ಬಿಗ್ ಬಾಸ್ ಮನೆಯಿಂದ (Bigg Boss Kannada 10) 9ನೇ ವಾರ ಸ್ನೇಹಿತ್ ಔಟ್ ಆದರು. ಸ್ನೇಹಿತ್ (Snehith Gowda) ಎಲಿಮಿನೇಟ್ ಆದ್ಮೇಲೆ ನಮ್ರತಾ ಬಿಕ್ಕಿ ಬಿಕ್ಕಿ ಅತ್ತರು. ಸ್ನೇಹಿತ್‌ನ ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಅಂತ್ಹೇಳಿ ನಮ್ರತಾ ಕಣ್ಣೀರು ಸುರಿಸಿದ್ದರು. ಇದೀಗ ಪರೋಕ್ಷವಾಗಿ ಸ್ನೇಹಿತ್‌ಗೆ ನಮ್ರತಾ (Namratha Gowda) ‘ಐ ಲವ್ ಯೂ’ ಎಂದಿದ್ದಾರೆ.
ಈ ವಾರ ಸ್ಕೂಲ್ ಟಾಸ್ಕ್ ಚಾಲ್ತಿಯಲ್ಲಿದೆ. ಸ್ಪರ್ಧಿಗಳು ಶಿಕ್ಷಕರಾಗಿ, ವಿದ್ಯಾರ್ಥಿಗಳಾಗಿ ಬದಲಾಗಿದ್ದಾರೆ. ನಮ್ರತಾ ಶಾಲಾ ಪುಟ್ಟ ಬಾಲಕಿಯ ಪಾತ್ರ ನಿರ್ವಹಿಸುತ್ತಿದ್ದರು. ಈ ವೇಳೆ, ಸ್ಲೇಟ್ ಮೇಲೆ ಐ ಲವ್ ಯೂ ಎಂದು ನಮ್ರತಾ ಬರೆದಿದ್ದಾರೆ.
ಆಗ, ಶಿಕ್ಷಕಿಯ ಪಾತ್ರ ನಿರ್ವಹಿಸುತ್ತಿದ್ದ ತನಿಷಾ (Tanisha Kuppanda) ಯಾರಿಗಾಗಿ ಬರೆದಿದ್ದು? ಅಂತ ಕೇಳಿದರು. ಅದಕ್ಕೆ, ಟ್ರಾನ್ಸ್ಫರ್ ಆಗಿ ಹೋದ ಹುಡುಗನಿಗಾಗಿ ಬರೆದಿದ್ದು ಎಂದು ಎಲಿಮಿನೇಟ್ ಆದ ಸ್ನೇಹಿತ್ ಕುರಿತಾಗಿ ಅಂತ ನಮ್ರತಾ ಹೇಳುತ್ತಾರೆ. ಅಲ್ಲಿಗೆ, ಸ್ನೇಹಿತ್‌ಗೆ ನಮ್ರತಾ ‘ಐ ಲವ್ ಯೂ’ ಎಂದು ಬರೆದಿದ್ದು ಅಂತ ಸ್ಪಷ್ಟವಾಯಿತು.
ಬಿಗ್ ಬಾಸ್ ಮನೆಗೆ (Bigg Boss Kannada 10) ಕಾಲಿಟ್ಟ ದಿನದಿಂದಲೂ ನಮ್ರತಾ ಹಿಂದೆಯೇ ಸ್ನೇಹಿತ್ ಇರುತ್ತಿದ್ದರು. ಹಲವು ಬಾರಿ ಸ್ನೇಹಿತ್, ನಮ್ರತಾಗೆ ಪ್ರೇಮ ನಿವೇದನೆ ಮಾಡಿದ್ದರು. ಆದರೆ ನಮ್ರತಾ, ಬಿಗ್ ಬಾಸ್ ಮನೆಯಲ್ಲಿ ನನಗೆ ಲವ್ ಆಗುತ್ತೆ ಅಂತ ಅನ್ಸಲ್ಲ. ಹೊರಗಡೆ ನೋಡೋಣ ಎಂದು ಹೇಳಿದ್ದರು.ಇದನ್ನೂ ಓದಿ:Yash: ‘ಟಾಕ್ಸಿಕ್’ಗೆ ಶೃತಿ ಹಾಸನ್, ಜೆರೆಮಿಸ್ಟಾಕ್ ಸಾಥ್
ಪ್ರಪೋಸಲ್ ರಿಜೆಕ್ಟ್ ಮಾಡಿದಾಗಲೆಲ್ಲಾ ಸ್ನೇಹಿತ್ ಹೇಳಿದ್ದರು. ನಿಮಗೆ ಈಗ ನನ್ನ ಮೇಲೆ ಫೀಲಿಂಗ್ಸ್ ಬರೋದಿಲ್ಲಾ. ನಿಮ್ಮ ಪಕ್ಕದಲ್ಲಿ ನಾನು ಇಲ್ಲದೇ ಇದ್ದಾಗ ನನ್ನ ಬೆಲೆ ಗೊತ್ತಾಗುತ್ತೆ ನೋಡಿ ಎಂದಿದ್ದರು. ಅದರಂತೆಯೇ ನಮ್ರತಾಗೆ ಈಗ ಮಿಸ್ಸಿಂಗ್ ಫೀಲಿಂಗ್ ಶುರುವಾಗಿದೆ. ಐ ಲವ್ ಯೂ ಸ್ನೇಹಿತ್ ಅಂತ ಪರೋಕ್ಷವಾಗಿ ನಮ್ರತಾ ಸಂದೇಶ ರವಾನಿಸಿದ್ದಾರೆ.