ಬೆಂಗಳೂರು: ಇಡೀ ವಿಶ್ವದೆಲ್ಲೆಡೆ ಕೊರೊನಾ ಭೀತಿ ಆವರಿಸಿದೆ. ಭಾರತದಲ್ಲೂ ಕೊರೊನಾ ವೈರಸ್ ಹರಡದಂತೆ ಹೈ ಅಲರ್ಟ್ ಘೋಷಿಸಲಾಗಿದೆ. ಈ ಕೊರೊನಾ ವೈರಸ್ ಎಫೆಕ್ಟ್ ಕೇವಲ ಮನುಷ್ಯರಿಗೆ ಮಾತ್ರವಲ್ಲ, ನಮ್ಮ ಮೆಟ್ರೋಗೂ ತಟ್ಟಿದ್ದು, ಕಾಮಗಾರಿ ವಿಳಂಬವಾಗುತ್ತಿದೆ.
ನಗರದ ಗೊಟ್ಟಿಗೆರೆಯಿಂದ ನಾಗವಾರದವರೆಗೆ ಸುಮಾರು 13 ಕಿ.ಮೀ ಉದ್ದದ ಸುರಂಗ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಸುರಂಗ ಕೊರೆಯುವ ಯಂತ್ರಗಳನ್ನು ಚೀನಾದಿಂದ ತರಿಸಿಕೊಳ್ಳಬೇಕಾಗಿದೆ. ಈ ಕಾಮಗಾರಿ ಗುತ್ತಿಗೆಯನ್ನು ಎಲ್ ಆ್ಯಂಡ್ ಟಿ ಕಂಪನಿಗೆ ನೀಡಲಾಗಿದೆ. ಈ ಕಂಪನಿ ಚೀನಾದಿಂದ 4 ಟಿಬಿಎಂಗಳನ್ನು ತರಿಸುತ್ತಿದೆ. ಇದರಲ್ಲಿ 2 ಟಿಬಿಎಂಗಳು ಈಗಾಗಲೇ ಚೆನ್ನೈ ಬಂದರು ಬಂದು ತಲುಪಿವೆ. ಆದರೆ ಬರಬೇಕಾದ ಇನ್ನೆರೆಡು ಟಿಬಿಎಂ ಯಂತ್ರಗಳು ಚೀನಾದಿಂದ ಸಾಗಾಣೆಯಾಗಿಲ್ಲ.
Advertisement
ಜೊತೆಗೆ ಚೀನಾದಲ್ಲಿ ವೀಸಾಗೆ ನಿರ್ಬಂಧ ವಿಧಿಸಿರುವುದರಿಂದ, ಈ ಕಾಮಗಾರಿ ವೀಕ್ಷಿಸಲು ಚೀನಾದ ತಜ್ಞರ ತಂಡದ ಆಗಮನವೂ ವಿಳಂಬವಾಗಿದೆ. ಈ ಕೊರೊನಾ ಸಮಸ್ಯೆ ಆಗದಿದ್ದರೆ, ಈ ಟಿಬಿಎಂ ಯಂತ್ರಗಳು ಜನವರಿಯಲ್ಲೇ ಕೆಲಸ ಆರಂಭಿಸಬೇಕಿತ್ತು.