– ಕೊಲ್ಕತ್ತಾ ಮೆಟ್ರೋದಲ್ಲೇ ಅತ್ಯಂತ ಕನಿಷ್ಠ ದರ – ಏಕೆ?
ಬೆಂಗಳೂರು: ಸಿಲಿಕಾನ್ ಸಿಟಿಯ ಅಚ್ಚುಮೆಚ್ಚಿನ ಸಂಚಾರನಾಡಿಯಾದ ನಮ್ಮ ಮೆಟ್ರೋ ಟಿಕೆಟ್ ದರ (Metro Ticket Price) ಏರಿಕೆಯಾಗಿದೆ. ಅದು ಬರೋಬ್ಬರಿ 46% – 50% ನಷ್ಟು ಟಿಕೆಟ್ ರೇಟ್ ಹೈಕ್ ಆಗಿದೆ. ಈ ದರ ಏರಿಕೆ ದಾಖಲೆ ನಿರ್ಮಿಸಿದ್ದು, ದೇಶದ ವಿವಿಧ ನಗರಗಳ ಮೆಟ್ರೋ ದರಕ್ಕಿಂತಲೂ, ಬೆಂಗಳೂರಿನ ನಮ್ಮ ಮೆಟ್ರೋ (Namma Metro) ದರವೇ ದುಬಾರಿಯಾಗಿದೆ.
Advertisement
ದಿನದಿಂದ ದಿನಕ್ಕೆ ದೇಶಾದ್ಯಂತ ನಮ್ಮ ಮೆಟ್ರೋ ಛಾಪು ಮೂಡಿಸುತ್ತಿದೆ. ಪ್ರತಿನಿತ್ಯ ಲಕ್ಷಾಂತರ ಜನ ನಮ್ಮ ಮೆಟ್ರೋ ಅವಲಂಬಿಸಿದ್ದಾರೆ. ದೇಶದ ಪ್ರಮುಖ ನಗರಗಳಾದ ದೆಹಲಿ, ಹೈದರಾಬಾದ್, ಚೆನೈ, ಮುಂಬೈ, ಕೊಲ್ಕತ್ತಾ, ಲಕ್ನೋ, ಕೊಚ್ಚಿ, ಜೈಪುರ ಸೇರಿದಂತೆ ಹಲವೆಡೆ ಮೆಟ್ರೋ ದಟ್ಟಣೆ ಹೆಚ್ಚಾಗಿದೆ. ಆದ್ರೆ ಈ ಎಲ್ಲಾ ನಗರಗಳ ಮೆಟ್ರೋ ದರಕ್ಕೆ ಹೋಲಿಸಿದ್ರೇ ನಮ್ಮ ಮೆಟ್ರೋದ ಗರಿಷ್ಟ ದರವೇ ಹೆಚ್ಚಾಗಿದೆ. ದೇಶದ ವಿವಿಧ ಪ್ರಮುಖ ನಗರದಲ್ಲಿ ಎಷ್ಟೇಷ್ಟು ದರವಿದೆ ಅನ್ನೋದು ಈ ಕೆಳಕಂಡಂತಿದೆ. ಇದನ್ನೂ ಓದಿ: Aero India 2025 | ವೈಮಾನಿಕ ಪ್ರದರ್ಶನಕ್ಕಿಂದು ಚಾಲನೆ – ರಷ್ಯಾ, ಅಮೆರಿಕ ಸೇರಿ 90 ದೇಶಗಳು ಭಾಗಿ
Advertisement
Advertisement
ಯಾವ ನಗರಗಳಲ್ಲಿ ಮೆಟ್ರೋ ದರ ಎಷ್ಟಿದೆ?
ಕನಿಷ್ಠ ದರ – ಗರಿಷ್ಠ ದರ
Advertisement
* ಬೆಂಗಳೂರು-10 ರೂಪಾಯಿ -90 ರೂಪಾಯಿ (30 ಕಿಲೋಮೀಟರ್ ನಂತರ)
* ದೆಹಲಿ-10 ರೂಪಾಯಿ -60 ರೂಪಾಯಿ (32 ಕಿಲೋಮೀಟರ್ ಕ್ಕಿಂತ ಹೆಚ್ಚಿನ ದೂರ)
* ಹೈದರಾಬಾದ್-10 ರೂಪಾಯಿ -60 ರೂಪಾಯಿ (26 ಕಿಲೋಮೀಟರ್ ಕ್ಕಿಂತ ಹೆಚ್ಚಿನ ದೂರ)
* ಮುಂಬೈ-10 ರೂಪಾಯಿ -80 ರೂಪಾಯಿ (42 ಕಿಲೋಮೀಟರ್ ಕ್ಕಿಂತ ಹೆಚ್ಚಿನ ದೂರ)
* ಕೊಲ್ಕತ್ತಾ-5 ರೂಪಾಯಿ -50 ರೂಪಾಯಿ (30 ಕಿಲೋಮೀಟರ್ ಗೂ ಹೆಚ್ವಿನ ದೂರ)
ಈ ಎಲ್ಲಾ ನಗರಗಳ ಪೈಕಿ ನಿನ್ನೆ ದರ ಏರಿಕೆಯಾಗಿ ಬೆಂಗಳೂರಿನ ನಮ್ಮ ಮೆಟ್ರೋ ದರವೇ ಅತ್ಯಂತ ಹೆಚ್ಚಿದೆ. ಕನಿಷ್ಠ ಅಂದ್ರೆ ಕೋಲ್ಕತ್ತಾ ಮೆಟ್ರೋ ಆಗಿದೆ. ಪ್ರಮುಖವಾಗ ಕೊಲ್ಕತ್ತಾ ಮೆಟ್ರೋವನ್ನು ಭಾರತೀಯ ರೈಲ್ವೆಯೇ ನಡೆಸುತ್ತಿರೋದ್ರಿಂದ ಕನಿಷ್ಠ ದರವಿದೆ ಅಂತಾ ಹೇಳಲಾಗುತ್ತಿದೆ. ಹೀಗಾಗಿ ದೇಶದ ಬೇರೆ ನಗರಗಳಿಂದ ಬೆಂಗಳೂರಲ್ಲಿ ಮೆಟ್ರೋ ದರ ಏರಿಕೆಯಾಗಿರೋದು ಸರಿಯಲ್ಲ. ಇದರಿಂದ ಮೆಟ್ರೋ ಪ್ರಯಾಣಿಕರು ದ್ವಿಚಕ್ರ ವಾಹನ ಸೇರಿದಂತೆ ಪರ್ಯಾಯ ಮಾರ್ಗಗಳಿಗೆ ಹೊರಳಬಹುದು ಅಂತಾ ಜನ ಹಾಗೂ ಕೆಲ ತಜ್ಞರ ಅಭಿಪ್ರಾಯವಾಗಿದೆ. ಇದನ್ನೂ ಓದಿ: ಗಮನಿಸಿ – ಏರ್ ಶೋ ಹಿನ್ನೆಲೆ ಬೆಂಗಳೂರು ಏರ್‌ಪೋರ್ಟ್ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ