ಬೆಂಗಳೂರು: ನಗರದ ಜನರ ಅವಿಭಾಜ್ಯ ಅಂಗವಾಗಿರೋ ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ಈ ಯೋಜನೆಯಲ್ಲಿ ಬಹುಮುಖ್ಯವಾದ ಒಂದು ಯೋಜನೆಯೆಂದರೆ ಬೇಬಿ ಸಿಟ್ಟಿಂಗ್.
ಐಟಿ ಬಿಟಿ ಜನತೆ ಸೇರಿದಂತೆ ಹಲವು ಉದ್ಯೋಗಿಗಳ ಬೇಡಿಕೆ ಹಿನ್ನಲೆಯಲ್ಲಿ ಬೆಂಗಳೂರಿನ ಕೇಂದ್ರ ಭಾಗ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅತ್ಯಾಧುನಿಕವಾದ ಬೇಬಿ ಸಿಟ್ಟಿಂಗ್ ತೆರೆಯಲು ಮೆಟ್ರೋ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಈ ಬೇಬಿ ಸಿಟ್ಟಿಂಗ್ ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ.
ಈ ಬೇಬಿ ಸಿಟ್ಟಿಂಗ್ ಬೆಂಗಳೂರಿನಲ್ಲಿರೋ ಇತರೆ ಬೇಬಿ ಸಿಟ್ಟಿಂಗ್ ಗಿಂತ ಅತ್ಯಾಧುನಿಕವಾಗಿರಲಿದ್ದು, ಜನ ಕುಳಿತಲ್ಲೇ ಮೊಬೈಲ್ ಮೂಲಕ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಬಹುದಾಗಿದೆ.
ಇದಕ್ಕಾಗಿ ಹೊಸ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಪೋಷಕರು ಆ್ಯಪ್ ಮೂಲಕ ತಮ್ಮ ಮಕ್ಕಳ ಚಲನವಲನವನ್ನು ಗಮನಿಸಬಹುದು. ಕೆಲವೇ ದಿನಗಳಲ್ಲಿ ಈ ಬೇಬಿ ಸಿಟ್ಟಿಂಗ್ ಓಪನ್ ಆಗಲಿದೆ.