ಬೆಂಗಳೂರು: ಸಿಲಿಕಾನ್ ಸಿಟಿಯ ಜನರ ನಾಡಿಮಿಡಿತವಾಗಿರೋ ಬಿಎಂಟಿಸಿಗೆ (BMTC) ಜನ ಕಿಲ್ಲರ್ ಬಿಎಂಟಿಸಿ ಅಂತಾ ಹಣೆಪಟ್ಟಿ ಕಟ್ಟಿದ್ರು. ಈಗ ಈ ಬಿರುದನ್ನ `ನಮ್ಮ ಮೆಟ್ರೋ’ (Namma Metro) ಪಡೆದುಕೊಂಡಂತಿದೆ. 2023ರ ವರ್ಷಾರಂಭದಲ್ಲೇ ಎರಡು ಅಮಾಯಕರನ್ನ ಬಲಿ ಪಡೆದಿದೆ.
ಬ್ರಿಗೇಡ್ ರೋಡ್ ಮತ್ತು ದೊಡ್ಡನಕುಂದಿಯಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದ್ರೇ ಇನ್ನೂ ಹಲವರ ಪ್ರಾಣ ಕಳೆದುಕೊಳ್ಳಬೇಕಾಗಿತ್ತು. ಅದರೇ ಬಿಎಂಆರ್ಸಿಎಲ್ (BMRCL) ಮಾತ್ರ ಅರೇ ನಮ್ಮದೇನು ತಪ್ಪೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ. ಇದನ್ನೂ ಓದಿ: ನಗರ ಭಾಗದಲ್ಲೂ ಕಂಬಳ ಕಹಳೆ- ಕಾಂತಾರದಿಂದ ಮತ್ತಷ್ಟು ರಂಗೇರಿದ ಹವಾ
Advertisement
Advertisement
ಈ ಮೆಟ್ರೋ ಬ್ಯಾರಿಗೇಡ್ ಬಿದ್ದು ಕಾರು ಜಖಂ ಪ್ರಕರಣ ಬೆಂಗಳೂರು ಜನರ ಕಣ್ಣಮುಂದಿದೆ. ಅಲ್ಲದೇ ಆದ್ರೆ ಬಿಎಂಆರ್ಸಿಎಲ್ ಮತ್ತೆ ಕಳ್ಳಾಟವಾಡ್ತಾ ಇದೆ ಅನ್ನಿಸ್ತಿದೆ. ತನ್ನ ಮೊಂಡಾಟ ಬಿಡದೇ ಪ್ರಕರಣ ಮುಚ್ಚಿಹಾಕುವ ತಂತ್ರ ಮಾಡಿದೆ. ಮೆಟ್ರೋ ಪಿಲ್ಲರ್ ದುರಂತದಲ್ಲೂ ತನ್ನದು ತಪ್ಪೇ ಇಲ್ಲ ಅಂತ ವಾದಿಸಿದ್ದ ಬಿಎಂಆರ್ಸಿಎಲ್ ಈಗ ಕಾರಿನ ಮೇಲೆ ಬ್ಯಾರಿಕೇಡ್ ಬಿದ್ದ ಘಟನೆಯನ್ನ ಮುಚ್ಚಿ ಹಾಕಲು ಪ್ರಕರಣ ದಾಖಲಾಗದಂತೆ ನೋಡಿಕೊಂಡಿದೆ. ಇದನ್ನೂ ಓದಿ: ನಗರ ಭಾಗದಲ್ಲೂ ಕಂಬಳ ಕಹಳೆ- ಕಾಂತಾರದಿಂದ ಮತ್ತಷ್ಟು ರಂಗೇರಿದ ಹವಾ
Advertisement
Advertisement
ಹೌದು. ಕಾರಿನ ಮೇಲೆ ಮೆಟ್ರೋ ಬ್ಯಾರಿಕೇಡ್ ಬಿದ್ದಿದ್ದನ್ನ ಮುಚ್ಚಿ ಹಾಕಲು ಹಾಗೂ ಮತ್ತೆ ಬ್ಲಾಕ್ ಮಾರ್ಕ್ ಅನ್ನೋ ಕಾರಣಕ್ಕೆ ಪೊಲೀಸ್ ಪ್ರಕರಣವನ್ನೇ ದಾಖಲು ಮಾಡಲು ಬಿಡದೇ ಬಿಎಂಆರ್ಸಿಎಲ್ ಕಾರನ್ನ ಸಂಪೂರ್ಣ ರಿಪೇರಿ ಮಾಡಿಕೊಡೋ ಸೆಟ್ಲ್ಮೆಂಟ್ ಮಾಡಿಕೊಂಡಿದೆ. ಪೊಲೀಸರು ದೂರು ನೀಡಿ ಅಂದ್ರೂ ಕಂಪ್ಲೆಂಟ್ ಕೊಡಿಸದೇ ಸೆಟ್ಲ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಹುಂಡೈ I-10 ಕಾರಿನ ಮೇಲೆ ಬ್ಯಾರಿಕೇಡ್ ಬಿದ್ದಿದ್ದರಿಂದ ಕಾರು ಸಂಪೂರ್ಣ ಜಖಂ ಆಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನ ಪ್ರಕರಣ ದಾಖಲು ಮಾಡಲು ಬಿಡದೇ ಪ್ರಕರಣದಲ್ಲೀ ತಮ್ಮದೇನು ತಪ್ಪೇ ಇಲ್ಲ ಅನ್ನೋ ಮಟ್ಟಕ್ಕೆ ನಿರಾಳರಾಗಿದ್ದಾರೆ.
ಇನ್ನೂ ಈ ಬಗ್ಗೆ ಉತ್ತರಿಸಿ ಅಂದ್ರೇ ಬಿಎಂಆರ್ಸಿಎಲ್ ಎಂಡಿ ಅಂಜುಂ ಪರ್ವೇಜ್ ಪ್ರತಿಕ್ರಿಯೆ ನೀಡಿಲ್ಲ. ಸಿಎಂ ಖುದ್ದು ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರೂ ಬಿಎಂಆರ್ಸಿಎಲ್ ಮಾತ್ರ ನಾವೇನು ಮಾಡೇ ಇಲ್ಲ. ನಮ್ಮದೇನು ತಪ್ಪೇ ಇಲ್ಲ ಅನ್ನೋ ಮನೋಭಾವನೆಯಲ್ಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k