ್ಯಾಕ್ಸಿನ್ ವಾರ ಸಿನಿಮಾದ ಸ್ಕ್ರಿಪ್ಟ್ ಮುಗಿದಿದೆ. ಇನ್ನಷ್ಟೇ ಚಿತ್ರತಂಡ ಶೂಟಿಂಗ್ ಗೆ ಹೊರಡಬೇಕು. ಕೋವಿಡ್ ವೇಳೆಯಲ್ಲಿ ನಡೆದ ಘಟನೆಯನ್ನೇ ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ವಿವೇಕ್. ಇದೊಂದು ದೇಶವೇ ಹೆಮ್ಮೆ ಪಡುವಂತಹ ಸಿನಿಮಾವಾಗಲಿದೆ ಎಂದು ಈ ಹಿಂದೆಯೇ ವಿವೇಕ್ ಹೇಳಿದ್ದಾರೆ.