ಬೆಂಗಳೂರು: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ (Metro Pillar) ಕುಸಿದು ಮೃತಪಟ್ಟ ತೇಜಸ್ವಿನಿ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವುದಾಗಿ ಬಿಎಂಆರ್‌ಸಿಎಲ್ (BMRCL) ಎಂಡಿ ಅಜ್ಜುಂ ಪರ್ವೇಜ್ ಘೋಷಿಸಿದರು.
ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, 18 ಮೀ. ಎತ್ತರದ ಪಿಲ್ಲರ್ ಬಿದ್ದಿದೆ. ಘಟನೆಯಲ್ಲಿ ತಾಯಿ, ಮಗು ಮೃತಪಟ್ಟಿದೆ. ಈ ಬಗ್ಗೆ ಎಲ್ಲಾ ಎಂಜಿನಿಯರ್ ಜೊತೆಗೆ ಮಾತಾಡುತ್ತೇನೆ. ಇಂಡಿಯನ್ ಇನ್ಸ್ಟಿಟ್ಯೂಟ್ ಸೈನ್ಸ್‌ಗೆ ಮನವಿ ಮಾಡುತ್ತೇವೆ. ಅವರು ಬಂದು ಪರಿಶೀಲನೆ ನಡೆಸುತ್ತಾರೆ. ಜೊತೆಗೆ ಚೀಫ್ ಎಂಜಿನಿಯರ್, ಕಂಟ್ರ್ಯಾಕ್ಟರ್ ನೋಟಿಸ್ ಕೊಡುತ್ತೇವೆ ಎಂದು ತಿಳಿಸಿದರು.
Advertisement
Advertisement
ಇದು ಕಳಪೆ ಕಾಮಗಾರಿಯಿಂದ ಆದ ದುರಂತವಲ್ಲ. ಸದ್ಯಕ್ಕೆ ಎರಡು ದಿನ ಕೆಲಸ ಸಂಪೂರ್ಣ ನಿಲ್ಲಿಸುತ್ತೇವೆ. ವರದಿ ಬಂದ ನಂತರ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಮ್ಯಾನ್ಯುಯಲ್ ಆಗಿ ಮಿಸ್ಟೆಕ್ ಆಗಿರುವುದಾ ಅಥವಾ ಟೆಕ್ನಿಕಲ್ ತೊಂದರೆಯೇ ಎನ್ನುವುದನ್ನು ನೋಡಬೇಕು ಎಂದು ಹೇಳಿದರು.
Advertisement
Advertisement
ಘಟನೆಯೇನು?: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ (Bengaluru) ನಾಗವಾರ ರಿಂಗ್ ರಸ್ತೆಯ ಹೆಚ್‍ಬಿಆರ್ ಲೇಔಟ್‍ನಲ್ಲಿ ನಡೆದಿದೆ. ಬೆಳಗ್ಗೆ 10:30ರ ಸುಮಾರಿನಲ್ಲಿ ಗದಗ ಮೂಲದ ಸಿವಿಲ್ ಎಂಜಿನಿಯರ್ ಲೋಹಿತ್, ಪತ್ನಿ ಮತ್ತು ಇಬ್ಬರು ಅವಳಿ ಮಕ್ಕಳ ಸಮೇತ ಮನೆಯಿಂದ ಹೊರಟಿದ್ದರು. ಪತ್ನಿಯನ್ನು ಕೆಲಸಕ್ಕೆ, ಇಬ್ಬರು ಮಕ್ಕಳನ್ನು ಡೇ ಕೇರ್‌ನಲ್ಲಿ ಬಿಡಲು ಮಾನ್ಯತಾ ಟೆಕ್‍ಪಾರ್ಕ್ ಕಡೆ ಲೋಹಿತ್ ತೆರಳುತ್ತಿದ್ದಾಗ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಎಂದು ಕುಸಿದಿದೆ.
ಘಟನೆಯಲ್ಲಿ ತೇಜಸ್ವಿನಿ (35), ಎರಡೂವರೆ ವರ್ಷದ ಗಂಡು ಮಗು ವಿಹಾನ್ ಸಾವನ್ನಪ್ಪಿದ್ದಾರೆ. ಇನ್ನು ಸಣ್ಣಪುಟ್ಟ ಗಾಯಗಳೊಂದಿಗೆ ಲೋಹಿತ್ ಮತ್ತು ಅವರ ಎರಡೂವರೆ ವರ್ಷದ ಮಗಳು ವಿಸ್ಮಿತಾ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಒತ್ತುವರಿ ತೆರವಿಗೆ ಆಗ್ರಹಿಸಿ 36 ಕಿಮೀ ಪಾದಯಾತ್ರೆ ಮಾಡಿದ ಗ್ರಾಪಂ ಸದಸ್ಯ
ಇನ್ನೂ ಘಟನೆಗೆ ಸಂಬಂಧಿಸಿದಂತೆ ಯಾವ ರೀತಿ ಮೆಟ್ರೋ ಪೀಲ್ಲರ್ ಕುಸಿದಿ ಬಿದ್ದಿದೆ ಎನ್ನುವುದು ಅಲ್ಲೇ ಇದ್ದ ಖಾಸಗಿ ಕಂಪನಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಪಿಲ್ಲರ್ ಬೀಳುವ 2 ಸೆಕೆಂಡ್ ಮುಂಚೆ ಬಿಎಂಟಿಸಿಯ ವೋಲ್ವೋ ಬಸ್ ಕೂಡ ಪಾಸ್ ಆಗಿದೆ. ಅಷ್ಟೇ ಅಲ್ಲದೇ ಸಮಯದಲ್ಲಿ ಸಾಕಷ್ಟು ವಾಹನಗಳು ಪಾಸ್ ಆಗಿದೆ. ಇದನ್ನೂ ಓದಿ: ಒಳ ಮೀಸಲಾತಿ ಚರ್ಚೆ ಬಳಿಕ ಸರ್ಕಾರದ ನಿರ್ಧಾರ ಪ್ರಕಟ: ಮಾಧುಸ್ವಾಮಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k