– ಪ.ಬಂಗಾಳದ ಟಿಟಾಗಢದಿಂದ ಬೆಂಗಳೂರಿಗೆ ಆಗಮಿಸಿದ ಒಂದು ಸೆಟ್ ಬೋಗಿ ರೈಲು
ಬೆಂಗಳೂರು: ಹಳದಿ ಮಾರ್ಗಕ್ಕೆ (Yellow Metro) 3ನೇ ರೈಲು ಸಿದ್ಧಗೊಂಡಿದ್ದು, ಇದೇ ಜೂನ್‌ನಲ್ಲಿ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ನಮ್ಮ ಮೆಟ್ರೋ ಅಳದಿ ಮಾರ್ಗಕ್ಕೆ ಪಶ್ಚಿಮ ಬಂಗಾಳದ ಟಿಟಾಗಢದಿಂದ ಒಂದು ಸೆಟ್ ರೈಲು ಬೋಗಿಗಳು ಬೆಂಗಳೂರಿಗೆ (Bengaluru) ಆಗಮಿಸಿವೆ.
ಅಂತಿಮ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಅಂತಿಮ ಪರೀಕ್ಷೆ ಪೂರ್ಣಗೊಳಿಸಿ ಇನ್ನೊಂದು ತಿಂಗಳಲ್ಲಿ ಮೆಟ್ರೊ ಸಂಚಾರ ಆರಂಭಿಸಲು ಯೋಜಿಸಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮಂಗಳೂರು ಭೇಟಿ ‘ಬಂದ ಪುಟ್ಟ ಹೋದ ಪುಟ್ಟ’ ಆಗದಿರಲಿ: ಕ್ಯಾ.ಬ್ರಿಜೇಶ್ ಚೌಟ
ಹೆಬ್ಬಗೋಡಿಯಲ್ಲಿರುವ ನಮ್ಮ ಮೆಟ್ರೊ ಡಿಪೊಗೆ ಎಲ್ಲ ಆರು ಕೋಚ್‌ಗಳು ತಲುಪಿವೆ. ಬೃಹತ್ ಲಾರಿಯಿಂದ ಇಳಿಸಿ ಜೋಡಣೆ ಮಾಡಲಾಗಿದೆ. ಬೊಮ್ಮಸಂದ್ರ–ಆರ್.ವಿ. ರಸ್ತೆ ನಡುವಿನ 18.8 ಕಿ.ಮೀ. ಉದ್ದದ ಮಾರ್ಗ ಇದಾಗಿದೆ.
ರೈಲು ಸಂಚಾರ ಆರಂಭಗೊಳ್ಳಲು ಕನಿಷ್ಠ ಮೂರು ರೈಲುಗಳ ಅವಶ್ಯಕತೆ ಇತ್ತು. ಚಾಲಕರಹಿತ ಎಂಜಿನ್ ಹೊಂದಿರುವ ಪ್ರೊಟೊಟೈಪ್ ಎರಡು ರೈಲುಗಳು ಪೂರೈಕೆಯಾಗಿ, ಮೂರನೇ ರೈಲಿಗಾಗಿ ಕಾಯಲಾಗಿತ್ತು. ಇದೀಗ ಮೂರೂ ರೈಲುಗಳು ಪೂರೈಕೆಯಾಗಿವೆ. ಇದನ್ನೂ ಓದಿ: 327 ಕೋಟಿ ವೆಚ್ಚದ ನವಲಗುಂದ ಬೈಪಾಸ್ ರಸ್ತೆ ಕಾಮಗಾರಿಗೆ ಕೇಂದ್ರ ಅಸ್ತು
ಪರೀಕ್ಷೆಗಳು ನಡೆದ ಬಳಿಕ ಪ್ರತಿ 30 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ರೈಲುಗಳ ಸಂಖ್ಯೆ ಹೆಚ್ಚಳವಾದಂತೆ ಟ್ರಿಪ್‌ಗಳ ನಡುವಿನ ಅವಧಿ ಕಡಿಮೆಯಾಗಲಿದೆ. ಈ ಮಾರ್ಗಕ್ಕೆ ಒಟ್ಟು 14 ರೈಲುಗಳ ಅಗತ್ಯವಿದೆ. ಪ್ರತಿ 15 ನಿಮಿಷಗಳಿಗೆ ಒಂದು ರೈಲು ಸಂಚರಿಸಲು 8 ರೈಲುಗಳು ಇರಬೇಕಿದೆ.