ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಬಹು ನಿರೀಕ್ಷಿತ ಮೆಟ್ರೋ ಮಾರ್ಗ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿ ಒಂದು ವರ್ಷ ಕಳೆದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ (Narendra Modi) ಶಂಕುಸ್ಥಾಪನೆಯನ್ನು ಮಾಡಿದ್ದರು. ಆದರೆ ಬಿಎಂಆರ್‌ಎಲ್ (BMRCL) ಅಧಿಕಾರಿಗಳು ಕಾಮಗಾರಿ ಆರಂಭಿಸಲು ಮುಂದಾಗ್ತಿಲ್ಲ. ಕಾಮಗಾರಿ ವಿಳಂಬ ನೂರಾರು ಕೋಟಿ ರೂ. ನಷ್ಟಕ್ಕೆ ಕಾರಣವಾಗ್ತಿದೆ.
ಆರೆಂಜ್ ಲೈನ್ ಮೆಟ್ರೋ (Namma Metro Orange Line) ಕಾಮಗಾರಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿ ಒಂದು ವರ್ಷ ಕಳೆದರು ಆರೆಂಜ್ ಲೈನ್ ಮೆಟ್ರೋ ಕಾಮಗಾರಿ ಮಾಡಲು ನಮ್ಮ ಮೆಟ್ರೋ ಟೆಂಡರ್ ಕರೆಯಲು ಮುಂದಾಗಿಲ್ಲ. ಕೇಂದ್ರ ಸರ್ಕಾರ ಅನುಮತಿ ನೀಡಿ ಒಂದು ವರ್ಷ 123 ದಿನಗಳು ಕಳೆದಿವೆ. ಮೆಟ್ರೋ ಕಾಮಗಾರಿ ಮಾತ್ರ ಶುರು ಮಾಡಲು ಮುಂದಾಗ್ತಿಲ್ಲ. ಒಂದು ದಿನ ಕಾಮಗಾರಿ ಮಾಡಲು ವಿಳಂಬವಾದ್ರೆ ಬಿಎಂಆರ್‌ಸಿಎಲ್‍ಗೆ ಸುಮಾರು 2 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ. 487 ದಿನ ವಿಳಂಬವಾಗಿರೋದಕ್ಕೆ 974 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆಯಂತೆ.
ಆಗಸ್ಟ್ 16. 2024ಕ್ಕೆ ಕೇಂದ್ರ ಸರ್ಕಾರ ಮೂರನೇ ಹಂತ ಆರೆಂಜ್ ಲೈನ್‍ಗೆ ಅನುಮತಿ ನೀಡಿತ್ತು. ಇಲ್ಲಿಯವರೆಗೆ ನಮ್ಮ ಮೆಟ್ರೋ ಅಧಿಕಾರಿಗಳು ಸಿವಿಲ್ ವರ್ಕ್ ಮಾಡಲು ಟೆಂಡರ್ ಕರೆಯಲು ಮುಂದಾಗಿಲ್ಲ. ರಾಜ್ಯ ಸರ್ಕಾರ ಇಡೀ ಮಾರ್ಗವನ್ನು ಡಬ್ಬಲ್ ಡೆಕ್ಕರ್ ಮಾಡಲು ತೀರ್ಮಾನ ಮಾಡಿದೆ. ಪರಿಣಾಮ ಕಾಮಗಾರಿಗೆ ಹೆಚ್ಚುವರಿ 9 ಸಾವಿರ ಕೋಟಿ ರೂ. ಬೇಕಾಗಲಿದೆ. ಇದೇ ಕಾರಣಕ್ಕೆ ಸದ್ಯ ಟೆಂಡರ್ ಪ್ರಕ್ರಿಯೆ ವಿಳಂಬವಾಗ್ತಿದೆ ಎನ್ನಲಾಗಿದೆ. ಇದರಿಂದ ಮೆಟ್ರೋ ಕಾಮಗಾರಿ ಸಾವಿರಾರು ಕೋಟಿ ರೂ. ಟೆಂಡರ್ ಕಾಸ್ಟ್ ಹೆಚ್ಚಾಗಲಿದ್ಯಂತೆ. 15,611 ಕೋಟಿ ರೂ. ವೆಚ್ಚದಲ್ಲಿ ನಡೆಯಲಿರುವ ಆರೆಂಜ್ ಲೈನ್ ಮೆಟ್ರೋ ಕಾಮಗಾರಿಗೆ ಇನ್ನೂ ಹೆಚ್ಚುವರಿ 500 ಕೋಟಿ ರೂ. ಹೊರೆಯಾಗಲಿದೆ. ಇದನ್ನೂ ಓದಿ: ತುಮಕೂರಿಗೆ ಮೆಟ್ರೋ – ಡಿಪಿಆರ್ ತಯಾರಿಸಲು ಟೆಂಡರ್ ಕರೆದ BMRCL
ಮೆಟ್ರೋ ಕಿತ್ತಳೆ ಮಾರ್ಗ ಎಲ್ಲಿಂದ ಎಲ್ಲಿಗೆ
– ಕಾರಿಡಾರ್-1:- ಜೆಪಿ ನಗರ ಟು ಕೆಂಪಾಪುರ 32.15 ಕಿ.ಮೀ
– ಕಾರಿಡಾರ್-2:- ಹೊಸಹಳ್ಳಿ ಟು ಕಡಬಗೆರೆ 12.50 ಕಿ.ಮೀ
– ಒಟ್ಟು ವಿಸ್ತೀರ್ಣ:- 44.65 ಕಿ.ಮೀ

