-ಇದು ನಮ್ಮ ಮೆಟ್ರೋದ ಅತ್ಯಂತ ದೊಡ್ಡ ಸುರಂಗ ಮಾರ್ಗ
ಬೆಂಗಳೂರು: ಸಿಲಿಕಾನ್ ಸಿಟಿಯ (Silicon City) ಜನರ ಸಂಚಾರಕ್ಕೆ ಜೀವನಾಡಿಯಾಗಿರುವ ನಮ್ಮ ಮೆಟ್ರೋದ ಪಿಂಕ್ ಲೈನ್ (Pink Line) 2026 ರೊಳಗೆ ಸಾರ್ವಜನಿಕ ಸೇವೆಗೆ ಮುಕ್ತ ಮಾಡುವ ಯೋಜನೆಯನ್ನು ಬಿಎಂಆರ್‌ಸಿಎಲ್ (BMRCL) ಹೊಂದಿದ್ದು, ಸದ್ಯ ಸುರಂಗ ಮಾರ್ಗ ಕೊರೆಯುವ ಕಾರ್ಯ ಯಶಸ್ವಿಯಾಗಿದೆ.
ವಿಶ್ವದ ಅತ್ಯಂತ ಹೆಚ್ಚು ಟ್ರಾಫಿಕ್ ಇರುವ ನಗರಗಳ ಪೈಕಿ ನಮ್ಮ ಬೆಂಗಳೂರು 6ನೇ ಸ್ಥಾನದಲ್ಲಿದೆ. ಇಂತಹ ಟ್ರಾಫಿಕ್ ಇರುವ ನಗರಕ್ಕೆ ಮುಕ್ತಿ ಎಂದರೆ ಅದು ಮೆಟ್ರೋ ರೈಲು. ನಮ್ಮ ಮೆಟ್ರೋ ಕೂಡ ಸಿಲಿಕಾನ್ ಸಿಟಿಯ ಟ್ರಾಫಿಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ನಾನಾ ಭಾಗದಲ್ಲಿ ಕಾಮಗಾರಿ ಮಾಡುತ್ತಿದ್ದು, ಇದೀಗ ಅತ್ಯಂತ ಉದ್ದನೇಯ ಸುರಂಗ ಮಾರ್ಗ ಕಾರ್ಯ ಮುಗಿಸಿದೆ.ಇದನ್ನೂ ಓದಿ: ಇ-ಖಾತಾ ಪರೀಕ್ಷೆಗೆ ಹೆಲ್ಪ್‌ಡೆಸ್ಕ್ ತೆರೆದ ಬಿಬಿಎಂಪಿ
ಬೆಂಗಳೂರಿನ (Bengaluru) ಟ್ರಾಫಿಕ್ ಕಿರಿಕಿರಿಗೆ ಕಡಿವಾಣ ಹಾಕಬೇಕಾದರೆ ಅದು ನಮ್ಮ ಮೆಟ್ರೋದಿಂದ ಮಾತ್ರ ಸಾಧ್ಯ. ಎಲ್ಲೆಲ್ಲಿ ಮೆಟ್ರೋ ಮಾರ್ಗ ಇದೆಯೋ ಆ ಮಾರ್ಗದಲ್ಲಿ ಟ್ರಾಫಿಕ್ ಕಿರಿಕಿರಿ ಕಡಿಮೆ ಇದೆ.
ದೇಶದ ಎರಡನೇ ಅತೀ ದೊಡ್ಡ ಮೆಟ್ರೋ ಸೇವೆ ಇರುವ ಬೆಂಗಳೂರಿನ ನಮ್ಮ ಮೆಟ್ರೋ (Namma Metro) ನಾಗವಾರದಿಂದ (Nagavara) ಕಾಳೇನ ಅಗ್ರಹಾರದವರೆಗೆ ಕಾಮಗಾರಿ ನಡೆಯುತ್ತಿದೆ. ಈ ಪಿಂಕ್ ಲೈನ್ ಮೆಟ್ರೋದಲ್ಲಿ ನಾಗವಾರದಿಂದ ಡೈರಿ ಸರ್ಕಲ್‌ವರಗೆ ಸಂಪೂರ್ಣವಾಗಿ ಸುರಂಗ ಮಾರ್ಗವೇ ಇರಲಿದೆ. ಇದು ನಮ್ಮ ಮೆಟ್ರೋದ ಅತ್ಯಂತ ದೊಡ್ಡ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ 9 ಟನಲ್ ಮಿಷನ್‌ಗಳು ಸತತ ಎರಡು ವರ್ಷಗಳ ಕಾರ್ಯಚರಣೆ ನಡೆಸಿದೆ ಬಳಿಕ ಯಶಸ್ವಿಯಾಗಿ ಸುರಂಗ ಕೊರೆಯುವ ಕೆಲಸವನ್ನ ಕಳೆದ ವಾರದಲ್ಲಿ ಮುಗಿಸಿದೆ.
ನಾಗವಾರದಿಂದ ಡೈರಿ ಸರ್ಕಲ್‌ವರಗೆ ಮೆಟ್ರೋ ಸುರಂಗ ಕಾರ್ಯ ಸಂಪೂರ್ಣವಾಗಿದ್ದು, ಒಟ್ಟು 12 ಕಿ.ಮೀ ಸುರಂಗ ಮಾರ್ಗ ಇದಾಗಿದೆ. ಎರಡು ಪಥದ ಸುರಂಗ ಕೊರೆಯುವ ಕೆಲಸ ಮುಗಿದಿದ್ದು, ಒಂದೇ ದಿನ 27 ಮೀಟರ್ ಸುರಂಗ ಕೊರೆದ ಸಾಧನೆಯನ್ನು ನಮ್ಮ ಮೆಟ್ರೋ ಮಾಡಿದೆ. ಇದರ ಜೊತೆಗೆ ಅನೇಕ ಸಮಸ್ಯೆಗಳು ಎದುರಾಗಿದ್ದರೂ ಅದನ್ನೆಲ್ಲ ನಮ್ಮ ಮೆಟ್ರೋ ಯಶಸ್ವಿಯಾಗಿ ನಿಭಾಯಿಸಿದೆ. ಆದರೆ ಇನ್ನೂ ಮುಂದೆ ಇರುವ ಕೆಲಸ ಸವಾಲಿನ ಕೆಲಸವಾಗಿದೆ. ಯಾಕೆಂದರೆ ಒಟ್ಟಾರೆ ಎರಡು ಮಾರ್ಗದ 24 ಕಿ.ಮೀ ಟ್ರ್ಯಾಕ್ ಹಾಕಿ, ಅದರಲ್ಲಿ ಮುಖ್ಯವಾಗಿ ಸುರಕ್ಷತಾ ಕ್ರಮಗಳನ್ನು ಗಮನಿಸಿಕೊಂಡು ವೆಂಟಿಲೇಟರ್ ವ್ಯವಸ್ಥೆ, ಎಲೆಟ್ರಿಕ್ ವರ್ಕ್, ಹೀಗೆ ಅನೇಕ ಟೆಕ್ನಿಕಲ್ ವರ್ಕ್ ಮಾಡಬೇಕಾಗಿದ್ದು ಹಂತ ಹಂತವಾಗಿ ಕೆಲಸ ಮಾಡಲಾಗುತ್ತದೆ.
ಒಟ್ಟಿನಲ್ಲಿ ನಮ್ಮ ಮೆಟ್ರೋದ ಈ ಅತ್ಯಂತ ದೊಡ್ಡ ಸುರಂಗ ಮಾರ್ಗ 2026 ರೊಳಗೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಯೋಜನೆಯನ್ನು ಬಿಎಂಆರ್‌ಸಿಎಲ್ ಹೊಂದಿದೆ. 2026 ರೊಳಗೆ ಈ ಮಾರ್ಗದ ಕಾಮಗಾರಿ ಮುಗಿಯುತ್ತಾ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: ಯುವತಿಯ ಖಾಸಗಿ ಕ್ಷಣ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ – ಪ್ರಿಯಕರ, ಅಪ್ರಾಪ್ತ ಸೇರಿದಂತೆ 6 ಮಂದಿಯಿಂದ ಗ್ಯಾಂಗ್ ರೇಪ್