ಅಮೆರಿಕದಲ್ಲಿದ್ದುಕೊಂಡೇ ಕರ್ನಾಟಕದ ಚುನಾವಣಾ ಟ್ರೆಂಡ್ ಸೆಟ್ ಮಾಡ್ತಾರೆ ನಮೋ ವಾರಿಯರ್ಸ್!

Public TV
1 Min Read
narendra modi us

ನವದೆಹಲಿ: ಮೇ 12ರಂದು ಕರ್ನಾಟಕದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಈಗ ಅಮೆರಿಕದಲ್ಲಿರುವ ಮೋದಿ ಅಭಿಮಾನಿಗಳು ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯ ಪರ ಪ್ರಚಾರ ಮಾಡಲು ತೊಡಗಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಜನರ ಒಲವನ್ನು ಬಿಜೆಪಿ ಪಕ್ಷದ ಮೇಲೆ ಮೂಡುವಂತೆ ಮಾಡಲು ಅಮೇರಿಕದಲ್ಲಿರುವ ಬಿಜೆಪಿಯ ಸಾಗರೋತ್ತರ ಸ್ನೇಹಿತರ ಬಳಗ ಪ್ರಯತ್ನಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕೆಲ ದಿನಗಳ ಹಿಂದೆ #SidhuTopsinCrime ಮತ್ತು #ShahSaffronSurge ಹ್ಯಾಷ್ ಟ್ಯಾಗ್ ಇರುವ ಟ್ವೀಟ್ ಬಹಳ ಟ್ರೆಂಡ್ ಆಗಿತ್ತು. ನಮೋ ವಾರಿಯರ್ಸ್ ಸಹಕಾರದಿಂದ ಈ ಹ್ಯಾಶ್ ಟ್ಯಾಗ್ ಗಳು ಟ್ರೆಂಡಿಂಗ್ ಟಾಪಿಕ್ ಆಗಿತ್ತು.

modi us1

ಜಾಹೀರಾತಿಗಾಗಿ ಎಷ್ಟೇ ಹಣ ಸಿದ್ದರಾಮಯ್ಯ ಖರ್ಚು ಮಾಡಲಿ. ಆದರೆ ಬೆಂಗಳೂರಿನಲ್ಲಿ 2 ಘಂಟೆ ಮಳೆ ಬಂದರೆ ಯೋಜನೆಯ ಬಣ್ಣ ಬಯಲಾಗುತ್ತದೆ. ಸ್ವಕ್ಷೇತ್ರ ವರುಣಾದಲ್ಲೇ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಈ ರೀತಿಯ ವಿಚಾರವನ್ನು ಇಟ್ಟಕೊಂಡು ಅಮೆರಿಕದಲ್ಲಿರುವ ಎನ್‍ಆರ್‍ಐಗಳು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪರವಾಗಿ ಹೆಚ್ಚು ಪ್ರಚಾರ ನಡೆಸುತ್ತಿದ್ದಾರೆ ವರದಿ ತಿಳಿಸಿದೆ.

ಬಿಜೆಪಿ ಬಗ್ಗೆ ಜನರಲ್ಲಿ ಒಲವು ಮೂಡಿಸುವುದು. ಕಾಂಗ್ರೆಸ್ ಆರೋಪಗಳಿಗೆ ಸರಿಯಾಗಿ ತಿರುಗೇಟು ನೀಡುವುದು. ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ತಪ್ಪು ವರದಿಯಾದಾಗ ಯಾವುದು ಸರಿ? ಯಾವುದು ತಪ್ಪು ಎನ್ನುವುದನ್ನು ತಿಳಿಸುವ ಉದ್ದೇಶವನ್ನು ನಮೋ ವಾರಿಯರ್ಸ್ ಸಂಘಟನೆ ಹೊಂದಿದೆ.

Share This Article
Leave a Comment

Leave a Reply

Your email address will not be published. Required fields are marked *