ಮೆಟ್ರೋ ದರ ಏರಿಕೆ – ಜನರ ಎದುರೇಟಿಗೆ ಮಣಿದ ಸಿಎಂ: ಜೋಶಿ

Public TV
2 Min Read
Pralhad Joshi

– ಕೇಂದ್ರಕ್ಕೆ ಹಣೆಪಟ್ಟಿ ಕಟ್ಟಲು ಹೊರಟಿದ್ದ ಸಿಎಂ ಯೂಟರ್ನ್

ಬೆಂಗಳೂರು: ಮೆಟ್ರೋ ದರ ಏರಿಸಿ, ಕೇಂದ್ರಕ್ಕೆ ಅದರ ಹಣೆಪಟ್ಟಿ ಕಟ್ಟಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಜನರೇ ಎದುರೇಟು ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಪ್ರತಿಕ್ರಿಯಿಸಿದ್ದಾರೆ.

ಬಿಎಂಆರ್‌ಸಿಎಲ್ (BMRCL) ಮೆಟ್ರೋ ದರ ಪರಿಷ್ಕರಣೆ ಮಾಡಿದ ಬಳಿಕ ಕೇಂದ್ರ ಸರ್ಕಾರದತ್ತ ಬೆರಳು ತೋರಿಸಿ ಆರೋಪ ಹೊರಿಸಿದ್ದ ಸಿಎಂ, ಈಗ ಜನರ ವಿರೋಧ ತಾರಕಕ್ಕೇರುತ್ತಿದ್ದಂತೆ ಮಣಿದು ಬೆಲೆ ಇಳಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ತಯಾರಿಕಾ ವಲಯದಲ್ಲಿ ಮಾನವ-ಯಾಂತ್ರಿಕ ಬುದ್ಧಿಯ ಸಮನ್ವಯತೆ: ಭುವನ್ ಲೋಧಾ

ಸಿಎಂ ಯೂಟರ್ನ್:
ಬೆಂಗಳೂರಿನಲ್ಲಿ ಜನ ಮೆಟ್ರೋ ರೈಲು ಸಂಚಾರ ತಿರಸ್ಕರಿಸುತ್ತಿದ್ದಂತೆ ಸಿಎಂ ಯೂಟರ್ನ್ ಹೊಡೆದಿದ್ದಾರೆ. ಈಗ ಟಿಕೆಟ್ ದರ ಕಡಿಮೆ ಮಾಡುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರ ಏನಾದರೂ ಮಾಡಿ, ರಾಜ್ಯದ ಜನ ಅದನ್ನು ಸಹಿಸದೇ ಇರುವುದ್ದರೆ ಅದನ್ನು ಕೇಂದ್ರ ಸರ್ಕಾರದ ಹಣೆಗೆ ಕಟ್ಟಲು ನೋಡುತ್ತದೆ ಎಂದು ಆರೋಪಿಸಿದರು.

ಅಗತ್ಯತೆಗಳ ಬೆಲೆ ಏರಿಕೆ ಕೈ ಬಿಡಲಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದನ್ನು ಬಿಟ್ಟು ಜನಾಭಿಪ್ರಾಯಕ್ಕೆ ಗೌರವ ನೀಡಲಿ. ಇನ್ನಾದರೂ ಜನರ ಅಗತ್ಯತೆಗಳ ಬೆಲೆ ಏರಿಕೆ ನೀತಿಯನ್ನು ಕೈಬಿಡಲಿ ಎಂದು ಸಚಿವ ಪ್ರಲ್ಹಾದ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಆಗ್ರಹಿಸಿದ್ದಾರೆ.

ಎಕ್ಸ್‌ನಲ್ಲಿ ಏನಿದೆ?
ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ದರ ಹೆಚ್ಚಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಆರೋಪ ಹೊರಸಿದ್ದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯೂಟರ್ನ್ ಹೊಡೆಯುವ ಮೂಲಕ ಟಿಕೆಟ್ ದರ ಕಡಿಮೆ ಮಾಡಿ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದತ್ತ ಆರೋಪ ಮಾಡುವ ಸಿದ್ದರಾಮಯ್ಯನವರು, ಸುಳ್ಳು ಹೇಳುವುದನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಿ ಎಂದಿದ್ದಾರೆ.ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ದುಬಾರಿಯಾದ ಗುಲಾಬಿ – ತೋಟದಲ್ಲೇ 1 ರೆಡ್ ರೋಸ್‌ಗೆ 25-30 ರೂ.

Share This Article