ಬೆಂಗಳೂರು: ಖಾಸಗಿ ವಾಹಿನಿಯ ಧಾರಾವಾಹಿಯ ಕಲಾವಿದರಾದ ನಮೃತ ಗೌಡ, ಸಿಂಧೂ ಕಲ್ಯಾಣ ಹಾಗೂ ಗೆಳತಿ ಪ್ರಿಯಾಂಕ ಅಯ್ಯರ್ ವಿದೇಶದಲ್ಲಿ ಕರುನಾಡಿನ ಕನ್ನಡದ ಕಂಪನ್ನು ವಿದೇಶದಲ್ಲಿ ಪಸರಿಸಿದ್ದಾರೆ.
ನಮೃತ ಗೌಡ ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ನಮೃತಾ, ಸಿಂಧೂ ಮತ್ತು ಪ್ರಿಯಾಂಕ ಅಯ್ಯರ್ ಮೂವರು ಫ್ರಾನ್ಸ್ ನಲ್ಲಿರುವ ಪ್ಯಾರಿಸ್ ಓಪೆರಾ ಹೌಸ್ ಮುಂದೆ ‘ಜಸ್ಟ್ ಜಸ್ಟ್.. ಮಾತಲ್ಲಿ’ ಹಾಡನ್ನು ಹಾಡಿದ್ದಾರೆ. ವಿದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತೇವೆ. ಈ ವೇಳೆ ಮೂವರು ಗೆಳತಿಯರು ಕನ್ನಡ ಹಾಡು ಹಾಡಿದ್ದಾರೆ.
https://www.instagram.com/p/Bo9j4VCnq-6/?hl=en&taken-by=namratha__gowda
ಈಗಾಗಲೇ ವಿಡಿಯೋ 70 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆ ಆಗಿದ್ದು, ಮೂವರ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕಿರುತೆರೆಯಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದಿರುವ ಪುಟ್ಟ ಗೌರಿ ಧಾರಾವಾಹಿಯಲ್ಲಿ ನಮೃತ ಮತ್ತು ಸಿಂಧೂ ನಟಿಸುತ್ತಿದ್ದಾರೆ. ಪುಟ್ಟಗೌರಿ ಪಾತ್ರಧಾರಿ ರಂಜಿನಿ ರಾಘವನ್ ಧಾರಾವಾಹಿಯಿಂದ ಹೊರ ಬಂದಿದ್ದು, ನಿರ್ದೇಶಕರು ‘ಮಂಗಳ ಗೌರಿ’ ಎಂಬ ಹೊಸ ಪಾತ್ರವನ್ನು ಕರುನಾಡಿನ ಜನತೆಗೆ ಪರಿಚಯಿಸಿದ್ದಾರೆ.
ಈ ರಂಜಿನಿ ಧಾರಾವಾಹಿಯಂದ ಹೊರ ಬರುತ್ತಿದ್ದಂತೆ ಧಾರಾವಾಹಿ ಕೊನೆಗೊಳ್ಳುತ್ತೆ ಎಂಬ ಮಾತುಗಳು ಕೇಳಿ ಬಂದಿದ್ದವು. ರಂಜಿನಿ ಕಿರುತೆರೆಯಿಂದ ಹಿರಿತೆರೆ ಅತ್ತ ಗಮನ ಹರಿಸುತ್ತಿದ್ದ ಹಿನ್ನೆಲೆಯಲ್ಲಿ ಧಾರಾವಾಹಿಯಿಂದ ಹೊರ ಹೋಗಿದ್ದಾರೆ. ನಮ್ಮ ಕಥೆಗೆ ಮಂಗಳ ಗೌರಿ ಹೊಸ ತಿರುವನ್ನು ನೀಡಲಿದೆ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.instagram.com/p/BlfziyDnhQ_/?hl=en&taken-by=namratha__gowda