ಬೆಂಗಳೂರು: ಮೆಟ್ರೊ ನಿಲ್ದಾಣಗಳಲ್ಲಿ ಕಾರು ಮತ್ತು ಬೈಕ್‍ಗಳನ್ನು ನಿಲ್ಲಿಸಿ ತೆರಳುವ ಪ್ರಯಾಣಿಕರಿಗೆ ಪಾರ್ಕಿಂಗ್ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ.
ಬಿಎಂಆರ್ ಸಿಎಲ್ ನಿಂದ ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಗಳು ಈ ಕಾರ್ಡ್ ಗಳನ್ನು ನೀಡುತ್ತಿದ್ದಾರೆ. ಇದುವರೆಗೆ ಮೆಟ್ರೋ ನಿಲ್ದಾಣಗಳಲ್ಲಿ ಕಾರು ಮತ್ತು ಬೈಕ್‍ಗಳನ್ನು ನಿಲ್ಲಿಸಿ ತೆರಳುವ ಪ್ರಯಾಣಿಕರಿಗೆ ರಶೀದಿ ನೀಡಲಾಗುತ್ತಿತ್ತು. ಈಗ ರಶೀದಿ ಬದಲು ಈ ಸ್ಮಾರ್ಟ್ ‘ಪಾರ್ಕಿಂಗ್ ಕಾರ್ಡ್’ಗಳನ್ನು ನೀಡಲಾಗುತ್ತಿದೆ. ಈಗಾಗಲೇ ಮೈಸೂರು ರೋಡ್ ಮೆಟ್ರೋ ಮತ್ತು ಯಲಚೇನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ಕಾರ್ಡ್ ವಿತರಿಸಲಾಗಿದೆ.
Advertisement
Advertisement
ಈ ಕಾರ್ಡ್ ನ್ನು ಪ್ರಯಾಣಿಕರು ತಮ್ಮ ಗಾಡಿಯನ್ನು ತೆಗೆದುಕೊಂಡು ಹೋಗುವಾಗ ವಾಪಾಸ್ ಮಾಡಬೇಕು. ಈ ಸ್ಮಾರ್ಟ್ ಕಾರ್ಡ್ ನಲ್ಲಿ ಪಾರ್ಕಿಂಗ್ ಸಮಯ, ಚಾರ್ಜ್ ಮತ್ತಿತರ ವಿವರಗಳು ಸಿಗುತ್ತವೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 11.30ರ ವರೆಗೆ ಪಾರ್ಕಿಂಗ್ ಸೇವೆ ಲಭ್ಯವಿರಲಿದೆ. ಆದರೆ ರಾತ್ರಿ ಪಾರ್ಕಿಂಗ್‍ಗೆ ಅವಕಾಶವಿಲ್ಲ. ಒಂದು ವೇಳೆ ಸ್ಮಾರ್ಟ್ ಪಾರ್ಕಿಂಗ್ ಕಾರ್ಡ್ ಕಳೆದುಕೊಂಡರೆ 100 ರೂ. ದಂಡ ಮತ್ತು ಪಾರ್ಕಿಂಗ್ ಶುಲ್ಕ ಪಾವತಿಸಬೇಕಾಗುತ್ತದೆ. ಈ ಕಾರ್ಡ್ ನಿಂದ ತಮ್ಮ ತಮ್ಮ ವಾಹನಗಳು ಸುರಕ್ಷಿತವಾಗಿರುತ್ತವೆಂದು ವಾಹನ ಸವಾರರು ಹರ್ಷ ವ್ಯಕ್ತಪಡಿಸಿದ್ದಾರೆ.