ಬೆಂಗಳೂರು: ನಮ್ಮ ಮೆಟ್ರೋಗೆ (Namma Metro) ಬಸವಣ್ಣ ಹೆಸರು ಇರುವಂತೆ ಮತ್ತು ಬಸವಣ್ಣನವರನ್ನ ಕರ್ನಾಟಕದ ಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯರನ್ನ ಸಚಿವ ಎಂ. ಬಿ ಪಾಟೀಲ್ (MB Patil) ಒತ್ತಾಯ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಮೆಟ್ರೋಗೆ ಬಸವೇಶ್ವರ ಹೆಸರು ಇಡಬೇಕು ಅನ್ನೋದು ಜನರ ಒತ್ತಾಯ ಮತ್ತು ನನ್ನ ಒತ್ತಾಯ ಇದೆ. ಕೆಂಪೇಗೌಡರು ಬೆಂಗಳೂರು ನಿರ್ಮಾತೃ ಅವರ ಹೆಸರು ಏರ್‍ಪೋರ್ಟ್‍ಗೆ ಇಡಲಾಗಿದೆ. ಅದರಂತೆ ಬಸವೇಶ್ವರ ಹೆಸರನ್ನು ನಮ್ಮ ಮೆಟ್ರೋಗೆ ಇಡಬೇಕು. 12ನೇ ಶತಮಾನದಲ್ಲಿ ಸಮಾನತೆಯ ಸಂದೇಶ ಸಾರಿದವರು. ಜಗತ್ತಿಗೆ ಮೊದಲ ಪಾರ್ಲಿಮೆಂಟ್ ಕೊಟ್ಟವರು ಬಸವೇಶ್ವರರು. ಅವರು ನಮ್ಮ ನಾಯಕರು. ಅವರ ಹೆಸರು ಮೆಟ್ರೋಗೆ ಇಟ್ಟರೆ ಸೂಕ್ತ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಜೊತೆ ಮಾತಾಡ್ತೀನಿ ಎಂದರು.
Advertisement
Advertisement
ಮಹಾರಾಷ್ಟ್ರದಲ್ಲಿ (Maharastra) ಶಿವಾಜಿ ಮಹಾರಾಜರನ್ನ ಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡಲಾಗಿದೆ. ಅದರಂತೆ ಕರ್ನಾಟಕದಲ್ಲಿ ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡಬೇಕು ಅಂತ ಸಿಎಂಗೆ ಒತ್ತಾಯ ಮಾಡೋದಾಗಿ ತಿಳಿಸಿದರು. ಇದನ್ನೂ ಓದಿ: ಬದಲಾಗುತ್ತಾ ನಮ್ಮ ಮೆಟ್ರೋ ಹೆಸರು?
Advertisement
Advertisement
ಇದೇ ವೇಳೆ ವಿಜಯಪುರ ಜಿಲ್ಲೆ ಹೆಸರನ್ನ ಬಸವೇಶ್ವರ ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಸಂಘಟನೆಗಳು ವಿಜಯಪುರವನ್ನ ಬಸವೇಶ್ವರ ಜಿಲ್ಲೆ ಅಂತ ಮಾಡಬೇಕು ಅಂತ ಮನವಿ ಕೊಟ್ಟಿವೆ. ವಿಜಯಪುರ ಬಸವಣ್ಣ ಜನಿಸಿದ ಜಿಲ್ಲೆ. ಹೀಗಾಗಿ ಬಸವೇಶ್ವರ ಜಿಲ್ಲೆ ಅಂತ ಹೆಸರು ಇಡಲು ಡಿಸಿಗೆ, ರಾಜ್ಯ ಸರ್ಕಾರಕ್ಕೆ ಕೆಲವು ಸಂಘಟನೆಗಳು ಒತ್ತಾಯ ಮಾಡಿವೆ. ಬಸವೇಶ್ವರರ ಹೆಸರು ಇಡಲು ಯಾರಿಗೂ ತಕರಾರು ಇಲ್ಲ. ವಿರೋಧ ಇಲ್ಲ. ಆದರೆ ಈಗಾಗಲೇ ಬಿಜಾಪುರ ಇದ್ದಿದ್ದನ್ನ ವಿಜಯಪುರ ಅಂತ ಹೆಸರು ಇಡಲಾಗಿದೆ. ಈಗ ವಿಜಯಪುರವನ್ನ ಬಸವೇಶ್ವರ ಜಿಲ್ಲೆ ಅಂತ ಮಾಡಿದ್ರೆ ಸಾಕಷ್ಟು ಅನಾನುಕೂಲ ಆಗುತ್ತದೆ. ಹೀಗಾಗಿ ಸಿಎಂ ಜೊತೆ ಚರ್ಚೆ ಮಾಡಿ ಸಾಧಕ-ಬಾಧಕ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ತೀವಿ ಎಂದರು.
ಯಾರಿಗೂ ಬಸವೇಶ್ವರ ಹೆಸರು ಜಿಲ್ಲೆಗೆ ಇಡಲು ವಿರೋಧ ಇಲ್ಲ. ತಾಂತ್ರಿಕ ಸಮಸ್ಯೆಗಳಿಂದ ಈ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ. ವಿಜಯಪುರ ಏರ್ಪೋರ್ಟ್ ಗೆ ಬಸವಣ್ಣ ಹೆಸರು ಇಡೋದು ದೊಡ್ಡ ಕೆಲಸ ಅಲ್ಲ. ಬಸವೇಶ್ವರರು ಕೇವಲ ವಿಜಯಪುರ ಜಿಲ್ಲೆಗೆ ಸೀಮಿತ ಅಲ್ಲ. ಬಸವಣ್ಣ, ಕೆಂಪೇಗೌಡ, ಕುವೆಂಪು ಇವರಲ್ಲೇ ಒಂದೇ ಜಿಲ್ಲೆಗೆ ಸೀಮಿತ ಅಲ್ಲ. ಸಂಪೂರ್ಣ ಮೆಟ್ರೋಗೆ ಬಸವಣ್ಣ ಹೆಸರು ಇಡಬೇಕು ಅನ್ನೋದು ನನ್ನ ಒತ್ತಾಯ ಹಾಗೂ ಜನರ ಒತ್ತಾಯ ಆಗಿದೆ. ಕೆಂಪೇಗೌಡ ಮತ್ತು ಬಸವಣ್ಣ ಈ ರಾಜ್ಯದ ಸಾಂಸ್ಕೃತಿಕ ರಾಯಭಾರಿಗಳು. ಹೀಗಾಗಿ ಅವರ ಹೆಸರು ಇರೋದು ಸೂಕ್ತ ಎಂದರು.
Web Stories