ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ತಾಂತ್ರಿಕ ಸಮಸ್ಯೆ ಉಂಟಾಗಿ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ. ಸುಮಾರು ಒಂದು ಗಂಟೆಗಳ ಕಾಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಬಿಎಂಆರ್‌ಸಿಎಲ್ (BMRCL) ಅಧಿಕಾರಿಗಳು ತಿಳಿಸಿದ್ದಾರೆ. ಚಲಿಸುತ್ತಿದ್ದ ಮೆಟ್ರೋ ರೈಲಿನ ಡೋರ್ ಓಪನ್ ಆಗಿದ್ದು, ಮತ್ತೆ ಕ್ಲೋಸ್ ಆಗಿಲ್ಲ ಎಂದು ತಿಳಿದುಬಂದಿದೆ.
ಪೀಕ್ ಹವರ್‌ನಲ್ಲಿ ಮೆಟ್ರೋ ಕೈ ಕೊಟ್ಟಿದ್ದರಿಂದ ಪ್ರಯಾಣಿಕರು ವಿಜಯನಗರ (Vijayanagar) ಮೆಟ್ರೋ ನಿಲ್ದಾಣದಲ್ಲಿ ಪರದಾಡಿದ್ದಾರೆ. ಫ್ಲಾಟ್ ಫಾರಂನಲ್ಲಿ ಪ್ರಯಾಣಿಕರಿಂದ ತುಂಬಿ ತುಳುಕಿದ್ದು, ಕೆಲಸಕ್ಕೆ ಹೋಗಲಾಗದೇ ಪರದಾಡಿದ್ದಾರೆ. ಇದನ್ನೂ ಓದಿ: ಅಮೂಲ್‌ಗೆ ಮಣೆಹಾಕಿದ್ದ BMRCLಗೆ ಮುಖಭಂಗ- ಮೆಟ್ರೋ ನಿಲ್ದಾಣಗಳಲ್ಲಿ 20 ನಂದಿನಿ ಮಳಿಗೆ ತೆರೆಯಲು ಅವಕಾಶ
ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಹೊರ ಬರಲು ಹರಸಾಹಸಪಟ್ಟಿದ್ದಾರೆ. ನೇರಳೆ ಮಾರ್ಗದ ಚಲ್ಲಘಟ್ಟದಿಂದ ವೈಟ್ ಫೀಲ್ಡ್ ಕಡೆ ಸಂಚರಿಸುತ್ತಿದ್ದ ರೈಲು, ಟ್ರ್ಯಾಕ್‌ನ ಅರ್ಧ ಮಾರ್ಗದಲ್ಲಿ ನಿಂತಿದೆ. ಯಾವ ನಿಲ್ದಾಣದ ಬಳಿ ಮೆಟ್ರೋ ರೈಲು ನಿಂತಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.
ಸ್ಥಗಿತಗೊಂಡ ಮೆಟ್ರೋ ಸೇವೆ ಪುನಾರಾರಂಭಗೊಂಡಿದ್ದು, ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ. ಇದನ್ನೂ ಓದಿ: ಸ್ವೈಪ್ ಗೇಟ್‌ನಿಂದ ಹೊರಗಿರುವ ಶೌಚಾಲಯಗಳಿಗೆ ಮಾತ್ರ ದುಡ್ಡು – BMRCL ಸ್ಪಷ್ಟನೆ


