Bigg Boss: ಸ್ನೇಹಿತ್‌ಗೆ ಸೈಕ್ ಮಾಡಿದೋರನ್ನ ಬಿಡೋದಿಲ್ಲ ಎಂದು ಗುಡುಗಿದ ವಿನಯ್

Public TV
2 Min Read
vinay gowda 2

ಬಿಗ್ ಬಾಸ್ ಮನೆಯಿಂದ (Bigg Boss Kannada 10) ಸ್ನೇಹಿತ್ ಗೌಡ (Snehith Gowda) ಔಟ್ ಆಗ್ತಿದ್ದಂತೆ ನಮ್ರತಾ ಗಳಗಳನೇ ಅತ್ತಿದ್ದಾರೆ. ಮಿಸ್ ಯೂ ಸ್ನೇಹಿತ್ ಎಂದು ನಮ್ರತಾ ಗೋಗರೆದಿದ್ದಾರೆ. ಬಳಿಕ ಸ್ನೇಹಿತ್‌ಗೆ ಸಂಗೀತಾ, ತನಿಷಾ ಸೈಕ್ ಮಾಡಿದ್ದರು. ಅವರನ್ನೆಲ್ಲಾ ಸುಮ್ಮನೆ ಬಿಡಲ್ಲ ಎಂದು ನಮ್ರತಾ ಎದುರು ವಿನಯ್ (Vinay Gowda) ಶಪಥ ಮಾಡಿದ್ದಾರೆ.

tanisha 1

ದೊಡ್ಮನೆ ಆಟದಿಂದ ಸ್ನೇಹಿತ್ ಎಲಿಮಿನೇಟ್ ಆಗಿದ್ದೇ ತಡ, ನಮ್ರತಾ ಗೌಡ ಅವರು ಕಣ್ಣೀರು ಹಾಕಲು ಆರಂಭಿಸಿದ್ದಾರೆ. ಅವಕಾಶ ಸಿಕ್ಕಾಗೆಲ್ಲ ಸ್ನೇಹಿತ್‌ಗೆ ತುಂಬ ನೋವು ಮಾಡಿದ್ದೀನಿ ಅಂತ ನಮ್ರತಾ ಕಣ್ಣೀರು ಹಾಕಿದ್ದಾರೆ. ಅವಿನಾಶ್‌ಗಿಂತ ಚೆನ್ನಾಗಿ ಆಡಿದ್ದ ಸ್ನೇಹಿತ್‌ಗೆ ಸಂಗೀತಾ, ತನಿಷಾ ಹಿಂಸೆ ಕೊಟ್ಟಿದ್ದಾರೆ. ಅವರಿಬ್ಬರನ್ನು ಮಾತ್ರ ಸುಮ್ಮನೆ ಬಿಡಬಾರದು ಅಂತ ನಮ್ರತಾ, ವಿನಯ್ ಗೌಡ ಹೇಳಿದ್ದಾರೆ.

NAMRATHA GOWDA 1

ನಮ್ರತಾ ಗೌಡ (Namratha Gowda) ಅವರನ್ನು ತುಕಾಲಿ ಸ್ಟಾರ್ ಸಂತು, ಸಂತೋಷ್, ಸಿರಿ, ಪವಿ ಅವರು ಸಮಾಧಾನ ಮಾಡಿದ್ದಾರೆ. ಸ್ನೇಹಿತ್ ಒಳ್ಳೆಯ ಹುಡುಗ ಅಂತ ನಮ್ರತಾ ಕಣ್ಣೀರು ಹಾಕಿದ್ದಾರೆ. ನನ್ನ ಜೊತೆ ಸ್ನೇಹಿತ್ ಆಡಿದ್ದು ಕಾಣಿಸಲೇ ಇಲ್ವಾ? ಅವಿನಾಶ್‌ಗಿಂತ, ಬೇರೆಯವರಿಗಿಂತ ಸ್ನೇಹಿತ್ ಕೆಟ್ಟದಾಗಿ ಆಡಿದ್ರಾ? ಅವನು ಒಳ್ಳೆಯ ಹುಡುಗ. ಜನರಿಗೆ ಕಾಣಿಸಿಲ್ಲ ಅಂದ್ರೆ? ಎರಡು ಸಲ ಕ್ಯಾಪ್ಟನ್ ಆದರು ಎಂದು ನಮ್ರತಾ ಹೇಳಿದ್ದಾರೆ. ಇದನ್ನೂ ಓದಿ:ಮನುಷ್ಯರಾ ಇವರು- ವಿನಯ್‌ ಟೀಮ್‌ ವಿರುದ್ಧ ಗುಡುಗಿದ ಡ್ರೋನ್

ವಿನಯ್ ಅವರು, ಇದೇ ಲಾಸ್ಟ್ ದಿನ ಅಂತ ಆಟ ಆಡೋಣ ಅಂತ ಸ್ನೇಹಿತ್ ಹೇಳ್ತಿದ್ರು. ಸ್ವಲ್ಪ ಗೊಂದಲ ಇದ್ರೂ ಚೆನ್ನಾಗಿ ಆಡಿದ ಅಂತ ನಮ್ರತಾ ಹೇಳಿದಾಗ, ತನಿಷಾ, ಸಂಗೀತಾ ಪ್ರೆಶರ್ ಹಾಕಿ ಗೊಂದಲ ಮಾಡಿದ್ರು. ಪ್ಲ್ಯಾನ್ ಪ್ರಕಾರ ಅವನು ಚೆನ್ನಾಗಿ ಆಡ್ತಿದ್ದ. ಎರಡು ದಿನ ಏನು ಮಾಡಬೇಕು ಅಂತ ಅವನಿಗೆ ಗೊತ್ತಾಗಲಿಲ್ಲ, ಸೈಕ್ ಆಗಿ ಬಿಟ್ಟ, ಯಾವುದು ಸರಿ? ಯಾವುದು ತಪ್ಪು ಅಂತ ಗೊತ್ತಾಗಲಿಲ್ಲ ಅವನಿಗೆ ಎಂದು ಸ್ನೇಹಿತ್ ಪರ ವಿನಯ್ ಮಾತನಾಡಿದ್ದಾರೆ. ಬಿಡಬಾರದು ಅವರನ್ನ ಅಂತ ನಮ್ರತಾ ಹೇಳಿದ್ದಾರೆ. ಆಗ ನಮ್ರತಾ ಮಾತಿಗೆ ಧ್ವನಿಗೂಡಿಸಿ ಬಿಡೋದೆ ಇಲ್ಲ ಎಂದು ವಿನಯ್ ಹೇಳಿದ್ದಾರೆ. ಮತ್ತೆ ಆಟ ದ್ವೇಷಕ್ಕೆ ತಿರುಗಿ ಪರ್ಸನಲ್ ಆಗುತ್ತಾ ಎಂದು ಕಾಯಬೇಕಿದೆ.

Share This Article