ಬೆಂಗಳೂರು: ಮೇ 25 ಭಾನುವಾರದಂದು ದೇಶದಾದ್ಯಂತ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಅದರಂತೆ ಬೆಂಗಳೂರಿನ(Bengaluru) ವಿವಿಧ ಕೇಂದ್ರಗಳಲ್ಲೂ ಪರೀಕ್ಷೆ ನಡೆಯಲಿದ್ದು, 1 ಗಂಟೆ ಮುಂಚಿತವಾಗಿ ಮೆಟ್ರೋ ರೈಲು ಸೇವೆ(Namma Metro) ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್(BMRCL) ತಿಳಿಸಿದೆ.
ವೈಟ್ ಫೀಲ್ಡ್, ಚಲ್ಲಘಟ್ಟ, ಮಾದಾವರ ಹಾಗೂ ರೇಷ್ಮೆ ಸಂಸ್ಥೆ ಸೇರಿ 4 ಟರ್ಮಿನಲ್‌ಗಳಿಂದಲೂ 1 ಗಂಟೆ ಮುಂಚಿವಾಗಿ ಮೆಟ್ರೋ ಸೇವೆ ಆರಂಭವಾಗಲಿದೆ. ಅಂದರೆ 7 ಗಂಟೆಗೆ ಶುರುವಾಗಬೇಕಿದ್ದ ಮೆಟ್ರೋ ಸೇವೆ 6 ಗಂಟೆಯಿಂದ ಪ್ರಾರಂಭವಾಗಲಿದೆ. ಇದನ್ನೂ ಓದಿ: ಮಳೆಯಿಂದ ಅಡ್ಡಿ – ಒಂದೇ ವೇದಿಕೆಯಲ್ಲಿ ನೆರವೇರಿತು ಹಿಂದೂ-ಮುಸ್ಲಿಂ ಜೋಡಿಯ ವಿವಾಹ
ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ 6 ಗಂಟೆಯಿಂದಲೇ ಮೆಟ್ರೋ ಸೇವೆಯನ್ನು ಆರಂಭಿಸುವ ನಿರ್ಧಾರವನ್ನು ನಮ್ಮ ಮೆಟ್ರೋ ಕೈಗೊಂಡಿದೆ. ಇದನ್ನೂ ಓದಿ: ಮೇ 24ಕ್ಕೆ UG CET ಫಲಿತಾಂಶ ಪ್ರಕಟ – ಕೆಇಎ