Connect with us

Bengaluru City

ಮೆಟ್ರೋದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ಅಳವಡಿಕೆಗೆ ಮುಂದಾದ BMRCL

Published

on

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ಅಳವಡಿಕೆಗೆ ಬಿಎಂಆರ್‌ಸಿಎಲ್ ಮುಂದಾಗಿದೆ. ಈ ನಿಟ್ಟಿನಲ್ಲಿ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಅಗತ್ಯವಿರುವ ಏಕೀಕೃತ ದರ ಸಂಗ್ರಹ ದ್ವಾರಗಳನ್ನು ಅಳವಡಿಸಲಾಗಿದೆ.

ನಿಲ್ದಾಣದಲ್ಲಿ ಆಟೋಮೆಟಿಕ್ ಫೇರ್ ಕಲೆಕ್ಷನ್ ಗೇಟ್ (ಎಎಫ್‍ಸಿ) ಪಕ್ಕದಲ್ಲೇ ‘ಸ್ವಾಗತ್’ ಎಂಬ ಒಂದು ಜೋಡಿ ಏಕೀಕೃತ ದರ ಸಂಗ್ರಹ ದ್ವಾರಗಳನ್ನು ಬೈಯಪ್ಪನಹಳ್ಳಿಯಲ್ಲಿ ಅಳವಡಿಸಲಾಗಿದೆ. ಆದರೆ ತಾಂತ್ರಿಕವಾಗಿ ಜೋಡಣೆ ಮಾಡಿ ಕಾರ್ಯಾಚರಣೆಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ.

ದೆಹಲಿ ಮೆಟ್ರೋ ಹಾಗೂ ಸರ್ಕಾರಿ ಬಸ್‍ಗಳಲ್ಲಿ ಪ್ರಾಯೋಗಿಕವಾಗಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಬಳಕೆಯಲ್ಲಿದೆ. ಈ ಕಾರ್ಡ್ ಒಮ್ಮೆ ಬಳಕೆಗೆ ಬಂದರೆ ಪ್ರಯಾಣಿಕರು ದೆಹಲಿ, ಚೆನ್ನೈ, ಸೇರಿದಂತೆ ಯಾವುದೇ ಮೆಟ್ರೋದಲ್ಲಿ ಈ ಕಾರ್ಡ್ ಬಳಸಬಹುದಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ಭಾರತ್ ಎಲೆಕ್ಟ್ರಾನಿಕ್ಸ್ ಲಿ. (ಬಿಇಎಲ್) ಹಾಗೂ ಸೆಂಟರ್ ಫಾರ್ ಡೆವಲಪ್‍ಮೆಂಟ್ ಆಫ್ ಅಡ್ವಾನ್ಸ್ ಕಂಪ್ಯೂಟಿಂಗ್ (ಸಿಡಿಎಸಿ) ಸಹಯೋಗದಲ್ಲಿ ಈ ಗೇಟ್‍ಗಳು ಪೂರೈಕೆಯಾಗಿವೆ. ಈ ಸೇವೆ ಆರಂಭಗೊಂಡರೆ ಪ್ರಯಾಣಿಕರು ದೇಶದ ಯಾವುದೇ ಮೆಟ್ರೋದಲ್ಲಿ ಬಳಸುವ ಕಾರ್ಡ್ ಗಳನ್ನು ಮೆಟ್ರೋದಲ್ಲಿ ಬಳಸಿ ಪ್ರಯಾಣಿಸಬಹುದು. ಈ ಸೇವೆ ಏಪ್ರಿಲ್ ನಿಂದ ಜಾರಿಗೆ ಬರುವ ಸಾಧ್ಯತೆಯಿದೆ.

Click to comment

Leave a Reply

Your email address will not be published. Required fields are marked *