ಬೆಂಗಳೂರು: (Bengaluru) ʻನಮ್ಮ ಮೆಟ್ರೊʼ (Namma Metro) ವತಿಯಿಂದ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಲೋಕಾರ್ಪಣೆಗೊಳಿಸಲಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದ ಮೊದಲ ದಿನವೇ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ.
ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನವೇ BMRCL ಆನ್‌ಲೈನ್ ಟಿಕೆಟ್ ಜಾರಿ ಮಾಡಿತ್ತು. ಮೊದಲ ದಿನವೇ 1,669 ಟಿಕೆಟ್ ಜನರಿಂದ ಆನ್‌ಲೈನ್‌ನಲ್ಲಿ ಖರೀದಿಯಾಗಿದೆ. ಈ ಮೂಲಕ ನಮ್ಮ ಮೆಟ್ರೊಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಇದನ್ನೂ ಓದಿ: ಬಂಡೇಮಠ ಶ್ರೀಗಳ ಆತ್ಮಹತ್ಯೆ ಕೇಸ್- ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್
Advertisement
Advertisement
14,400 ಮಂದಿ ನಮ್ಮ ಮೆಟ್ರೊ ಜೊತೆ ವಾಟ್ಸಾಪ್‌ನಲ್ಲಿ ಆನ್‌ಲೈನ್ ಟಿಕೆಟ್ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಸರತಿ ಸಾಲು ತಪ್ಪಿಸಿ ಪ್ರಯಾಣಿಕರ ಸುಗಮ ಓಡಾಟಕ್ಕೆ ನಮ್ಮ ಮೆಟ್ರೊ ವ್ಯವಸ್ಥೆ ಜಾರಿ ಮಾಡಿದೆ. ನಿನ್ನೆ ಆನ್‌ಲೈನ್ ಟಿಕೆಟ್ ಅಧಿಕೃತವಾಗಿ ಜಾರಿ ಮಾಡಿದೆ.
Advertisement
Advertisement
BMRCL ವತಿಯಿಂದ ದೆಹಲಿ ಮೆಟ್ರೊ ಮಾದರಿಯಲ್ಲೇ ಆನ್‌ಲೈನ್ ಟಿಕೆಟ್ ಶುರು ಮಾಡಲಾಗಿದೆ. ಇದೀಗ ಆರಂಭದಲ್ಲೇ ಜನರಿಂದ ಆನ್‌ಲೈನ್ ಟಿಕೆಟ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಇದನ್ನೂ ಓದಿ: ಜಾಮಿಯಾ ಮಸೀದಿ ವಿವಾದ ಹೈಕೋರ್ಟ್ ಅಂಗಳಕ್ಕೆ